Showing posts with label ಯಾದವ ಯದುಕುಲ ಬಾಲನೆ ಬಾರೋ govinda YAADAVA YADUKULA BAALANE BAARO. Show all posts
Showing posts with label ಯಾದವ ಯದುಕುಲ ಬಾಲನೆ ಬಾರೋ govinda YAADAVA YADUKULA BAALANE BAARO. Show all posts

Monday, 6 December 2021

ಯಾದವ ಯದುಕುಲ ಬಾಲನೆ ಬಾರೋ ankita govinda YAADAVA YADUKULA BAALANE BAARO



by ಗೋವಿಂದದಾಸ
ಯಾದವ ಯದುಕುಲ ಬಾಲನೆ ಬಾರೋಮಾಧವಮದನಗೋಪಾಲನೆ ಬಾರೋ ಪ

ಸಾಧುಗಳೊಡೆಯ ಯಶೋದೆ ನಂದನೆ ಬಾರೋಶ್ರೀಧರ ಸುಗುಣ ಶರೀರನೆ ಬಾರೋ ಅ.ಪ

ಮನೆಮನೆಯೊಳು ಮೊಸರ ಕಡೆವರು ಬಾರೋವನಜಾಕ್ಷಿಯರು ಬೆಣ್ಣೆ ಕೊಡುವರು ಬಾರೋತನಯರೊಡನೆ ಚಂಡಿನಾಟವಾಡಲು ಬಾರೋಕೊನೆ ಬೆರಳೊಳು ಪಿಡಿದ ಕೊಳಲನೂದುತ ಬಾರೋ 1

ಸುರರುನಾರದರೆಲ್ಲ ಸ್ಮರಿಸುವರ್ ಬಾರೋಕರವಮುಗಿವೆ ನಿನ್ನ ಚರಣಕ್ಕೆ ಬಾರೋನರನಸಾರಥಿಕೃಷ್ಣ ಹರುಷದಿ ಬಾರೋ 2

ಪಾಂಡುಪುತ್ರರ ಪಾಲ ಪಾಹಿಯೆಂಬೆನು ಬಾರೋಕಂಡು ರಕ್ಷಿಸೋ ಎನ್ನಕಮಲನಯನ ಬಾರೋಪಂಡರೀಪುರವಾಸ ಚಂಡವಿಕ್ರಮ ಬಾರೋಅಂಡಜವಾಹನಮಾರ್ತಾಂಡನಂತಿಳಿದು ಬಾರೋ 3

ಗಂಧಚಂದನ ಪುಷ್ಪದಿಂದ ಪೂಜಿಪೆ ಬಾರೋಸುಂದರ ಚಿನುಮಯ ಮೂರ್ತಿಯೆ ಬಾರೋಮಂದರಧರಮದನಜನಕನೆ ಬಾರೋಇಂದಿರೆಯರಸ ಗೋವಿಂದನೆ ಬಾರೋ 4
***