Showing posts with label ಮನ್ನಿಸು ಮಾರಾರಿ ಮುದದಿಂದಲಿ ಎನ್ನ vijaya vittala. Show all posts
Showing posts with label ಮನ್ನಿಸು ಮಾರಾರಿ ಮುದದಿಂದಲಿ ಎನ್ನ vijaya vittala. Show all posts

Thursday, 17 October 2019

ಮನ್ನಿಸು ಮಾರಾರಿ ಮುದದಿಂದಲಿ ಎನ್ನ ankita vijaya vittala

ವಿಜಯದಾಸ
ಮನ್ನಿಸು ಮಾರಾರಿ ಮುದದಿಂದಲಿ ಎನ್ನ |
ಯಿನ್ನು ದುರಿತಗಳನ್ನ ಹಾರಿಸಿ |
ಎನ್ನನನುದಿನ ಪ

ಅಮಿಶ್ರ ತತ್ವದಲಿ ಕಲಿ ವಿರಹಿತ ರುದ್ರ |
ಹಮ್ಮಿನಿಂದಿತ್ತ ಸರ್ವವ ನೋಳ್ಪನೆ |
ಬೊಮ್ಮನಾ ತತ್ವದಲಿ ಹೋಗಿಬರುವ ಪ್ರಬಲ್ಯ |
ಉಮ್ಮೆಯರಸಾ ತಾಮಸ ಕಾರ್ಯದಧಿಪತಿ |
ಒಮ್ಮೆ ಬಿಡದಲೆ ನರಹರಿಯ ನಾ |
ಮಾಮ್ಮರತ ಮನದಲಿ ನೆನಸುವ ಸುಖದಿಂದಲಿ |
ಅಮ್ಮಹಾ ವೈರಾಗ್ಯ ಭಾಗ್ಯವ |
ಕಮ್ಮರದಿ ಕೊಡು ಕರುಣದಿಂದಲಿ 1

ನಂದಿವಾಹನ ನಾಗತಲ್ಪ ಕಲ್ಪಾಂತರ |
ಚಂದಿರಮವ್ಯಾಳಿ ಚರ್ಚಕನಾಯಕ |
ಕುಂದುಗೊರಳ ನೀಲಕಂಠಾಗಮನೈಯ್ಯ |
ವಂದೀರೈದು ಸ್ಥಾನ ವಾಸವಾದ್ಯ ||
ಇಂದು ನಿನ್ನ ಪಾದದ್ವಂದ್ವ ನಂಬಿದೆ |
ನಿಂದಕರ ಸಂಗತಿ ಸಂಗತಿಯಲಿಡದಲೇ |
ಪೊಂದಿಸೋಮ ಜನರೊಳಗೆ ಎರ |
ಡೊಂದುಪುರ ವಿನಾಶಾ ಈಶಾ 2

ನಿಖಿಳ ಶಾಂತ |
ನಿಟಿಲನೇತ್ರ |
ಮಂಗಳಾಂಗ ಶ್ರೀ ವಿಜಯವಿಠ್ಠಲನ |
ಹಿಂಗದೆ ಮನದಲ್ಲಿ ನೆನೆಸುವರ |
ಸಂಗಸುಖ ಸರ್ವದಾ ಸುಜನಪಾಲಕ |
ಪೊಂಗರ್ಭಸುತ ಪತಿತ ಪಾವನ 3
*********