Showing posts with label ಹರಿಕಥಾಮೃತಸಾರ ಸಂಧಿ 17 ankita jagannatha vittala ಸ್ವಗತಸ್ವಾತಂತ್ರ್ಯ ಸಂಧಿ HARIKATHAMRUTASARA SANDHI 17 SWAGATA SWATANTRA SANDHI. Show all posts
Showing posts with label ಹರಿಕಥಾಮೃತಸಾರ ಸಂಧಿ 17 ankita jagannatha vittala ಸ್ವಗತಸ್ವಾತಂತ್ರ್ಯ ಸಂಧಿ HARIKATHAMRUTASARA SANDHI 17 SWAGATA SWATANTRA SANDHI. Show all posts

Wednesday, 27 January 2021

ಹರಿಕಥಾಮೃತಸಾರ ಸಂಧಿ 17 ankita jagannatha vittala ಸ್ವಗತಸ್ವಾತಂತ್ರ್ಯ ಸಂಧಿ HARIKATHAMRUTASARA SANDHI 17 SWAGATA SWATANTRA SANDHI

    

Audio by Mrs. Nandini Sripad


ರಚನೆ : ಶ್ರೀ ಜಗನ್ನಾಥ ದಾಸರು 
for saahitya click   ಹರಿಕಥಾಮೃತಸಾರ ಸಂಧಿ 1 to 32  


ಶ್ರೀಜಗನ್ನಾಥದಾಸಾರ್ಯ ವಿರಚಿತ ಹರಿಕಥಾಮೃತಸಾರ , 

 ಸ್ವಗತಸ್ವಾತಂತ್ರ್ಯ ಸಂಧಿ , ರಾಗ ಚಾರುಕೇಶಿ


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು||


ಸ್ವಗತಸ್ವಾತಂತ್ರ್ಯ ಗುಣವ ಹರಿ ತೆಗೆದು ಬ್ರಹ್ಮಾದ್ಯರಿಗೆ ಕೊಟ್ಟದು

ಭೃಗು ಮುನಿಪ ಪೇಳಿದನು ಇಂದ್ರದ್ಯುಮ್ನ ಕ್ಷಿತಿಪನಿಗೆ||


ಪರಮ ವಿಷ್ಣು ಸ್ವತಂತ್ರ ಮಾಯಾ ತರುಣಿ ವಕ್ಷಸ್ಥಳ ನಿವಾಸಿ

ಸರಸಿಜೋದ್ಭವ ಪ್ರಾಣರೀರ್ವರು ಸಚಿವರು ಎನಿಸುವರು

ಸರ್ವ ಕರ್ಮಗಳಲ್ಲಿ ತತ್ಪ್ರಿಯರು ಉರಗ ಭೂಷಣ ಅಹಂಕೃತಿತ್ರಯ

ಕರೆಸುವ ಅಮರೇಂದ್ರ ಅರ್ಕ ಮುಖರು ಇಂದ್ರಿಯಪರು ಎನಿಸುವರು||1||


ಈ ದಿವೌಕಸರ ಅಂತೆ ಕಲಿ ಮೊದಲಾದ ದೈತ್ಯರು ಸರ್ವ ದೇಹದಿ ತೋದಕರು ತಾವಾಗಿ

ವ್ಯಾಪಾರಗಳ ಮಾಡುವರು

ವೇಧನಾಂದದಿ ಕಲಿಯು ಅಹಂಕಾರಾಧಿಪ ಅಧಮ ಮಧುಕುಕೈಟಭ

ಕ್ರೋಧಿಶಂಭರ ಮುಖರು ಮನಸಿಗೆ ಸ್ವಾಮಿಯೆನಿಸುವರು||2||


ದೇವತೆಗಳ ಉಪಾಧಿ ನಿತ್ಯದಿ ಏವಮಾದಿ ನಾಮದಿಂದಲಿ

ಯಾವದಿಂದ್ರಿಯಗಳಲಿ ವ್ಯಾಪಾರಗಳ ಮಾಡುವರು

ಸೇವಕರ ಸೇವ ಅನುಗುಣ ಫಲವೀವ ನ್ರುಪನಂದದಲಿ

ತನ್ನ ಸ್ವಭಾವ ಸ್ವಾತಂತ್ರ್ಯ ವಿಭಾಗವ ಮಾಡಿಕೊಟ್ಟ ಹರಿ||3||


ಅಗಣಿತ ಸ್ವಾತಂತ್ರ್ಯವ ನಾಲ್ಬಗೆ ವಿಭಾಗವ ಮಾಡಿ

ಒಂದನುತೆಗೆದು ದಶವಿಧಗೈಸಿ ಪಾದರೆ ಪಂಚ ಪ್ರಾಣನಲಿ

ಮೊಗ ಚತುಷ್ಟಯನೊಳು ಸಪಾದೈದು ಗುಣವಿರಸಿದ

ಮತ್ತೆ ದಶ ವಿಧಯುಗಳ ಗುಣವನ್ನು ಮಾಡಿ ಎರಡು ಸದಾ ಶಿವನೊಳಿಟ್ಟ||4||


ಪಾಕಶಾಸನ ಕಾಮರೊಳು ಸಾರ್ಧೈಕವಿಟ್ಟ ದಶ ಇಂದ್ರಿಯರ

ಸುದಿವೌಕಸಾದ್ಯರೊಳೊಂದು ಯಾವಜ್ಜೀವರೊಳಗೊಂದು

ನಾಲ್ಕೂವರೆ ಕಲ್ಯಾದಿ ದೈತ್ಯಾನೀಕಕಿತ್ತನು

ಎರಡು ತ್ರಿವಿಧ ವಿವೇಕಗೈಸಿ ಇಂದಿರಗೊಂದು ಎರಡು ಆತ್ಮ ತನ್ನೊಳಗೆ||5||


ಈ ವಿಧದಿ ಸ್ವಾತಂತ್ರ್ಯವ ದೇವ ಮಾನವ ದಾನವರೊಳು

ರಮಾ ವಿನೋದಿ ವಿಭಾಗ ಮಾಡಿಟ್ಟು ಅಲ್ಲೇ ರಮಿಸುವನು

ಮೂವರೊಳಗಿದ್ದು ಅವರ ಕರ್ಮವ ತಾ ವಿಕಾರವಗೈಸದಲೆ

ಕಲ್ಪವಸಾನಕೆ ಕೊಡುವನು ಅನಾಯಾಸ ಅವರ ಗತಿಯ||6||


ಆಲಯಗಳೊಳಿಪ್ಪ ದೀಪ ಜ್ವಾಲೆ ವರ್ತಿಗಳನುಸರಿಸಿ ಜನರ ಆಲಿಗೊಪ್ಪುವ ತೆರದಿ

ಹರಿ ತಾ ತೋರ್ಪ ಸರ್ವತ್ರ

ಕಾಲ ಕಾಲದಿ ಶ್ರೀಧರಾ ದುರ್ಗಾ ಲಲನೆಯರ ಕೂಡಿ ಸುಖಮಯ ಲೀಲೆಗೈಯಲು

ತ್ರಿಗುಣ ಕಾರ್ಯಗಳಿಹವು ಜೀವರಿಗೆ||7||


ಇಂದ್ರಿಯಗಳಿಂ ಮಾಳ್ಪ ಕರ್ಮ ದ್ವಂದ್ವಗಳ ತನಗರ್ಪಿಸಲು

ಗೋವಿಂದ ಪುಣ್ಯವ ಕೊಂಡು ಪಾಪವ ಭಸ್ಮವನೆ ಮಾಳ್ಪ

ಇಂದಿರೇಶನು ಭಕ್ತ ಜನರನು ನಿಂದಿಸುವರೊಳಗಿಪ್ಪ

ಪುಣ್ಯವ ತಂದು ತನ್ನವಗೀವ ಪಾಪಗಳ ಅವರಿಗುಣಿಸುವನು||8||


ಹೊತ್ತು ಒಟ್ಟಿಗೆ ಪಾಪ ಕರ್ಮ ಪ್ರವರ್ತಕರ ನಿಂದಿಸದೆ

ತನಗಿಂದ ಉತ್ತಮರ ಗುಣ ಕರ್ಮಗಳ ಕೊಂಡಾಡದಲಿಪ್ಪ ಮರ್ತ್ಯರಿಗೆ

ಗೋಬ್ರಾಹ್ಮಣ ಸ್ತ್ರೀ ಹತ್ಯ ಮೊದಲಾದ ಅಖಿಳ ದೋಷಗಳಿತ್ತಪನು

ಸಂದೇಹ ಪಡಸಲ್ಲ ಅಖಿಳ ಶಾಸ್ತ್ರಮತ||9||


ತನ್ನ ಸ್ವಾತಂತ್ರ್ಯ ಗುಣಗಳ ಹಿರಣ್ಯ ಗರ್ಭಾದ್ಯರಿಗೆ

ಕಲಿಮುಖ ದಾನವರ ಸಂತತಿಗೆ ಅವರಧಿಕಾರವ ಅನುಸರಿಸಿ

ಪುಣ್ಯ ಪಾಪಗಳೀವ ಬಹು ಕಾರುಣ್ಯ ಸಾಗರನು

ಅಲ್ಪಶಕ್ತಿಗಳ ಉಣ್ಣಲರಿಯದಿರಲು ಉಣ ಕಲಿಸಿದನು ಜೀವರಿಗೆ||10||


ಸತ್ಯ ವಿಕ್ರಮ ಪುಣ್ಯ ಪಾಪ ಸಮಸ್ತರಿಗೆ ಕೊಡಲೋಸುಗದಿ

ನಾಲ್ವತ್ತು ಭಾಗವ ಮಾಡಿ ಲೇಶಾಂಶವನು ಜನಕೀವ

ಅತ್ಯಲ್ಪ ಪರಮಾಣು ಜೀವಗೆ ಸಾಮರ್ಥ್ಯವನು ತಾ ಕೊಟ್ಟು

ಸ್ಥೂಲ ಪದಾರ್ಥಗಳ ಉಂಡು ಉಣಿಪ ಸರ್ವದಾಸರ್ವ ಜೀವರಿಗೆ||11||


ತಿಮಿರ ತರಣಿಗಳು ಏಕ ದೇಶದಿ ಸಮನಿಸಿಪ್ಪವೆ ಎಂದಿಗಾದರು?

ಭ್ರಮಣ ಛಳಿ ಬಿಸಲು ಅಂಜಿಕೆಗಳುಂಟೇನೋ ಪರ್ವತಕೆ?

ಅಮಿತ ಜೀವರೊಳಿದ್ದು ಲಕ್ಷ್ಮೀ ರಮಣ ವ್ಯಾಪಾರಗಳ ಮಾಡುವ

ಕಮಲಪತ್ರ ಸರೋವರಗಳೊಳಗಿಪ್ಪ ತೆರದಂತೆ||12||


ಅಂಬುಜೋದ್ಭವ ಮುಖ್ಯ ಸುರಾ ಕಲಿ ಶಂಬರಾದಿ ಸಮಸ್ತ ದೈತ್ಯ ಕದಂಬಕೆ

ಅನುದಿನ ಪುಣ್ಯ ಪಾಪ ವಿಭಾಗವನೆ ಮಾಡಿ

ಅಂಬುಧಿಯ ಜಲವನು ಮಹದ್ಘಟ ದಿಂಬನಿತು ತುಂಬುವ ತೆರದಿ

ಪ್ರತಿ ಬಿಂಬರೊಳು ತಾನಿದ್ದು ಯೋಗ್ಯತೆಯಂತೆ ಫಲವೀವ||13||


ಇನಿತು ವಿಷ್ಣು ರಹಸ್ಯದೊಳು ಭ್ರುಮು ಮುನಿಪ ಇಂದ್ರದ್ಯುಮ್ನಗೆ ಅರುಪಿದದನು

ಬುಧರು ಕೇಳುವುದು ನಿತ್ಯದಿ ಮತ್ಸರವ ಬಿಟ್ಟು

ಅನುಚಿತೋಕ್ತಿಗಳಿದ್ದರೆಯು ಸರಿಯೆ ಗಣನೆ ಮಾಡದಿರೆಂದು

ವಿದ್ವದ್ ಜನಕೆ ವಿಜ್ಞಾಪನೆಯ ಮಾಡುವೆ ವಿನಯ ಪೂರ್ವಕದಿ||13||


ವೇತ ಭಯ ವಿಶ್ವೇಶ ವಿಧಿ ಪಿತ ಮಾತುಳಾಂತಕ ಮಧ್ವ ವಲ್ಲಭ

ಭೂತ ಭಾವನ ಅನಂತ ಭಾಸ್ಕರ ತೇಜ ಮಹಾರಾಜ

ಗೌತಮನ ಮಡದಿಯನು ಕಾಯ್ದ ಅನಾಥ ರಕ್ಷಕ

ಗುರುತಮ ಜಗನ್ನಾಥ ವಿಠಲ ತನ್ನ ನಂಬಿದ ಭಕುತರನು ಪೊರೆವ||14||

********


harikathAmRutasAra gurugaLa karuNadindApanitu kELuve

parama BagavadBaktaru idanAdaradi kELuvudu||


svagatasvAtantrya guNava hari tegedu brahmAdyarige koTTadu

BRugu munipa pELidanu indradyumna kShitipanige||


parama viShNu svatantra mAyA taruNi vakShasthaLa nivAsi

sarasijOdBava prANarIrvaru sacivaru enisuvaru

sarva karmagaLalli tatpriyaru uraga BUShaNa ahaMkRutitraya

karesuva amarEndra arka muKaru iMdriyaparu enisuvaru||1||


I divaukasara ante kali modalAda daityaru sarva dEhadi tOdakaru tAvAgi

vyApAragaLa mADuvaru

vEdhanAMdadi kaliyu ahankArAdhipa adhama madhukukaiTaBa

krOdhiSaMBara muKaru manasige svAmiyenisuvaru||2||


dEvategaLa upAdhi nityadi EvamAdi nAmadiMdali

yAvadindriyagaLali vyApAragaLa mADuvaru

sEvakara sEva anuguNa PalavIva nrupanaMdadali

tanna svaBAva svAtantrya viBAgava mADikoTTa hari||3||


agaNita svAtantryava nAlbage viBAgava mADi

oMdanutegedu daSavidhagaisi pAdare panca prANanali

moga catuShTayanoLu sapAdaidu guNavirasida

matte daSa vidhayugaLa guNavannu mADi eraDu sadA SivanoLiTTa||4||


pAkaSAsana kAmaroLu sArdhaikaviTTa daSa iMdriyara

sudivaukasAdyaroLondu yAvajjIvaroLagoMdu

nAlkUvare kalyAdi daityAnIkakittanu

eraDu trividha vivEkagaisi indiragondu eraDu Atma tannoLage||5||


I vidhadi svAtantryava dEva mAnava dAnavaroLu

ramA vinOdi viBAga mADiTTu allE ramisuvanu

mUvaroLagiddu avara karmava tA vikAravagaisadale

kalpavasAnake koDuvanu anAyAsa avara gatiya||6||


AlayagaLoLippa dIpa jvAle vartigaLanusarisi janara Aligoppuva teradi

hari tA tOrpa sarvatra

kAla kAladi SrIdharA durgA lalaneyara kUDi suKamaya lIlegaiyalu

triguNa kAryagaLihavu jIvarige||7||


indriyagaLiM mALpa karma dvandvagaLa tanagarpisalu

gOvinda puNyava konDu pApava Basmavane mALpa

indirESanu Bakta janaranu nindisuvaroLagippa

puNyava tandu tannavagIva pApagaLa avariguNisuvanu||8||


hottu oTTige pApa karma pravartakara nindisade

tanaginda uttamara guNa karmagaLa konDADadalippa martyarige

gObrAhmaNa strI hatya modalAda aKiLa dOShagaLittapanu

sandEha paDasalla aKiLa SAstramata||9||


tanna svAtantrya guNagaLa hiraNya garBAdyarige

kalimuKa dAnavara santatige avaradhikArava anusarisi

puNya pApagaLIva bahu kAruNya sAgaranu

alpaSaktigaLa uNNalariyadiralu uNa kalisidanu jIvarige||10||


satya vikrama puNya pApa samastarige koDalOsugadi

nAlvattu BAgava mADi lESAMSavanu janakIva

atyalpa paramANu jIvage sAmarthyavanu tA koTTu

sthUla padArthagaLa unDu uNipa sarvadAsarva jIvarige||11||


timira taraNigaLu Eka dESadi samanisippave endigAdaru?

BramaNa CaLi bisalu anjikegaLuMTEnO parvatake?

amita jIvaroLiddu lakShmI ramaNa vyApAragaLa mADuva

kamalapatra sarOvaragaLoLagippa teradaMte||12||


aMbujOdBava muKya surA kali SaMbarAdi samasta daitya kadaMbake

anudina puNya pApa viBAgavane mADi

aMbudhiya jalavanu mahadGaTa diMbanitu tuMbuva teradi

prati biMbaroLu tAniddu yOgyateyante PalavIva||13||


initu viShNu rahasyadoLu Brumu munipa iMdradyumnage arupidadanu

budharu kELuvudu nityadi matsarava biTTu

anucitOktigaLiddareyu sariye gaNane mADadireMdu

vidvad janake vij~jApaneya mADuve vinaya pUrvakadi||13||


vEta Baya viSvESa vidhi pita mAtuLAntaka madhva vallaBa

BUta BAvana ananta BAskara tEja mahArAja

gautamana maDadiyanu kAyda anAtha rakShaka

gurutama jagannAtha viThala tanna naMbida Bakutaranu poreva||14||

***

ಮನ ಹರಿಯಲಿ ಶ್ರೀಹರಿಕಥಾ ಮೃತದ ಸಾರದ ಕಡೆಗೆ.. 

(ಸ್ವಗತ ಸ್ವಾತಂತ್ರ್ಯ ಸಂಧಿ )


1.  ಪರಮಾತ್ಮನ ಸ್ವಾತಂತ್ರ್ಯ ಗುಣ ಎಂದರೇನು  ?


ಇತರರ ಸಹಾಯವಿಲ್ಲದೆ ತಾನೇ  ತನ್ನ ಕತೃತ್ವ ಶಕ್ತಿಯನ್ನು ಕ್ರಿಯಾತ್ಮಕವಾಗಿ ಮಾಡಿ,  ತನ್ನ ಇಚ್ಛಾನುಸಾರ ಕಾರ್ಯ ಮಾಡವ ಉದ್ದೇಶ ಗುಣಕ್ಕೆ ಸ್ವಾತಂತ್ರ್ಯ ಎಂದು ಹೆಸರು.  ಇದೊಂದು ಧರ್ಮ.  


2. ಜೀವನ ಸ್ವಾತಂತ್ರ್ಯ ಎಂದರೇನು  ?  


ಜೀವನ ಸ್ವಾತಂತ್ರ್ಯ ಪರಾದೀನ ವಾಗಿದೆ.  ಪರಾ ಎಂದರೆ ಸರ್ವೋತ್ತಮ ಎಂದರ್ಥ.  ಅಂದರೆ ಪರಮಾತ್ಮನ ಅಧೀನವಾಗಿದೆ . 


3. ಜೀವರಿಗೆ ಕರ್ತೃತ್ವ ಶಕ್ತಿ ಇದೆಯೇ  ? 


ಜೀವರಿಗೆ ಕರ್ತೃತ್ವ  ಶಕ್ತಿಯು ಶಕ್ತ್ಯಾತ್ಮಕವಾಗಿದೆ. ಅದು ಕ್ರಿಯಾತ್ಮಕವಾಗ ಬೇಕಾದರೆ ಶ್ರೀಹರಿಯ ಪ್ರೇರಣೆ ಯಾಗ ಬೇಕು. ಜಡ ವಸ್ತುಗಳಲ್ಲಿ ಇಲ್ಲದಿರುವ ಕರ್ತೃತ್ವ ಧರ್ಮವು ಜೀವರಲ್ಲಿದೆ.  ಆದ್ದರಿಂದ ಜಡ ದಿಂದ ಜೀವರು ಭಿನ್ನರಾಗಿದ್ದಾರೆ. 


4.  ಸ್ವಗತ ಸ್ವಾತಂತ್ರ್ಯ ಎಂದರೇನು  ? 


ಪರಮಾತ್ಮನೇ ನೇರವಾಗಿ ತಾನೇ ಮಾಡುವ ಕಾರ್ಯ ರೂಪ ಅಂದರೆ ಜೀವನ ಕಡೆಯಿಂದ ಪ್ರಯತ್ನ ಮಾಡಿಸಿ ಆ ಪ್ರಯತ್ನಾನುಸಾರ ಕಾರ್ಯ ನೆರವೇರಿಸದೆ ಇರುವುದು. ಇದೇ ಪಕ್ವಾ ಅಪಕ್ವ ಕಾಲದಲ್ಲಿ ಉಪಯೋಗಿಸತಕ್ಕದ್ದು. 


 5.  ದತ್ತ ಸ್ವಾತಂತ್ರ್ಯ ಎಂದರೇನು   ? 

 

" ಸ್ವತಂತ್ರೋ ಭಗವಾನ್ ವಿಷ್ಣುಹು "  ಅಂದರೆ ಭಗವಾನ್ ವಿಷ್ಣುವು ತನ್ನ ಸ್ವಾತಂತ್ರ್ಯ ದಿಂದಲೇ ಜೀವರ ಕರ್ತೃತ್ವವನ್ನು ಪ್ರಕಟಗೊಳಿಸಿ ಕ್ರಿಯಾತ್ಮಕ ವನ್ನಾಗಿ ಮಾಡು ವನು.  ಜೀವನ ಕರ್ತೃತ್ವದಲ್ಲಿ ಇಟ್ಟಿರುವ ಈ ಧರ್ಮಕ್ಕೆ ದತ್ತ ಸ್ವಾತಂತ್ರ್ಯವೆಂದು ಹೆಸರು.  ಅಂದರೆ ಜೀವರ ಮೋಕ್ಷ ಕಾಲದಲ್ಲಿ ದತ್ತ ಸ್ವತಂತ್ರ ಕಾರ್ಯವೂ,  ಸ್ಥಿತಿಕಾಲದಲ್ಲಿ ಪಕ್ವಾ ಪಕ್ವ ದಶಾಗಳಲ್ಲಿ ಸ್ವಗತ ಸ್ವತಂತ್ರವೂ,  ಸರ್ವಾ ದೇಶ ಕಾಲದಿಗಳಲ್ಲಿ,  ಜೀವ ಜಡಾದಿ  ಸಮಸ್ತ ಅಧಿಸ್ಥಾನಗಳಲ್ಲಿ , ಸರ್ವ ಸ್ವಾತಂತ್ರ್ಯ ಕಾರ್ಯವು  ಶ್ರೀ ಪರಮಾತ್ಮನಿಂದ ದತ್ತವಾಗಿ ಅಧಿಷ್ಠಾನನ್ಯಸ್ತವಾಗಿ ಉಪಯೋಗವಾಗುವುವು.

****** *