Showing posts with label ಕಂಜನಯ್ಯನ ಕಂಡೆ ಕಾಮನಯ್ಯನ hayavadana KANJANAYYANA KANDE KAAMAYYANA. Show all posts
Showing posts with label ಕಂಜನಯ್ಯನ ಕಂಡೆ ಕಾಮನಯ್ಯನ hayavadana KANJANAYYANA KANDE KAAMAYYANA. Show all posts

Friday, 13 December 2019

ಕಂಜನಯ್ಯನ ಕಂಡೆ ಕಾಮನಯ್ಯನ ankita hayavadana KANJANAYYANA KANDE KAAMAYYANA

ವಾದಿರಾಜ ತೀರ್ಥರ ಕೃತಿ

ಮುಖ್ಯಪ್ರಾಣ ದೇವರು

ಕಂಜನಯ್ಯನ ಕಂಡೆ ಕಾಮನಯ್ಯನ
ಮಂಜುಗುಣಿಯೊಳಿಪ್ಪನ ತಿಮ್ಮಪ್ಪನ//

ಪುಟ್ಟ ಪಾವುಗೆಯೊಳ್ಮೆಟ್ಟಿ ತೊಟ್ಟುಂಬುಚಕ್ರವ
ಕಟ್ಟಿದ ಕಠಾರಿಯಿಂದ ದುಷ್ಟ ಹುಡಿಗುಟ್ಟುವ./೧//

ಚಕ್ರ ಶಂಖ ಧರನಾಗಿ ಕಕ್ಕಸರ ರಕ್ಕಸರ
ಶಿಕ್ಷಿಸಿ ಶಕ್ರಮುಖ್ಯರ ಅಕ್ಕರಿಂದ ರಕ್ಷಿಸುವ//೨//

ಆಗಮ ವೈರಿ ಯನು ಕೊಂದಾ ಹಯವದನನ್ನ
ಈಗ ಮಾನಿಸರಿಗೆ ಸೌಭಾಗ್ಯ ವೀವ ದೇವನ//.
****

just scroll down for other devaranama