Showing posts with label ಪಚ್ಚ ಪವಳದ ಕೋಲಅಚ್ಚ ಮುತ್ತಿನ ಕೋಲ ತುಚ್ಚಗೊಯ್ಸಿ ramesha. Show all posts
Showing posts with label ಪಚ್ಚ ಪವಳದ ಕೋಲಅಚ್ಚ ಮುತ್ತಿನ ಕೋಲ ತುಚ್ಚಗೊಯ್ಸಿ ramesha. Show all posts

Wednesday, 4 August 2021

ಪಚ್ಚ ಪವಳದ ಕೋಲಅಚ್ಚ ಮುತ್ತಿನ ಕೋಲ ತುಚ್ಚಗೊಯ್ಸಿ ankita ramesha

ಪಚ್ಚ ಪವಳದ ಕೋಲಅಚ್ಚ ಮುತ್ತಿನ ಕೋಲ ತುಚ್ಚಗೊಯ್ಸಿದ್ರೌಪತಿಗೆ ಹುಚ್ಚು ಹಿಡಿಸುವ ಕೋಲ ಪ.


ಧಿಟ್ಟೆರಿಬ್ಬರು ನಮಗೆ ಇಟ್ಟರು ಅಣೆಯ ಕೃಷ್ಣಯ್ಯ ಇದಕೆ ನಗಬಹುದು ಕೋಲಕೃಷ್ಣಯ್ಯ ಇದಕೆ ನಗಬಹುದು ಮುಯ್ಯವ ಕೊಟ್ಟುಬಾಹುದಕೆ ತಡವ್ಯಾಕೆ ಕೋಲ 1

ಜಾಣಿಯರಿಬ್ಬರು ನಮಗೆ ಆಣಿಯನಿಟ್ಟರು ವೇಣುಗೋಪಾಲ ನಗಬಹುದು ಕೋಲವೇಣುಗೋಪಾಲ ನಗಬಹುದು ಮುಯ್ಯವ ಕ್ಷಣದೊಳು ನಾವು ತಿರುಗಿಸುವೆವು ಕೋಲ2

ಹರಿಯ ತಂಗಿಯರ ಗರುವಿನ ಮುಯ್ಯವತಿರುಗಿಸಿ ಬಂದು ಉಣಬೇಕು ಕೋಲ ತಿರುಗಿಸಿ ಬಂದು ಉಣಬೇಕು ಎನುತಲೆ ಹರಿಣಾಕ್ಷಿ ಭಾಮೆ ನುಡಿದಳು ಕೋಲ3

ರಂಗರಾಯರ ಮುದ್ದು ತಂಗಿಯರ ಹಂಗಿನ ಮುಯ್ಯ ತಿರುಗಿಸುವೆ ಕೋಲ ಹಂಗಿನ ಮುಯ್ಯ ತಿರುಗಿಸುವೆ ಮುಖವ ಭಂಗಿಸಿ ಬಾಹೊ ಸಭೆಯೊಳು ಕೋಲ4

ಇಂತು ರಾಮೇಶನ ಕಾಂತೆಯರೆಂಬುವರ ಪಂಥವ ಬಿಡಿಸಿ ಬರಬೇಕು ಕೋಲಪಂಥವ ಬಿಡಿಸಿ ಬರಬೇಕು ಮುಯ್ಯದ ಭ್ರಾಂತಿಯ ಹಿಡಿಸಿ ಕೊಡಬೇಕು ಕೋಲ 5

****