ಬಾರೋ ಬಾರೋ ಪಾಂಡುರಂಗ ನೀನೇ ಗತಿ|
ತೋರೋ ತೋರೋ ನಿನ್ನ ಮುಖವ ರುಕ್ಮಿಣಿಪತಿ||
ಚಂದ್ರಭಾಗ ತೀರದಲ್ಲಿ ವಾಸವಾಗಿರುವಿ |
ಮಂದರ ಗಿರಿಧರ ಸಿಂಧು ಶಯನ ಅಂದವಾಗಿರುವಿ ||1||
ಶಂಖ ಚಕ್ರವನ್ನು ನೀನು ಎಲ್ಲಿ ಇಟ್ಟಿರುವಿ ?
ಟೊಂಕದ ಮೇಲೆ ಕೈಯನಿಟ್ಟು ಏಕೆ ನಿಂತಿರುವಿ ?||2||
ಭಕ್ತರನೆಲ್ಲ ಉದ್ಧರಿಸುವ ನೀನೆ ದೊರೆ |
ಭಕ್ತವತ್ಸಲ ನರಸಿಂಹವಿಠ್ಠಲ ಹರೆ||3||
*******
ಬಾರೋ ಬಾರೊ ಪಾಂಡುರಂಗ ನೀನೆ ಗತಿ||2||
ತೋರು ತೋರು ನಿನ್ನ ಮುಖವ ರುಕ್ಮಿಣಿ ಪತಿ||2||
ಬಾರೋ....ಬಾರೋ....
ಚಂದ್ರ ಭಾಗ ತೀರದಲ್ಲಿ ವಾಸವಾಗಿರುವಿ||2||
ಮಂದರ ಗಿರಿಧರ ಸಿಂಧುಶಯನ ಅಂದವಾಗಿರುವಿ
ಚಂದ್ರ ಭಾಗ ತೀರದಲ್ಲಿ ವಾಸವಾಗಿರುವಿ
ಮಂದರ ಗಿರಿಧರ ಸಿಂಧುಶಯನ ಅಂದವಾಗಿರುವಿ
ಚಂದ್ರ ಭಾಗ ತೀರದಲ್ಲಿ ವಾಸವಾಗಿರುವಿ
ಮಂದರ ಗಿರಿಧರ ಸಿಂಧುಶಯನ ಅಂದವಾಗಿರುವಿ
||ಬಾರೋ||
ಶಂಖ ಚಕ್ರವನ್ನು ನೀನು ಎಲ್ಲಿ ಇಟ್ಟಿರುವಿ||2||
ಟೊಂಕದ ಮೇಲೆ ಕೈಯನಿಟ್ಟು , ಏಕೆ ನಿಂತಿರುವಿ
ಶಂಖ ಚಕ್ರವನ್ನು ನೀನು ಎಲ್ಲಿ ಇಟ್ಟಿರುವಿ
ಟೊಂಕದ ಮೇಲೆ ಕೈಯನಿಟ್ಟು , ಏಕೆ ನಿಂತಿರುವಿ
ಶಂಖ ಚಕ್ರವನ್ನು ನೀನು ಎಲ್ಲಿ ಇಟ್ಟಿರುವಿ
ಟೊಂಕದ ಮೇಲೆ ಕೈಯನಿಟ್ಟು , ಏಕೆ ನಿಂತಿರುವಿ
||ಬಾರೋ||
ಭಕ್ತರನ್ನೆಲ್ಲಾ ಉದ್ಧರಿಸುವ ನೀನೆ ದೊರೆ||2||
ಭಕ್ತವತ್ಸಲ ನಾರಸಿಂಹ ವಿಠ್ಠಲ ಹರೆ
ಭಕ್ತರನ್ನೆಲ್ಲಾ ಉದ್ಧರಿಸುವ ನೀನೆ ದೊರೆ
ಭಕ್ತವತ್ಸಲ ನಾರಸಿಂಹ ವಿಠ್ಠಲ ಹರೆ
ಭಕ್ತರನ್ನೆಲ್ಲಾ ಉದ್ಧರಿಸುವ ನೀನೆ ದೊರೆ
ಭಕ್ತವತ್ಸಲ ನಾರಸಿಂಹ ವಿಠ್ಠಲ ಹರೆ
||ಬಾರೋ||
ಬಾರೋ.... ವಿಠಲಾ...ವಿಠ್ಠಲಾ....
ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ
*******