by ಪ್ರಸನ್ನವೆಂಕಟದಾಸರು
ಭಳಿ ಭಳಿರೆ ಬಲಭೀಮ ಭಳಿರೆ ಸದ್ಗುಣಧಾಮಭಳಿರೆ ದ್ರೌಪದಿನಾಥ ಭಳಿರೆ ಶ್ರೀಹರಿದೂತಭಳಿರೆ ಅಪ್ರತಿಚರಿತ ಭಳಿರೆ ಬಲದೇವಸುತಭಳಿರೆ ಭೂಮಿಪಲಲಾಮ ಭೀಮ ಪ.
ಯೋಚಿಸಿ ಖಳರು ನೆರೆದು ಭೂಚಕ್ರವಾಕ್ರಮಿಸೆಶ್ರೀ ಚಕ್ರಿ ದಯದಿ ಅಮೃತ ರೋಚಕುಲಜಾತ ಪಾಂಡು ಚಕ್ರವರ್ತಿ ಕಮಲಲೋಚನೆಯ ಪೃಥೋದರಾಬ್ಧಿ ಚಂದ್ರನಂತೆ ಜನಿಸಿಆ ಚಕ್ಷುವಿಹೀನ ಭವಾಬ್ಧಿಚೋರರೆದೆಶೂಲಗೋಚರಿಸುವಂತಿಳೆಗೆ ಸೂಚಿಸಿ ಮುಖೋದಯವಕೀಚಕ ಹಿಡಿಂಬ ಬಕ ನೀಚಮಾಗಧಮುಖರವಾಚಿಸಗುಡದೆ ಬಡಿದೆ ಭೀಮ 1
ಕೊಬ್ಬಿದ ಖಳರು ಧಾತ್ರಿಗುಬ್ಬಸವ ತೋರುತಿರೆಅಬ್ಬರದಿ ಕರದ ಗದೆಗ್ಹಬ್ಬದೌತಣವಿಡುತಒಬ್ಬೊಬ್ಬರೊಮ್ಮೆ ಹನ್ನಿಬ್ಬರನ ಕರೆದುಉಬ್ಬುಬ್ಬಿ ರಣದಿ ಕುಣಿದೆಹಬ್ಬಿ ಬಹ ನಾಗರಥನಿಬ್ಬರದ ಬಿಂಕದವರೆಬ್ಬಿಸಿ ನಭಕೆ ಚಿಮ್ಮಿ ಬೊಬ್ಬಿರಿದು ಕೌರವರನಿಬ್ಬಗೆದು ಡಾಕಿನಿಯ ಉಬ್ಬಿಸಿದೆ ನಿನಗೆಪಡಿಹೆಬ್ಬುಲಿಗಳುಂಟೆ ಜಗದಿ ಭೀಮ 2
ನಿರ್ಧರ ಪರಾಕ್ರಮ ಧನುರ್ಧರರ ಬೀಳ್ಗೆಡಹಿಸ್ವರ್ಧಾಮಗರು ತುತಿಸೆ ದುರ್ಧಾರ್ತರಾಷ್ಟ್ಟ್ರರಂದುರ್ಧಾಮಕೆಬ್ಬಟ್ಟಿದುರ್ಧರ್ಷಗುರುರಥವನೂಧ್ರ್ವಕ್ಕೊಗೆದುಲಿದು ಚೀರ್ದೆದುರ್ಧರ ಖಳಾನುಜನ ಮೂರ್ಧ ಕಾಲೊಳು ಮೆಟ್ಟಿಶಾರ್ದೂಲನಂದದಿ ಕೆಡದೊಡಲಿನಅರುಣಜಲಪೀರ್ದಂತೆ ತೋರ್ದೆ ಗೋವರ್ಧನಧರನನುಜÕವಾರ್ಧೀಸ್ಯರ್ಪಿಸಿದೆ ಮಝರೆ ಭೀಮ 3
ಕಡಲೊಡೆಯನೆಡೆಗೆ ಬಲುಕೆಡುನುಡಿಯ ನುಡಿದವರಪಿಡಿ ಪಿಡಿದು ಖಡುಗದಿಂ ಕಡಿಕಡಿದು ಕಡೆಗಾಲದಮೃಡಕೋಟಿಯಂದದಲಿ ಕಡುರೋಷದಡಿಗಡಿಗೆಘುಡುಘುಡಿಸಿ ಹುಡುಕಿ ತುಡುಕಿಷಡಕ್ಷೋಹಿಣಿ ಪಡೆಯ ಹುಡಿ ಹುಡಿಗುಟ್ಟಿ ಪೊಡವಿ ದಿಗ್ಗಡಣ ಜಯದಂತಿ ಧಿಮ್ಮಿಡಿಸಿ ಕರ್ಮಡು ಪೊಕ್ಕುಕಡುಗಲಿಯ ತೊಡೆಮುರಿಯೆ ನಡುಮುರಿಯೆ ಗದೆಯಿಂದಹೊಡೆದೆಶಸುಪಡೆದೆ ಜಗದಿ ಭೀಮ 4
ಅಪ್ಪಳಿಸಿ ಕುರುಪತಿಯ ಚಿಪ್ಪೊಡೆಯೆ ತಲೆದುಳಿದುಬಪ್ಪುವಾರುಷವೆಂಬ ಸುಪ್ತಸೂತ್ರದಿ ಅಜನಬೊಪ್ಪ ಕೃಷ್ಣನ ಕಟ್ಟುವ ಪರಾಕ್ರಮಿಗೆನುತಸುಪ್ರಾಯಶ್ಚಿತ್ತವೆನುತತಪ್ಪುಗಳನೊಂದೊಂದ ನೆಪ್ಪೆತ್ತಿ ತನ್ಮತಿಗೆಹೆಪ್ಪೆನುವ ವಾಗ್ಬಾಣ ಕುಪ್ಪಳಿಸಿ ಕೊಂದು ಶ್ರೇಯಃಪತಿ ಪ್ರಸನ್ವೆಂಕಟಾರ್ಪಣವ ಮಾಡಿ ವೈಷ್ಣವ ಪ್ರತತಿಯನು ಪೊರೆದೆ ಭೀಮ 5
********