Showing posts with label ನಾರಾಯಣ ಎನ್ನಬಾರದೆ ನಿಮ್ಮ ನಾಲಿಗೆಯೊಳು purandara vittala NARAYANA ENNABAARADE NIMMA NAALIGEYOLU. Show all posts
Showing posts with label ನಾರಾಯಣ ಎನ್ನಬಾರದೆ ನಿಮ್ಮ ನಾಲಿಗೆಯೊಳು purandara vittala NARAYANA ENNABAARADE NIMMA NAALIGEYOLU. Show all posts

Thursday, 30 December 2021

ನಾರಾಯಣ ಎನ್ನಬಾರದೆ ನಿಮ್ಮ ನಾಲಿಗೆಯೊಳು purandara vittala NARAYANA ENNABAARADE NIMMA NAALIGEYOLU





ABHIRAMA VADIRAJA SONNY 9 years 2018




ನಾರಾಯಣ ಎನ್ನಬಾರದೆ ನಿಮ್ಮ

ನಾಲಿಗೆಯೊಳು ಮುಳ್ಳು ಮುರಿದಿಹುದೆ , ಕಲ್ಲು ಜಡಿದಿಹುದೆ ||ಪ||

ವಾರಣಾಸಿಗೆ ಪೋಗಿ ದೂರ ಬಳಲೆಲೇಕೆ
ನೀರ ಕಾವಡಿ ಪೊತ್ತು ತಿರುಗಲೇಕೆ
ಊರೂರು ತಪ್ಪದೆ ದೇಶಾಂತರವೇಕೆ
ದಾರಿಗೆ ಸಾಧನವಲ್ಲವೆ ಹರಿನಾಮ ||

ನಿತ್ಯುಪವಾಸವಿದ್ದು ಹಸಿದು ಬಳಲಲೇಕೆ
ಮತ್ತೆ ಚಳಿಯೊಳು ಗಂಗೆ ಮುಳುಗಲೇಕೆ
ಹಸ್ತವ ಪಿಡಿದು ಮಾಡುವ ಜಪ ತಪವೇಕೆ
ಮುಕ್ತಿಗೆ ಸಾಧನವಲ್ಲವೆ ಹರಿನಾಮ ||

ಸತಿಸುತರನು ಬಿಟ್ಟು ಯತಿಗಳಾಶ್ರಮವೇಕೆ
ವ್ರತ ಕೃಚ್ಛ್ರ ನೇಮ ನಿಷ್ಠೆಗಳೇತಕೆ
ಪೃಥಿವಿಯೊಳಗೆ ನಮ್ಮ ಪುರಂದರವಿಠಲನ
ಅತಿಶಯದಿಂದೊಮ್ಮೆ ನೆನೆದರೆ ಸಾಲದೆ ||
****


ರಾಗ ಬಿಲಹರಿ ಆದಿತಾಳ (raga, taala may differ in audio)

pallavi

nArAyaNa enna bArade nimma nAligeyoLu muLLu muridihude kallu jaDidihude

caraNam 1

vAraNAsige bhOgi dura baLaleke nIra kAvaDi pottu tirugalEke
UrUru tappade dEshAntaraveke dArige sAdhanavallave harinAma

caraNam 2

nityOpavAsaviddu hasidu baLaleke matte caLiyoLu gange muLugaleke
hastava piDidu mADuva japa tapavEke muktige sAdhanavallave harinAma

caraNam 3

satisutaranu biTTu yatigaLAshramavEke vrata krcchara nEma niSTegaLEtake
pruthiyoLage namma purandara viTTalana atishayadindomme nenedare sAlade
***

ನಾರಾಯಣ ಎನ್ನಬಾರದೆ ನಿಮ್ಮ |
ನಾಲಿಗೆಯೊಳು ಮುಳ್ಳು ಮುರಿದಿಹುದೇ ? ಪ.

ವಾರಣಾಸಿಗೆ ಪೋಗಿ ದೂರ ಬಳಲಲೇಕೆ |ನೀರ ಕಾವಡಿಯನು ಪೊತ್ತು ತಿರುಗಲೇಕೆ ||ಊರುರು ತಪ್ಪದೆ ದೇಶಾಂತರವೇಕೆ |ದಾರಿಗೆ ಸಾಧನವಲ್ಲವೆ ಹರಿನಾಮ ? 1

ನಿತ್ಯ ಉಪವಾಸವಿದ್ದು ಹಸಿದು ಬಳಲಲೇಕೆ |ಮತ್ತೆ ಚಳಿಯೊಳು ಗಂಗೆ ಮುಳಗಲೇಕೆ ||ಹಸ್ತವ ಪಿಡಿದು ಮಾಡುವ ಜಪ - ತಪವೇಕೆಮುಕ್ತಿಗೆ ಸಾಧನವಲ್ಲವೇ ಹರಿನಾಮ ? 2

ಸತಿ - ಸುತರನು ಬಿಟ್ಟು ಯತಿಗಳಾಶ್ರಮವೇಕೆವ್ರತ - ಕೃಚ್ಛ್ರ ನೇಮ - ನಿಷ್ಟೆಗಳೇತಕೆ ||ಪೃಥಿವಿಯೊಳಗೆ ನಮ್ಮ ಪುರಂದರವಿಠಲನ |ಅತಿ ಭಕುತಿಯಿಂದೊಮ್ಮೆ ನೆನೆದರೆ ಸಾಲದೆ 3
*******