Showing posts with label ಗೋಕುಲರನ್ನ ಏಕೆನ್ನ ಕೈ ಬಿಡುವೆ others. Show all posts
Showing posts with label ಗೋಕುಲರನ್ನ ಏಕೆನ್ನ ಕೈ ಬಿಡುವೆ others. Show all posts

Friday, 27 December 2019

ಗೋಕುಲರನ್ನ ಏಕೆನ್ನ ಕೈ ಬಿಡುವೆ others

ರಾಗ ಅಸಾವೇರಿ ಆದಿತಾಳ

ಗೋಕುಲರನ್ನ ಏಕೆನ್ನ ಕೈ ಬಿಡುವೆ ||ಪ||

ನಾನು ಮಾಡಿದ ಪಾಪ ನರಕಸಾಧನವಾಯ್ತು
ಏನು ಗತಿಯೊ ಎನಗೆ ಭಕ್ತರ ಕಾಮಧೇನು ಮಾಡುವುದೇನಯ್ಯ ಕೃಷ್ಣಯ್ಯ ಎನ್ನ
ಹೀನ ಬುದ್ಧಿಗಳನ್ನು ನೆನೆಯದೆ ಸ್ವಾನುಭವ ಗೋಷ್ಠಿಯಲಿ ಸೇರಿಸಿ
ಮೀನಕೇತನ ಜನಕ ಪಾಲಿಸೊ , ಮಾನ ಅಭಿಮಾನಗಳು ನಿನ್ನದು ||೧||

ಎಷ್ಟು ನಿಲ್ಲಿಸಿದರು ಕೆಟ್ಟ ಇಂದ್ರಿಯಗಳು
ತಟ್ಟನೆ ತಿರುಗುವವು ಭ್ರಷ್ಟನ ಚಿತ್ತ ಎಷ್ಟು ಹಿಡಿದರು ನಿಲ್ಲದು, ಕೃಷ್ಣಯ್ಯ ಎನ್ನ
ಕಷ್ಟವನು ನೀ ಮನಕೆ ತಂದು ಎನಗಿಷ್ಟವೆಂತಹುದು ಅಂತೆಗೈವುತ
ಭ್ರಷ್ಟತನವನು ತಿದ್ದಿ ನಿನ್ನುತ್ಕೃಷ್ಟ ಪದವನು ಸೇರಿಸೆನ್ನನು ||೨||

ವೈಕುಂಠನಗರೀಶ ಗೆದ್ದೆನೈ ಭವಪಾಶ
ಸಕ್ಕರೆ ಸಿಕ್ಕಿತಯ್ಯ ನಿನ್ನಯ ನಾಮ ಜಿಹ್ವೆಗೆ ದೊರೆವುದೆ ಕೃಷ್ಣಯ್ಯ ಎನ್ನ
ಅಕ್ಕರದಿಂದಲಿ ಪೊರೆದ ಮೇಲೆ ನಾನ್ ಟಕ್ಕು ಯಮನನು ಮಿಕ್ಕು ಮೀರುತ
ಅಕ್ಕಜವ ಮಾಡಿ ಇಂದ್ರಭೋಗವ ಘಕ್ಕನೆ ನಿನ್ನ ದಾಸನಾದೆನು ||೩||
*******