Showing posts with label ಗುರುಗಳ ಚರಣವ ನಿರುತದಿ ಭಜಿಸಲು ದುರಿತರಾಶಿಗಳು ಪರಿಹರವು janakiramana. Show all posts
Showing posts with label ಗುರುಗಳ ಚರಣವ ನಿರುತದಿ ಭಜಿಸಲು ದುರಿತರಾಶಿಗಳು ಪರಿಹರವು janakiramana. Show all posts

Monday, 6 September 2021

ಗುರುಗಳ ಚರಣವ ನಿರುತದಿ ಭಜಿಸಲು ದುರಿತರಾಶಿಗಳು ಪರಿಹರವು ankita janakiramana

 ರಾಗ: ಶಂಕರಾಭರಣ ತಾಳ: ಆದಿ


ಗುರುಗಳ ಚರಣವ ನಿರುತದಿ ಭಜಿಸಲು

ದುರಿತರಾಶಿಗಳು ಪರಿಹರವು


ಗುರುಗಳ ಚರಣಕ್ಕೆರಗಿ ನಮಿಸಲು

ಪರಿಪರಿ ಕ್ಲೇಶವು ಪರಿಹರವು  ಅ. ಪ


ತುಂಗಾನದಿಯಲಿ ಸ್ನಾನವುಮಾಡಲು

ಅಗಣಿತಪಾಪವು ಪರಿಹರವು

ಮಂಗಳಮಹಿಮರ ನಾಮವ ಪಾಡಲು

ರೋಗವ್ಯಾಧಿಗಳು ಪರಿಹರವು 1

ಉದಯದೊಳೆದ್ದು ಗುರುಗಳಸ್ಮರಿಸಲು

ಕುಂದುಕೊರತೆಗಳು ಪರಿಹರವು

ಹಿಂದಿನಜನುಮದ ಪಾಪಗಳೆಲ್ಲವು

ಸದ್ದುಮಾಡದೆ ತೊಲಗುವುವು 2

ಗುರುಗಳ ಕರುಣದ ಭಾಗ್ಯವ ಪಡೆಯದೆ

ಪರಿತಪಿಸುವ ಭಕುತರ ಪೊರೆವುದಕೆ

ಸ್ಮರಿಸುತ ಜಾನಕಿರಮಣನ ಪಾದವ

ಭರದಿಂ ಬರುವರು ಭಕುತರಆಲಯಕೆ 3

***