Showing posts with label ರಾಘವೇಂದ್ರರ ಪಾದಸೇವೆ ಮಾಡಿದರೆ ನೆನೆದ ಕಾರ್ಯಗಳೆಲ್ಲ ನೆರವೇರಿಸುವರು kapila. Show all posts
Showing posts with label ರಾಘವೇಂದ್ರರ ಪಾದಸೇವೆ ಮಾಡಿದರೆ ನೆನೆದ ಕಾರ್ಯಗಳೆಲ್ಲ ನೆರವೇರಿಸುವರು kapila. Show all posts

Monday 6 September 2021

ರಾಘವೇಂದ್ರರ ಪಾದಸೇವೆ ಮಾಡಿದರೆ ನೆನೆದ ಕಾರ್ಯಗಳೆಲ್ಲ ನೆರವೇರಿಸುವರು ankita kapila

 ರಾಗ: ಕಾಂಬೋಜಿ ತಾಳ: ಝಂಪೆ 

ರಾಘವೇಂದ್ರರ ಪಾದಸೇವೆ ಮಾಡಿದರೆ 

ನೆನೆದ ಕಾರ್ಯಗಳೆಲ್ಲ ನೆರವೇರಿಸುವರು


ಎಂದಿಗಾದರು ಒಮ್ಮೆ ಮಂತ್ರಾಲಯಕೆ ಪೋಗಿ

ತುಂಗಭದ್ರೆಲಿ ಮಿಂದು ಭಕ್ತಿಯಲಿ ಬಾಗಿದರೆ 

ರಾಯರಾನುಗ್ರಹವು ತಪ್ಪದಲೆ ದೊರೆಯುವುದು

ಇದಕ್ಕೆ ಸಂಶಯವಿಲ್ಲ ಹರಿಯ ಭಕ್ತರಿಗೆಲ್ಲ 1

ಪ್ರಥಮದಲಿ ಪ್ರಹ್ಲಾದ ದ್ವಿತೀಯದಲಿ ವ್ಯಾಸರಾಯ

ತೃತೀಯದಲಿ ರಾಘವೇಂದ್ರ ಎಂಬ ನಾಮಗಳಿಂದ

ಬಂದ ಭಕ್ತರಿಗೆಲ್ಲ ಕಲ್ಪತರುವಿಯಂತೆ

ಮೆರೆಯುತಿಹರು ನಮ್ಮಾ ಗುರುಸಾರ್ವಭೌಮರು

ಸಾಧುಸಜ್ಜನರಿಗೆ ಸ್ವಪ್ರಯೋಜನೆಗಾಗಿ 

ಠೀವಿಯಲಿ ಕುಳಿತಿಹರು ಬೃಂದಾವನದೊಳಗೆ

ಕಪಿಲನಾಮಕ ಪರಮಾತ್ಮನ ಸಕಲ ಭಕ್ತರಿಗೆಲ್ಲ

ಮುಕುತಿಯನು ಕೊಡುತಿಹರು ಚಕ್ರಧರನ ದಯದಿ 3

***


ರಾಘವೇಂದ್ರರ ಪಾದಸೇವೆ ಮಾಡಿದರೆ

ನೆನೆದ ಕಾರ್ಯಗಳೆಲ್ಲ ನೆರವೇರಿಸುವರು || pa ||


ಎಂದಿಗಾದರು ಒಮ್ಮೆ ಮಂತ್ರಾಲಯಕೆ ಪೋಗಿ

ತುಂಗಭದ್ರೆಲಿ ಮಿಂದು ಭಕ್ತಿಯಲಿ ಬಾಗಿದರೆ

ರಾಯರಾನುಗ್ರಹವು ತಪ್ಪದಲೆ ದೊರೆಯುವುದು

ಇದಕ್ಕೆ ಸಂಶಯವಿಲ್ಲ ಹರಿಯ ಭಕ್ತರಿಗೆಲ್ಲ || 1 ||


ಪ್ರಥಮದಲಿ ಪ್ರಹ್ಲಾದ ದ್ವಿತೀಯದಲಿ ವ್ಯಾಸರಾಯ

ತೃತೀಯದಲಿ ರಾಘವೇಂದ್ರ ಎಂಬ ನಾಮಗಳಿಂದ

ಬಂದ ಭಕ್ತರಿಗೆಲ್ಲ ಕಲ್ಪತರುವಿಯಂತೆ

ಮೆರೆಯುತಿಹರು ನಮ್ಮಾ ಗುರುಸಾರ್ವಭೌಮರು || 2 ||


ಸಾಧುಸಜ್ಜನರಿಗೆ ಸ್ವಪ್ರಯೋಜನೆಗಾಗಿ

ಠೀವಿಯಲಿ ಕುಳಿತಿಹರು ಬೃಂದಾವನದೊಳಗೆ

ಕಪಿಲನಾಮಕ ಪರಮಾತ್ಮನ ಸಕಲ ಭಕ್ತರಿಗೆಲ್ಲ

ಮುಕುತಿಯನು ಕೊಡುತಿಹರು ಚಕ್ರಧರನ ದಯದಿ || 3 ||

***


Rāghavēndrara pādasēve māḍidare neneda kāryagaḷella neravērisuvaru || pa ||


endigādaru om’me mantrālayake pōgi tuṅgabhadreli mindu bhaktiyali bāgidare rāyarānugrahavu tappadale doreyuvudu idakke sanśayavilla hariya bhaktarigella || 1 ||


prathamadali prahlāda dvitīyadali vyāsarāya tr̥tīyadali rāghavēndra emba nāmagaḷinda banda bhaktarigella kalpataruviyante mereyutiharu nam’mā gurusārvabhaumaru || 2 ||


sādhusajjanarige svaprayōjanegāgi ṭhīviyali kuḷitiharu br̥ndāvanadoḷage kapilanāmaka paramātmana sakala bhaktarigella mukutiyanu koḍutiharu cakradharana dayadi || 3 ||


Plan English


Raghavendrara padaseve madidare neneda karyagalella neraverisuvaru || pa ||


endigadaru om’me mantralayake pogi tungabhadreli mindu bhaktiyali bagidare rayaranugrahavu tappadale doreyuvudu idakke sansayavilla hariya bhaktarigella || 1 ||


prathamadali prahlada dvitiyadali vyasaraya trtiyadali raghavendra emba namagalinda banda bhaktarigella kalpataruviyante mereyutiharu nam’ma gurusarvabhaumaru || 2 ||


sadhusajjanarige svaprayojanegagi thiviyali kulitiharu brndavanadolage kapilanamaka paramatmana sakala bhaktarigella mukutiyanu kodutiharu cakradharana dayadi || 3 ||

***