Showing posts with label ಛೀ ಹಳಿ ಥೂ ಖೋಡಿ ಪಾಪಿ ಮನವೆ purandara vittala. Show all posts
Showing posts with label ಛೀ ಹಳಿ ಥೂ ಖೋಡಿ ಪಾಪಿ ಮನವೆ purandara vittala. Show all posts

Wednesday, 4 December 2019

ಛೀ ಹಳಿ ಥೂ ಖೋಡಿ ಪಾಪಿ ಮನವೆ purandara vittala

ರಾಗ ರೇಗುಪ್ತಿ. ಝಂಪೆ ತಾಳ

ಛೀ ಹಳಿ ಥೂ ಖೋಡಿ ಪಾಪಿ ಮನವೆ ||ಪ||
ಕುಹಕ ಬುದ್ಧಿಗಳನ್ನು ಬಿಡು ಕಂಡ್ಯ ಮನವೆ ||ಅ||

ಬಣ್ಣದ ಬೀಸಣಿಗ್ಯಂತೆ ಹೆಣ್ಣು ತಿರುಗೋದು ಕಂಡು
ಕಣ್ಣು ಸನ್ನೆಯ ಮಾಡಿ ಕೈಹೊನ್ನು ತೋರಿ
ಸುಣ್ಣದ್ಹರಳಿನ ಮೇಲೆ ತಣ್ಣೀರು ಹೊಯ್ದಂತೆ
ಕಣ್ಣಿಲಿ ಕೆಂಡವಾ ಚೆಲಿಕೊಂಬೆ ಮನವೆ ||

ವಾಸುದೇವನ ಪೂಜೆ ಒಮ್ಮೆ ಮಾಡೆಂದರೆ
ಬೇಸತ್ತುಕೊಂಡು ತಲೆ ಚಟ್ಟಿಕ್ಕಿ ಕುಳಿತೆ
ಆ ಸಮಯದಲ್ಲೊಬ್ಬ ಕಾಸು ಕೊಡುವೆನೆನಲು
ದಾಸಿಯಾ ಮಗನಂತೆ ಬೆನ್ನಟ್ಟಿ ಹೋದೆ ಮನವೆ ||

ಪಗಡೆ ಚತುರಂಗ ಕವಡೆಯನಾಡಕರೆದರೆ
ನಿಗುರಿದುವು ಕರ್ಣಗಳು ಮಚ್ಛೆಯಂತೆ
ಜಗದೀಶನಾ ದಿನದಿ ಜಾಗರಕೆ ಕರೆದರೆ
ಮುಗಿಲ್ಹರಿದು ಬಿದ್ದಂತೆ ಧರೆಗಿಳಿವೆ ಮನವೆ ||

ನೆರೆಹೊರೆ ಮನೆಯಲ್ಲಿ ಪ್ರಸ್ತವಾಗಲು ಆಗ
ಕರೆಯದೆ ಪೋಗಿನ್ನು ಹಾಳುಹರಟೆ
ಬರಗೆಟ್ಟು ನೂರಾರು ಸುದ್ದಿ ಹೇಳುತ ಅವನ
ಹಿರಿಯಮಗನಂತೆ ಉದರವ ಪೊರೆದೆ ಮನವೆ ||

ಬಿಂದುಮಾತ್ರವೆ ಸುಖವು ದುಃಖ ಪರ್ವತದಷ್ಟು
ಸಂದೇಹವಿಲ್ಲವಿದು ಶಾಸ್ತ್ರಸಿದ್ಧ
ತಂದೆ ಸಿರಿಪುರಂದರವಿಟ್ಠಲರಾಯನ್ನ
ವಂದನೆಯ ಮಾಡಿ ನೀ ಸುಖಿಯಾಗೊ ಮನವೆ ||
***

pallavi

chI haLi thU gODi pApi manave

anupallavi

guhaka buddhigaLannu biDu kaNDya manave

caraNam 1

paNNada bIsaNagyante heNNu tirugOdu kaNDu kaNNu sanneya mADi kaihonnu tOri
saNNadharaLina mEle taNNIru hOyidante kaNNili keNDavA celikombe manave

caraNam 2

vAsudEvana pUje omme mADendare bEsattu koNDu tale caTTikke kuLite
A samayadallobba kAsu koDuvenenalu dAsiyA maganende bennaTTi hOve manave

caraNam 3

pagaDe caturanga kavaDeyanADa karedare nIguriduvu karNagaLu macceyante
jagadIshanA dinadi jAgarake karedare mugilharidu biddante dharegiLive manave

caraNam 4

nerehore maneyalli prastavAgalu Aga kareyade pOginnu hALu haraDe
barageTTu nUrAru suddi hELuta avana hariya maganante udarava porede manave

caraNam 5

bindu mAtrave sukhavu dukkha parvatadaSTu sandEhavillavidu shAstra siddha
tande siri purandara viTTala rAyanna vandaneya mADi nI sukhiyAgo manave
***