..
kruti by Srida Vittala Dasaru Karjagi Dasappa
ಭಯಕೃದ್ಭಯಹಾರಿ ರಾಧಾ ನಯನ ಮನೋಹಾರಿ ||ಪ||
ತಾಪತ್ರಯ ಪರಿಹಾರಕ ರಂಗಾ
ಗೋಪಿ ಜನ ಹೃತ್ಪದ್ಮ ಪತಂಗಾ ||೧||
ಸುಂದರ ಸುಶ್ಮಿತ ಶೋಭಿತ ವದನಾ
ಮಂದರಧರ ಮಾಧವ ಜಿತಮದನಾ ||೨||
ದುಷ್ಟಕುಲಾಂತಕ ಈ ಧರೆಯೊಳು
ಶ್ರೀದ ವಿಠಲ ವಿಧಿ ಭವ ವಂದಿತ ಪಾದ ||೩||
***
bhayakRudbhayahaari raadhaa nayana manOhaari ||pa||
taapatraya parihaaraka raMgaa
gOpi jana hRutpadma pataMgaa ||1||
suMdara suSmita SObhita vadanaa
maMdaradhara maadhava jitamadanaa ||2||
duShTakulaaMtaka I dhareyoLu
SrIda viThala vidhi bhava vaMdita paada ||3||
***
ಭಯಕೃದ್ಭಯಹಾರೀ ರಾಧಾನಯನ ಮನೋಹಾರೀ ಪ
ತಾಪತ್ರಯ ಪರಿಹಾರಕ ರಂಗಾ
ಗೋಪೀಜನ ಹೃತ್ಪದ್ಮ ಪತಂಗಾ 1
ಸುಂದರ ಸುಸ್ಮಿತಶೋಭಿತ ವದನಾ
ಮಂದರಧರ ಮಾಧವ ಜಿತಮದನಾ 2
ದುಷ್ಟಕುಲಾಂತಕ ಈ ಧರೆಯೊಳು ಶ್ರೀದ -
ವಿಠಲ ವಿಧಿಭವವಂದಿತ ಪಾದಾ 3
***