Showing posts with label ಶ್ರೀರಾಮ ಎಂದರೆ ಭಾಗ್ಯಕ್ಕೆ ಕಾರಣ purandara vittala. Show all posts
Showing posts with label ಶ್ರೀರಾಮ ಎಂದರೆ ಭಾಗ್ಯಕ್ಕೆ ಕಾರಣ purandara vittala. Show all posts

Saturday, 7 December 2019

ಶ್ರೀರಾಮ ಎಂದರೆ ಭಾಗ್ಯಕ್ಕೆ ಕಾರಣ purandara vittala

ಶ್ರೀ ರಾಮ ಎಂದರೆ ಭಾಗ್ಯಕ್ಕೆ ಕಾರಣ
ಶ್ರೀಕೃಷ್ಣ ಎಂದರೆ ದುರಿತ ನಿವಾರಣ

ಎಚ್ಚತ್ತಿರು ಎಲೆ ಮನ ಮನವೆ ಎಚ್ಚತ್ತಿರೆಲೆ ಮನವೆ
ಏಕೆ ಬೈಲನು ನೆನೆವೆ ಅಚ್ಯುತಾನಂತ ಗೋವಿಂದನೆಂಬ
ನಾಮದಲಿ ಎಚ್ಚತ್ತಿರೆಲೆ ಮನವೆ

ಏಕೆ ಬಯಲ ನೆನೆವೆ ಅಚ್ಯುತನೆ ಆದಿಕೇಶವನೆ ಅನಾಥಬಂಧೋ ಸಲಹೆಂದು
ಅಚ್ಯುತನ ಪಾದವೆ ನಂಬು ಗತಿಯೆಂದು ಎಚ್ಚತ್ತಿರೆಲೆ ಮನವೆ

ಅನಂತಾನಂತ ದೇವರ ದೇವ ರಂಗೇಶ
ಅನಂತನೆಂದರೆ ಬಲುಭಯವಿನಾಶ
ಅನಂತನೆಂದರೆ ತಡೆವ ಯಮಪಾಶ ಎಚ್ಚತ್ತಿರೆಲೆ ಮನವೆ

ಗೋವಿಂದನೆಂದರೆ ಸಕಲತೀರ್ಥ ಸ್ನಾನ
ಗೋವಿಂದನೆಂದರೆ ಸಕಲಮೂರ್ತಿ ಧ್ಯಾನ
ಗೋವಿಂದನೆಂದರೆ ಪುರಂದರವಿಠಲ ಕೊಡುವ ಸಕಲಸುಜ್ಞಾನ ||
**********