ರಾಗ ಶಂಕರಾಭರಣ , ಛಾಪುತಾಳ
ಕಂಡು ಮನ ಹಿಗ್ಗಿತು ರಂಗಯ್ಯನ ,ಕಾಣದೆ ಮನ ನಿಲ್ಲದು ||ಪ||
ಮಲ್ಲಮಲ್ಲರ ಗೆಲಿದ ರಂಗಯ್ಯ , ಮಲ್ಲಗಂಟನೆ ಬಿಗಿದ
ಬಿಲ್ಲಹಬ್ಬಕೆ ಬಂದು ಮಾವ ಕಂಸನ ಕೊಂದ ||
ಕತ್ತಲೆಯನು ಸುತ್ತಿರೆ ರಂಗಯ್ಯ ಕಸ್ತೂರಿ ತಿಲಕನಿಟ್ಟು
ಚಿತ್ರಮೂರುತಿ ಚಿನ್ನ ಕೊಳಲನೂದುತ ಬಂದ ||
ಹೇಮಕರ ಡೊಂಕನೆ ರಂಗಯ್ಯ ಅಮಿತಫಲದಾತನೆ
ಕಾಮಿತಫಲವೀವ ಪುರಂದರವಿಠಲ ||
***
ಕಂಡು ಮನ ಹಿಗ್ಗಿತು ರಂಗಯ್ಯನ ,ಕಾಣದೆ ಮನ ನಿಲ್ಲದು ||ಪ||
ಮಲ್ಲಮಲ್ಲರ ಗೆಲಿದ ರಂಗಯ್ಯ , ಮಲ್ಲಗಂಟನೆ ಬಿಗಿದ
ಬಿಲ್ಲಹಬ್ಬಕೆ ಬಂದು ಮಾವ ಕಂಸನ ಕೊಂದ ||
ಕತ್ತಲೆಯನು ಸುತ್ತಿರೆ ರಂಗಯ್ಯ ಕಸ್ತೂರಿ ತಿಲಕನಿಟ್ಟು
ಚಿತ್ರಮೂರುತಿ ಚಿನ್ನ ಕೊಳಲನೂದುತ ಬಂದ ||
ಹೇಮಕರ ಡೊಂಕನೆ ರಂಗಯ್ಯ ಅಮಿತಫಲದಾತನೆ
ಕಾಮಿತಫಲವೀವ ಪುರಂದರವಿಠಲ ||
***
pallavi
kaNDu mana higgidu rangayyana kANade mana nilladu
caraNam 1
malla mallara gelida rangayya mallagaNTane bigida bandu mAva kamsana konda
caraNam 2
kattaleyanu suttire billahabbage kastUri tilakaniTTu citra mUruti cinna koLalanUduta banda
caraNam 3
hEmakara donkana rangayya amita phala dAtane kAmita phalavIva purandara viTTala
***