..
kruti by pradyumna teertha ಪ್ರದ್ಯುಮ್ನತೀರ್ಥರು
ಏನು ಮಾಡಲೀ ಮನ ಮಾತು ಕೇಳದೇನು ಮಾಡಲಿ
ಶ್ರೀ ನರಹರಿಯ ನೆನೆಯದೆ ಕಂಡ ಹೀನ ವಿಷಯದಲ್ಲಿ
ಶ್ವಾನನಂತೆ ಪೋಪರೇನು ಪ
ಸಾಧು ಸಜ್ಜನರ ಬೋಧನೆಯ ಜರಿಸಿ
ಮಾಧವನೆ ನಿನ್ನ ಪಾದಕೊಯಿರಿ ಮಾಳ್ಪೊದೇನು 1
ಕಾಯ ಬಾಂಧವರ ಮಾಯಪಾಶಕ್ಹಾಕೆ
ತೋಯಜಾಕ್ಷ ಎನ್ನ ಬಾಯ ಬಿಡಿಸೊರೈಯ್ಯ 2
ಸೊಕ್ಕಿನಿಂದ ಗಜ ಸಿಕ್ಕಿಬಿದ್ದು ನೈಜ
ದಿಕ್ಕುಕಾಣದಂತೆ ಸಿಕ್ಕೆ ವಿಷಯದಲ್ಲಿ 3
ತಂದು ತಂದು ಗೋವಿಂದ ನಿನ್ನಲಿಡೆ
ಸಂದುಗೊಂಡು ಬಿಡಿಸಿಕೊಂಡು ಪೋಪುದೈಯ್ಯ 4
ದೇಹಗೇಹದಲ್ಲಿ ಸ್ನೇಹ ಇಡಿಸಿ ಕೆಡಿಸಿ
ಶ್ರೀ ಹಯವದನ ಮೋಹಪಾಶಕ್ಹಾಕೋದೇನು 5
ಸಾಕು ಜನ್ಮ ಮುಂದೆ ವಾಕು ಕೇಳೋ ತಂದೆ
ಬೇಕು ಪಾದ ಒಂದೇ ಸಾಕಬೇಕೊ ಇಂದೆ 6
ಹೀನಬುದ್ಧಿಬಿಡಿಸಿ e್ಞÁನ ನಿನ್ನಲಿರಿಸಿ
ಗಾನಲೋಲ ಕಾಯೋ ಶ್ರೀ ನರಹರಿಯೆ 7
***