Showing posts with label ತೇಜಿಯೇರಿ ಮೆರೆದು ಬಂದ ಕಸ್ತೂರಿ ರಂಗ hayavadana TEJIYERI MEREDU BANDA KASTURI RANGA. Show all posts
Showing posts with label ತೇಜಿಯೇರಿ ಮೆರೆದು ಬಂದ ಕಸ್ತೂರಿ ರಂಗ hayavadana TEJIYERI MEREDU BANDA KASTURI RANGA. Show all posts

Wednesday 15 December 2021

ತೇಜಿಯೇರಿ ಮೆರೆದು ಬಂದ ಕಸ್ತೂರಿ ರಂಗ ankita hayavadana TEJIYERI MEREDU BANDA KASTURI RANGA

 ರಾಗ ಶಂಕರಾಭರಣ  ಆದಿತಾಳ 
Audio by Mrs. Nandini Sripad

ಶ್ರೀ ವಾದಿರಾಜರ ಕೃತಿ 

ತೇಜಿಯೇರಿ ಮೆರೆದು ಬಂದ ಕಸ್ತೂರಿ ರಂಗ ।
ರಾಜಬೀದಿಯೊಳಗಿಂದ ॥ ಪ ॥

ಸುತ್ತಮುತ್ತ ಸಾವಿರಾರು ಸಾಲು ದೀವಟಿಗೆ ।
ಹತ್ತುದಿಕ್ಕಿಲಿ ಬೆಳಗುತಿಹ ಹಗಲುಬತ್ತಿಗಳು ॥
ಇತ್ತೆರಪು ಭೂಸುರರು ಸಾಲುಗಟ್ಟಿ ನಿಂತಿರಲು ।
ಮತ್ತೆ ಸಭಾದಿಂದ ತೇಜಿಯ ಮೆಲ್ಲನೆ ನಡೆಸುತ್ತ ಜಾಣ ॥ 1 ॥

ತಾಳ ಶಂಖ ಭೇರಿ ತಮ್ಮಟೆ ತಂಬೂರಿ ಮೊದಲಾದ ।
ಮೇಲು ಪಂಚಕಂಗಳೆಲ್ಲ ಮಿಗೆ ಪೊಗಳಲು ॥
ಗಾಳಿ ಗೋಪುರದ ಮುಂದೆ ರಾಯಬಿಡದಂತೆ ಸುತ್ತ ।
ಧೂಳುಗಳೆಬ್ಬಿಸಿ ವೈಹಾಳಿನಿಕ್ಕುತ ಜಾಣ ॥ 2 ॥

ಮುತ್ತಿನ ತುರಾಯಿ ಅಂಗಿ ಮುಂಡಾಸು ।
ತತ್ಥಳಿಪ ವಜ್ರಕೆಂಪಿನ ತಾಳಿ ಚೌಕಳಿ ॥
ಮುತ್ತಿನ ಕುಂಡಲವಿಟ್ಟು ಮೋಹಿಸುತ ಬೀದಿಯೊಳು ।
ಕತ್ತಿಯ ಉಡಿಯಲ್ಲಿ ಕಟ್ಟಿ ಕೈಯಲಿ ತೇಜಿಯ ಪಿಡಿದು ॥ 3 ॥

ರಂಭೆ ಮೊದಲಾದ ದೇವ ರಮಣಿಯರು ।
ಕುಂಭದಾರತಿಯೆತ್ತಿ ಕೂಡಿ ಪಾಡಲು ॥
ಶಂಭು ಮುಖ್ಯ ನಿರ್ಜರರೆಲ್ಲ ಸ್ವಾಮಿ ಪರಾಕೆಂದೆನುತ ।
ಅಂಬುಜಭವಾದಿಗಳ ಆಳಿದ ಶ್ರೀರಂಗಧಾಮ ॥ 4 ॥

ವೇದಘೋಷದಿಂದ ವಿಪ್ರರು ಸ್ತುತಿಸಲು ।
ಮೋದದಿಂದ ಗಾಯಕರು ಹಾಡಿ ಪಾಡಲು ॥
ಹಾದಿಬೀದಿಯಲ್ಲಿ ನಿಂತು ಸಜ್ಜನರಿಗೆಲ್ಲ ದೇವ ।
ಆದರದಿಂದಿಷ್ಟಾರ್ಥವಿತ್ತು ಮೋದದಿಂದ ಮನ್ನಿಸುವ ॥ 5 ॥

ಹಚ್ಚನೆ ಹೆಸರುಬೇಳೆ ಹಾಲುಕೆನೆಗಳು ।
ಮುಚ್ಚಿ ತಂದ ಕೆನೆಮೊಸರು ಮೀಸಲು ಬೆಣ್ಣೆಯು ॥
ಅಚ್ಚ ತುಪ್ಪದಿ ಪಕ್ವವಾದ ಅತಿರಸ ಹುಗ್ಗಿಗಳು ।
ಮೆಚ್ಚಿವುಂಡು ಪಾನಕ ನೀರುಮಜ್ಜಿಗೆಗಳನೆ ಕುಡಿದು ॥ 6 ॥

ಸಣ್ಣಮುತ್ತು ತೆತ್ತಿಸಿದ ಸಕಲಾತಿ ಗೊಂಡ್ಯ ।
ಹೊನ್ನ ತೆತ್ತಿಸಿದ ಹೊಸ ಹೊಳೆವ ಸೊಬಗಿನ ॥
ಉನ್ನಂತ ಗುಣರಾಯ ಉತ್ತಮ ರಾಜಾಶ್ವವೇರಿ ।
ಎನ್ನ ಹಯವದನ ರಂಗ ಎಲ್ಲರಿಗಿಷ್ಟಾರ್ಥಕೊಡುವ ॥ 7 ॥
********