Showing posts with label ಪಾದಂಗಳ ತೋರಿಸೋ ನಾರಾಯಣ ಪಾದಂಗಳ ತೋರಿಸೊ gadugina veeranarayana. Show all posts
Showing posts with label ಪಾದಂಗಳ ತೋರಿಸೋ ನಾರಾಯಣ ಪಾದಂಗಳ ತೋರಿಸೊ gadugina veeranarayana. Show all posts

Wednesday, 1 September 2021

ಪಾದಂಗಳ ತೋರಿಸೋ ನಾರಾಯಣ ಪಾದಂಗಳ ತೋರಿಸೊ ankita gadugina veeranarayana

 ..

kruti by ವೀರನಾರಾಯಣ Veeranarayana 


ಪಾದಂಗಳ ತೋರಿಸೋ ನಾರಾಯಣ ಪಾದಂಗಳ ತೋರಿಸೊ ಪ


ಸಾದರ ಭಕುತಿಯ ನಿನ್ನಲಿ ಇರಿಸೋಮೋದದಿ ಭಜಿಪಂತೆ ನನ್ನದು ಪ್ರೇರಿಸೊ ಅ.ಪ.


ನಾಗಾದಿ ಕಪ್ಪತ್ತ ಗಿರಿಯನ್ನೆ ಚಿನ್ನವನ್ನಾಗಿಸಿ ಬಿಡಲೆಂದು ಯತ್ನಿಸುತ್ತಿದ್ದನಾಗಾರ್ಜುನನ ನೀಗಲು ಭುವಿಯೊಳುಬೇಗದಿ ಬಂದಿ ವೀರನಾರಾಯಣ 1


ಮೈಯೊಳು ಕವಚವ ಶಿರದಿ ಕಿರೀಟವಕೈಯೊಳು ಚಕ್ರ ಗದಾ ಶಂಖ ಧರಿಸಿರಯ್ಯನೆ ಗದುಗಿನೊಳಿಳಿದು ಆ ದೈತ್ಯನಹೊಯ್ಯಲು ಬಂದ ಶ್ರೀ ವೀರನಾರಾಯಣ 2


ತೋರ ಕನ್ನಡದಲ್ಲಿ ವರ ಕವಿಯಾದ ಕುಮಾರ ವ್ಯಾಸನಿಂದ ಭಾರತ ರಚಿಸಿದಿಧೀರ ಶ್ರೀ ಪುರಂದರದಾಸರು ಕರೆದಿಹಭಾರತಮಲ್ಲ ಶ್ರೀ ವೀರನಾರಾಯಣ 3

***