Showing posts with label ಜಯ ರಘುರಾಮಾ ಸದ್ಗುಣ ಧಾಮಾ ದಯದಾಗರ gurumahipati JAYA RAGHURAAMA SADGUNA DHAAMA DAYADAAGARA. Show all posts
Showing posts with label ಜಯ ರಘುರಾಮಾ ಸದ್ಗುಣ ಧಾಮಾ ದಯದಾಗರ gurumahipati JAYA RAGHURAAMA SADGUNA DHAAMA DAYADAAGARA. Show all posts

Wednesday, 1 December 2021

ಜಯ ರಘುರಾಮಾ ಸದ್ಗುಣ ಧಾಮಾ ದಯದಾಗರ ankita gurumahipati JAYA RAGHURAAMA SADGUNA DHAAMA DAYADAAGARA

ಕಾಖಂಡಕಿ ಶ್ರೀ ಕೃಷ್ಣದಾಸರು

ಜಯರಘುರಾಮಾ | ಸದ್ಗುಣ ಧಾಮಾ | ದಯದಾಗರ ಘನಶಾಮಾ ಪ 

ಜಯರಘರುರಾಮಾ | ಸದ್ಗುಣ ಧಾಮಾ ದಯದಾಗರ ಘನ ಶಾಮಾ | ಭಯಹರನೇಮಾ ರಣನಿಸ್ಸೀಮಾ | ತ್ರಯಂಬಕ ವಿಶ್ರಾಮಾ | ಪ್ರಿಯಕರ ನಾಮಾ ಪೂರಿತ ಕಾಮಾ | ಶ್ರಯಸುದಾಯಕ ಮಹಿಮಾ 1 

ಸುರಸಹಕಾರ ಇನಕುಲೋದ್ದಾರಾ | ಧರಣೀಸುತೆ ಮನೋಹಾರಾ | ಶರಯುತೀರಾಯೋಧ್ಯ ವಿಹಾರಾ | ಚರಿತಪಾರಾ ವಾರಾ | ಪರಮೋದಾರಾ ಸರ್ವಾಧಾರಾ | ದುರತಾವಳಿವಿದಾರಾ 2 

ವನರುಹಾಸನ ವಂದಿತಚರಣಾ | ಜನನಿ ಕೌಶಲ್ಯಾ ನಿಧಾನಾ | ಅಣುರೇಣು ಜೀವನಾ ವ್ಯಾಪಕಪೂರ್ಣ | ಕನಕಾಂಬರ ಭೂಷಣ | ಮುನಿಜನ ರಂಜನಾ ದೈತ್ಯವಿಭಂಜನಾ | ಮಹಿಪತಿ ನಂದನ ಪ್ರಾಣಾ 3

***