Showing posts with label ಚಾರು ಶ್ರೀ ಕುಶನದಿ ತೀರದಲ್ಲಿರುತಿಹನ್ಯಾರೆ anantadreesha vishnu teertha stutih. Show all posts
Showing posts with label ಚಾರು ಶ್ರೀ ಕುಶನದಿ ತೀರದಲ್ಲಿರುತಿಹನ್ಯಾರೆ anantadreesha vishnu teertha stutih. Show all posts

Thursday, 26 December 2019

ಚಾರು ಶ್ರೀ ಕುಶನದಿ ತೀರದಲ್ಲಿರುತಿಹನ್ಯಾರೆ ankita anantadreesha vishnu teertha stutih

ಚಾರು ಶ್ರೀ ಕುಶನದಿ ತೀರದಲ್ಲಿರುತಿಹನ್ಯಾರೆ ಪೇಳಮ್ಮಯ್ಯ
ಸಾರಯತೀಶ್ವರ ಧೀರ ಸುಗುಣಗಂಭೀರ
ವಿಷ್ಣುತೀರ್ಥಾರ್ಯಕಾಣಮ್ಮಾ ಪ

ವೃಂದಾರಕ ವರವೃಂದದೊಳಗೆ ನವ
ಇವನಾರೆ ಪೇಳಮ್ಮಯ್ಯ
ವೃಂದಾವನದಲಿ ಬಂದಿರುವರು ಮತ್ತಲ್ಲಿ ನೋಡಮ್ಮಯ್ಯಾ
ಮುಂದೆ ಮುದ್ರೆ ಬಹು ಛಂದದ ನಾಮವು
ಗಂಧಾಕ್ಷತ ನೋಡಮ್ಮಯ್ಯ
ಸಾರಯತೀಶ್ವರ ಧೀರ ಸುಗುಣ ಗಂಭೀರ
ವಿಷ್ಣು ತೀರ್ಥಾರ್ಯ ಕಾಣಮ್ಮಾ 1

ನೀರೇ ನಾಲ್ಕು ವರ ಮೂರುತಿಗಳ್
ಬೆನ್ಹಿಂದೆ ನೋಡಮ್ಮಯ್ಯ
ನಾರಾಯಣ ತನ್ನ ನಾರಿಯ ಸಹಿತಾ
ಇಹನೂ ನೋಡಮ್ಮಯ್ಯ
ನಾರಿಮಣಿಯೇ ಶ್ರೀನಾರಸಿಂಹನೂ ಚಾರುಚಕ್ರ
ತೀರದಲ್ಲಿಹನಮ್ಮಾ
ಸಾರಯತೀಶ್ವರ ಧೀರ ಸುಗುಣಗಂಭೀರ ವಿಷ್ಣು
ತೀರ್ಥಾರ್ಯ ಕಾಣಮ್ಮಾ 2

ಲೇಸು ಆದ ಕೂರ್ಮಸನವಿರುವುದು ಕೆಳಗೇ
ನೋಡಮ್ಮಯ್ಯಾ
ಭಾಸುರ ಜಯಮುನಿ ಶೇಷನಾಗಿರುತಿಹ ಮ್ಯಾಲೇ
ನೋಡಮ್ಮಯ್ಯ
ಈಶಾನಂತಾದ್ರೀಶನಿರತ ಮೋದೇಶ್ವರಾಖ್ಯ
ಪುರವಾಸಾ ಕಾಣಮ್ಮ
ಸಾರಯತೀಶ್ವರ ಧೀರ ಸುಗುಣ ಗಂಭೀರ
ವಿಷ್ಣು ತೀರ್ಥಾರ್ಯ ಕಾಣಮ್ಮ 3
**********