Showing posts with label ನಂಬಿ ನೋಡಿರೋ ಅಂಬುಜಾಕ್ಷನ ಗುಂಭಗುರುತ ಹಂಬಲಿಸದೆ mahipati. Show all posts
Showing posts with label ನಂಬಿ ನೋಡಿರೋ ಅಂಬುಜಾಕ್ಷನ ಗುಂಭಗುರುತ ಹಂಬಲಿಸದೆ mahipati. Show all posts

Wednesday, 1 September 2021

ನಂಬಿ ನೋಡಿರೋ ಅಂಬುಜಾಕ್ಷನ ಗುಂಭಗುರುತ ಹಂಬಲಿಸದೆ ankita mahipati

ನಂಬಿ ನೋಡಿರೋ ಅಂಬುಜಾಕ್ಷನ ಗುಂಭಗುರುತ ಹಂಬಲಿಸದೆ ಇಂಬುದೋರುದು pa 


ಬಿಡದೆ ವಂದಿಸಿ ನೋಡಿ ಸಂಧಿಸಿದರೆ ಭಿನ್ನವಿಲ್ಲದೆ ನೋಡಿ ಚೆನ್ನಾಗಿ ಕೂಡಿಕೊಂಬ ಧನ್ಯಗೈಸಿ ಜೀವ ಪ್ರಾಣ ಪಾವನ ಮಾಡುವ 1 

ಕಂತು ಪಿತನ ನಿತ್ಯ ಯೋಗಕ್ಷೇಮ ತಾ ಹೊತ್ತು ನಡೆಸುವ ಹತ್ತಿಲೆ ತಂದು ತಪ್ಪದೆ ತುತ್ತು ಮಾಡ್ಯುಣಿಸುವ 2 

ಸಣ್ಣ ದೊಡ್ಡದೆನ್ನ ಗುಡದೆ ಕಣ್ಣದೆರಿಸಿ ಚಿನ್ನುಮಯದ ಬಣ್ಣ ಭಾಸುತ ಪುಣ್ಯಮಹಿಮೆ ಕಾಣಿಸುವದು ವಾಸನೆ ಪೂರಿಸಿದ ವಾಸುದೇವ ನಿಶ್ಚಯ ಲೇಸಾಗಿ ಪಾಲಿಸುತಿಹ್ಯ ದಾಸ ಮಹಿಪತಿಯ 3

***