..
ರಾಗ : ಆರಭಿ ತಾಳ ಅಟ್ಟ
ಹರಿಕಥಾಮೃತಸಾರ ಸರಸ
ಸುಗ್ರಂಥವ ।
ಧರಣಿ ಸುರರಿಗಲ್ಲದೆ
ದುರಳಸಾಷಂಡಿಗಳರಿತು
ಇದರ ಮರ್ಮ ।
ಹರುಷಿತರಾಗುವರೇ ।। ಪಲ್ಲವಿ ।
ಹಿಮ ಮಯೂಖನ
ನೋಡಿ ಕುಮುದ ।
ಅರಳುವುದೇ? ।।
ಯಮಿಜನರಂದದಿ
ದಿನಮಣಿಯು ದಯದಿ ।
ತಿಮಿರರ್ಘ್ಯ ಕೊಡ
ಬಲ್ಲದೆ? ।। ಚರಣ ।।
ಚಿನ್ನದಾ ಭರಣಗಳಿಡಲು
ದಾಸಿಯು ದೇವ ।
ಕನ್ನಿಕೆಯಾಗುವಳೇ ? ।
ಮನ್ನಣೆಯರಿಯದ
ಮನುಜರ ಶಿರ
।ಪುಣ್ಯ ಪುರುಷ-
ರಿಗೆರಗುವದೇ ? ।। ಚರಣ ।।
ಗಂಧವಾಹನ ಮತ
ಪೊಂದದವರಿಗೆ ।
ಯಮ ಬಂಧ
ತಪ್ಪುವುದೇ? ।
ಮಂದಮತಿಗೆ ಶ್ಯಾಮ-
ಸುಂದರವಿಠಲನ ।
ಮಂದಿರ ದೊರಕುವುದೇ ? ।। ಚರಣ ।।
****