ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತ
ಸುಜ್ಞಾನಿಗಳ ಕೂಡೆ ಜಗಳವೆ ಲೇಸು
ಉಂಬುಡುವುದಕ್ಕಿರದ ಅರಸನೋಲಗಕ್ಕಿಂತ
ತುಂಬಿದೂರೊಳಗೆ ತಿರಿದುಂಬುವುದೆ ಲೇಸು
ಹಂಬಲಿಸಿ ಹಾಳುಹರಟೆಗಳ ಹರಟೆಗಿಂತ
ನಂಬಿ ಹರಿದಾಸರೊಳು ಪೊಂದುವುದೆ ಲೇಸು
ಒಡನೆ ಹಂಗಿಸುವವನ ಪಾಲೋಗರಕ್ಕಿಂತ
ಕುಡಿ ನೀರು ಕುಡಿದುಕೊಂಡಿರುವುದೆ ಲೇಸು
ಕಡು ಕುಹಕನೊಡನೆ ಸಂಗವ ಮಾಡುವುದಕ್ಕಿಂತ
ಅಡವಿಯೊಳಗಜ್ಞಾತವಾಸವೇ ಲೇಸು
ಮಸೆದು ಮತ್ಸರಿಪ ಸತಿಯೊಡನೆ ಸಂಸಾರಕ್ಕಿಂತ
ಹಸನಿಲ್ಲದಾ ಹಾಳುಗುಡಿಯೆ ಲೇಸು
ಎಸೆದು ಭಜಿಸಲು ನಮ್ಮ ಪುರಂದರ ವಿಠಲನ್ನ
ವಶವಹಗೆ ಮುಕ್ತಿಯು ವಶವಹುದೆ ಕೇಳಿ
********
ರಾಗ ಮೋಹನ ಝಂಪೆ ತಾಳ (raga tala may differ in audio)
Aj~janigala kuda adhika snehakkinta
Suj~janigala kuda jagalave lesu
Umbuduvudakkirada arasanolugakkinta
Tumbidurolage tiridumbuvude lesu
Hambalisi haluharategala harateginta
Nambi haridasarolu pomduvude lesu
Odane hangisuvavana palogarakkinta
Kudiniru kudidukondiruvude lesu
Kadu kuhakanodane sangava maduvudakkinta
Adaviyolagaj~jatavasave lesu
Masedu matsaripa satiyodane samsarakkinta
Hasanillada halugudiye lesu
Esedu Bajisalu namma purandara vithalanna
Vasavahage muktiyu vasavahude keli
***
pallavi
ajnAnigaLa kUDe adhika snEhakkinda su-jnAnigaLa kUDe jagaLave lEsu
caraNam 1
umbuDuvudakkirada arasanOlagakkinda tumbi dUroLage tiridumbuvude lEsu
hambali hALu haraDegaLa haraDeginda nambi haridAsaroLu ponduvude lEsu
caraNam 2
oDane hangisuvavana paralOgarakkinta kuDi nIru kuDidu koNDiruvude lEsu
kaDu kuhakanoDane sangava mADuvudakkinta aDaviyoLaganjnAta vAsavE lEsu
caraNam 3
masedu matsaripa satiyoDane samsArakkinta hasanilladA hALu kuDiye lEsu
esedu bhajisalu namma purandara viTTalanna vashavahage muktiyu vshavahude kELi
***
ಅಜ್ಞಾನಿಗಳ ಕೂಡ ಅಧಿಕ ಸ್ನೇಹಕ್ಕಿಂತ
ಸುಜ್ಞಾನಿಗಳ ಕೂಡ ಜಗಳವೆ ಲೇಸು
ಉಂಬುಡುವುದಕ್ಕಿರದ ಅರಸನೋಲುಗಕ್ಕಿಂತ
ತುಂಬಿದೂರೊಳಗೆ ತಿರಿದುಂಬುವುದೆ ಲೇಸು
ಹಂಬಲಿಸಿ ಹಾಳುಹರಟೆಗಳ ಹರಟೆಗಿಂತ
ನಂಬಿ ಹರಿದಾಸರೊಳು ಪೊಂದುವುದೆ ಲೇಸು
ಒಡನೆ ಹಂಗಿಸುವವನ ಪಾಲೋಗರಕ್ಕಿಂತ
ಕುಡಿನೀರು ಕುಡಿದುಕೊಂಡಿರುವುದೆ ಲೇಸು
ಕಡು ಕುಹಕನೊಡನೆ ಸಂಗವ ಮಾಡುವುದಕ್ಕಿಂತ
ಅಡವಿಯೊಳಗಜ್ಞಾತವಾಸವೇ ಲೇಸು
ಮಸೆದು ಮತ್ಸರಿಪ ಸತಿಯೊಡನೆ ಸಂಸಾರಕ್ಕಿಂತ
ಹಸನಿಲ್ಲದಾ ಹಾಳುಗುಡಿಯೇ ಲೇಸು
ಎಸೆದು ಭಜಿಸಲು ನಮ್ಮ ಪುರಂದರ ವಿಠಲನ್ನ
ವಶವಹಗೆ ಮುಕ್ತಿಯು ವಶವಹುದೆ ಕೇಳಿ
*********