ಪ್ರಾಣದೇವರ ಸ್ತೋತ್ರ
ನೋಡಿದ್ಯಾ ಸೀತಮ್ಮ ನೀ ನೋಡಿದ್ಯಾ || ಪ ||
ನೋಡಿದ್ಯಾ ಹನುಮನಾರ್ಭಟವ - ಹಾಳುಮಾಡಿದ ಕ್ಷಣದಲಿ ವನವಾ ||ಆಹಾ|| ಝಾಡಿಸಿ ಕಿತ್ತು ಈಡ್ಯಾಡಿ ವೃಕ್ಷಂಗಳ ಕೊಂ-ಡಾಡುವ ನಿನ್ನಯ ಕೋಡಗನ್ಹರುಷವಾ || ಅ.ಪ. ||
ಮಾತೆ ನಿನ್ನಾಜ್ಞೆಯ ಕೊಂಡು - ಆರಭೀತಿಯಿಲ್ಲದೆ ಫಲ ಉಂಡು -ದೈತ್ಯದೂತ ಬರಲು ಭಾರಿ ಹಿಂಡೂ||ಆಹಾ||ವಾತ ಜಾತ ಬಂದ ಪಾತಕಿಗಳನೆಲ್ಲತಾ ವಕದಿ ಕೊಂದು ಭೂತಳಕ್ಹಾಕಿದಾ 1
ಸೊಕ್ಕಿ ರಾವಣನೆಂಬ ಗಂಡ - ಮಹ ಲಕುಮಿಯನೆ ಕರಕೊಂಡ - ರಾಮ ರಕ್ಕಸಾಂತಕ ಆಕೆ ಗಂಡ - ಕಪಿ-ಗಿಕ್ಕಿರೆಂದ ಯಮದಂಡ ||ಆಹಾ||ಮಿಕ್ಕ ಖಳರು ಕೂಡಿ ಲೆಕ್ಕಿಸಿ ಮಾತಾಡಿಸಿಕ್ಕರೆ ಬಿಡನೆಂದು ದಿಕ್ಕು ಪಾಲಾದ 2
ಎಷ್ಟೇಳ್ಹಲವನ ಪ್ರತಾಪ - ನೋಡುಸುಟ್ಟನೆಂಬ ಲಂಕಾ ದ್ವೀಪ - ಎಂಥಗಟ್ಟಿಗ ನೋಡೆ ನಮ್ಮಪ್ಪ ||ಆಹಾ||ಸೃಷ್ಟೀಶ ಕೇಶವ ವಿಠ್ಠಲರಾಯನ ಮುಟ್ಟಿ ಭಜಿಸಲಜ ಪಟ್ಟಾಳೆನೆಂದ್ಹೋದಾ
***
nODidya sItamma nI nODidya || p ||
nODidya hanumanArbhaTava hALu mADida kSaNadali vanava | aha jADisi kittu IDADi vrukSagaLa koNDADuva ninnaya koDAgan harushava || a.p ||
mAte ninnAjnjeya koNDu |
arabhIti illade PalavuNDu |
daitya dUta baralu BAri hiNDu |
aha vAta jAta banda pAtakigaLanella | tAtavakadikonDu bhUtaLakhAkida || 1 ||
sokki rAvaNanemba gaNDa | mahalakkumiyana karakoNDa |
rAmarakkasAntaka Ake gaNDa | kapigikkirenda yamadaNDa |
aha mikki khaLara kUDi lekkisi mAtADi | sikkare biDanendu dikku pAlAda || 2 ||
eSThELalavana pratApa |
nODu suTTanemba lanka dvIpa |
entha gaTTEga nODe nammappa |
aha sruSTIsha kEshava viThala
rAyana muTTi BajisaLajapaTTaLenendhoda || 3 ||
***
****