Showing posts with label ಶರಣ ರಕ್ಷಕನಹುದೊ ಸಿರಿಯಲೋಲನೆ ಪೂರ್ಣ mahipati. Show all posts
Showing posts with label ಶರಣ ರಕ್ಷಕನಹುದೊ ಸಿರಿಯಲೋಲನೆ ಪೂರ್ಣ mahipati. Show all posts

Wednesday, 11 December 2019

ಶರಣ ರಕ್ಷಕನಹುದೊ ಸಿರಿಯಲೋಲನೆ ಪೂರ್ಣ ankita mahipati

ಭೈರವಿ ರಾಗ ತೀನ್ ತಾಳ 

ಶರಣರಕ್ಷಕನಹುದೊ ಸಿರಿಯಲೋಲನೆ ಪೂರ್ಣ ||ಪ||

ವರ ಪಾಂಡವರ ಮಿತ್ರ ಕರುಣಾನಂದದ ಗಾತ್ರ
ಅರವಿಂದನೇತ್ರ ಸುರಮುನಿಸ್ತೋತ್ರ
ಹರಿ ನಿನ್ನ ಚರಿತ್ರ ಪರಮಪವಿತ್ರ ||೧||

ವಿದುರವಂದಿತ ದೇವ ಬುಧಜನ ಪ್ರಾಣಜೀವ
ಯದುಕುಲೋದ್ಭವ ನೀನೇ ಶ್ರೀಮಾಧವ
ಸದಾ ಸದ್ಗೈಸುವ ಆದಿಕೇಶವ ||೨||

ಆನಂದ ಘನಲೋಲ ನೀನೆ ಸರ್ವಕಾಲ
ಅನಾಥರನುಕೂಲ ಶರಣಾಗತವತ್ಸಲ
ದೀನ ಮಹಿಪತಿ ಸ್ವಾಮಿ ನೀನೇ ಕೃಪಾಲ ||೩||
***

ಶರಣ ರಕ್ಷಕನಹುದೊ ಸಿರಿಯಲೋಲನೆ ಪೂರ್ಣ ಪ  


ವರ ಪಾಂಡವರ ಮಿತ್ರ ಕರುಣಾನಂದದ ಗಾತ್ರ ಅರವಿಂದ ನೇತ್ರ ಸುರಮುನಿ ಸ್ತೋತ್ರ ಹರಿ ನಿನ್ನ ಚರಿತ್ರ ಪರಮ ಪವಿತ್ರ 1 

ವಿದುರ ವಂದಿತ ದೇವ ಬುಧಜನ ಪ್ರಾಣಜೀವ ಯದುಕುಲೋದ್ಭವ ನೀನೆ ಶ್ರೀಮಾಧವ ಸದಾ ಸದ್ಗೈಸುವ ಆದಿ ಕೇಶವ 2 

ಅನಂದ ಘನಲೋಲ ನೀನೆ ಸರ್ವಕಾಲ ಅನಾಥರನುಕೂಲ ಶರಣಾಗತ ವತ್ಸಲ ದೀನ ಮಹಿಪತಿ ಸ್ವಾಮಿ ನೀನೆ ಕೃಪಾಲ 3

***