Showing posts with label ಶರಣು ಹರಿಗೆ ಶರಣು ಸಿರಿಗೆ ಶರಣು ಬ್ರಹ್ಮವಾಣಿಯರಿಗೆ lakshmikanta. Show all posts
Showing posts with label ಶರಣು ಹರಿಗೆ ಶರಣು ಸಿರಿಗೆ ಶರಣು ಬ್ರಹ್ಮವಾಣಿಯರಿಗೆ lakshmikanta. Show all posts

Sunday, 1 August 2021

ಶರಣು ಹರಿಗೆ ಶರಣು ಸಿರಿಗೆ ಶರಣು ಬ್ರಹ್ಮವಾಣಿಯರಿಗೆ ankita lakshmikanta

 ..

kruti by ಲಕ್ಷ್ಮೀನಾರಯಣರಾಯರು Lakshminarayanaru 

ಮಾಧವ ಗೀತೆ


ಶರಣು ಹರಿಗೆ ಶರಣು ಸಿರಿಗೆ ಶರಣು ಬ್ರಹ್ಮವಾಣಿಯರಿಗೆ

ಶರುಣು ಭವಗೆ ಶರಣು ಶಿವೆಗೆ ಶರಣು ಬೆನಕಗೆ

ಶರಣು ತತ್ವಮಾನಿಗಳಿಗೆ ಶರಣು ಮುನಿ ಸಮೂಹಗಳಿಗೆ

ಶರಣು ಶರಣ ಮಂಡಲಕ್ಕೆ ಶರಣು ಮಾಧವ 1

ಪರಮಭಕ್ತರಾಗಿ ಮೆರೆದ ಗುರು ಪುರಂದರಾದಿ ಸಾಧು

ವರರ ವಚನ ಮಣಿಗಳನ್ನು ಮನದೊಳಾರಿಸಿ

ಸರವ ಮಾಡಿ ಶರಣ ಜನರ ಕರುಣದೆಳೆಯೊಳಿದನು ಬಿಗಿಸಿ

ಕೊರಳಿಗರ್ಪಿಸುವೆನು ಭಕ್ತಿ ಭರದಿ ಮಾಧವ 2

ಶ್ರೀಯೆ ಸತಿಯು ನಿನಗೆ ಬ್ರಹ್ಮರಾಯ ಹಿರಿಯ ಮಗನು ವೈನ-

ತೇಯ ರಥವು ಖಾದ್ರವೇಯೆ ಶಯ್ಯೆ ಛತ್ರವು

ತೋಯಜಾಸನಾಂಡ ಗೃಹವು ಮಾಯೆ

ಮನೆಯ ದಾಸಿ ಸುರನಿ

ಕಾಯ ಸೇವೆಗೈವ ಜನರು ಜೀಯ ಮಾಧವ 3

ಪರ್ವತೇಶನಣುಗಿ ತಂಗಿ ಶರ್ವದೇವ ನರ್ಮ ಸಖಳು

ಸರ್ವದುರಿತವಳಿವ ಗಂಗೆ ನಿನ್ನ ಪುತ್ರಿಯು

ಸರ್ವಕರ್ತ ಸರ್ವಶಕ್ತ ಸರ್ವಕಾಲ ದೇಶ ವ್ಯಾಪ್ತ

ಸರ್ವಸಾರ ಭೋಕ್ತ ತೃಪ್ತಗುಪ್ತ ಮಾಧವ 4

ನೀನೆ ತಾಯಿ ನೀನೆ ತಂದೆ ನೀನೆ ಬಂಧು ನೀನೆ ಬಳಗ

ನೀನೆ ಸಖಳು ನೀನೆ ಗುರುವು ನೀನೆ ದ್ರವ್ಯವು

ನೀನೆ ಧೃತಿಯು ನೀನೆ ಸ್ಮøತಿಯು ನೀನೆ ಮತಿಯು

ನೀನೆ ಗತಿಯು ನೀನೆ ವಿದ್ಯೆ ನೀನೆ ಸಿದ್ಧಿದಾನಿ ಮಾಧವ 5

ನಿನ್ನ ನಾಮ ಪುಣ್ಯನಾಮ ನಿನ್ನ ರೂಪ ಮಾನ್ಯರೂಪ

ನಿನ್ನ ಚರಿತೆ ಘನ್ನ ಚರಿತೆ ನಿನ್ನ ಪೋಲುವ

ಅನ್ಯ ದೈವರನ್ನು ಕಾಣೆ ಘನ್ನ ಭಕ್ತವರ್ಯರಾಣೆ

ಪನ್ನಗಾದ್ರಿವಾಸ ಶ್ರೀನಿವಾಸ ಮಾಧವ 6

ದೀನ ನಾನು ದಾನಿ ನೀನು ಹೀನ ನಾನು ಮಾನಿ ನೀನು

ಭಾನುಕೋಟಿ ತೇಜನೇ ಅನಾದಿ ಪುರುಷನೆ

ಏನ ಬಲ್ಲೆನೈಯ ನಾನು ಜ್ಞಾನಪೂರ್ಣನೈಯ ನೀನು

ನಾನು ನಿನ್ನಧೀನನೈಯ ಸ್ವಾಮಿ ಮಾಧವ 7

ಹೃದಯದಲ್ಲಿ ನಿನ್ನ ರೂಪ ವದನದಲ್ಲಿ ನಿನ್ನ ನಾಮ

ಉದರದಲ್ಲಿ ಅರ್ಪಿತಾನ್ನವಿತ್ತು ಅನುದಿನ

ಒದಗಿ ಬಂದು ಬದಿಯಲಿದ್ದು ಮದಡ ಬುದ್ಧಿಯನ್ನು ಬಿಡಿಸಿ

ಸದಯನಾಗಿ ಬಿಡದೆ ಸಲಹೊ ಮುದದಿ ಮಾಧವ 8

ಸ್ನಾನ ಮೌನ ಧ್ಯಾನ ತಪಗಳೇನು ಮಾಡಲೇನು ದೇವ

ನೀನೆ ಕೃಪೆಯಿನೊಲಿಯದಿರಲು ಜ್ಞಾನ ಬಾರದು

ಏನು ಹೀನ ಹಾನಿ ಬರಲು ನೀನು ಮಾತ್ರ ಬಿಡದಿರೆನ್ನ

ನೀನೆ ಜನಕೆ ಸೂತ್ರಧಾರಿ ಮಾನ್ಯ ಮಾಧವ 9

ನಿತ್ಯವಲ್ಲ ದೇಹವಿನ್ನು ವ್ಯರ್ಥವಾಗಿ ಪೋಪುದಾಯು

ಮತ್ತೆ ಬರುವುದೇನು ನಿಜವು ಮತ್ರ್ಯಕಾಯವು

ಚಿತ್ತ ಶುದ್ಧನನ್ನ ಮಾಡು ನಿತ್ಯ ನಿನ್ನ ಭಜಿಸುತಿಪ್ಪ

ಸತ್ಯವಂತರೊಡನೆ ಬಳಕೆಯಿತ್ತು ಮಾಧವ 10

ಅಂಬುಗುಳ್ಳೆಯಂತೆ ಇರುವ ಡಿಂಬವನ್ನು ನಂಬಿ ಕೆಟ್ಟು

ಹಂಬಲಿಸುತ ವಿಷಯಗಳಿಗೆ ಡೊಂಬನಾದೆನು

ಕಂಬಳಿಯೊಳು ಕಟ್ಟಿದನ್ನ ತಿಂಬುವನಿಗೆ ದೊರೆವ ಸುಖವು

ತುಂಬಿ ತುಳುಕುತಿಹುದು ಭವವ ನಂಬೆ ಮಾಧವ 11

ಹೊಟ್ಟು ತಂದು ಕುಟ್ಟಿ ಕೇರಿ ಕಷ್ಟಪಟ್ಟು ತುಕ್ಕಿ ಬೀಸಿ

ಅಟ್ಟಹಾಸದಿಂದ ರೊಟ್ಟಿ ಸುಟ್ಟು ತಿನ್ನಲು

ಎಷ್ಟು ಸುಖವೊ ಅಷ್ಟೆಯಿನ್ನು ಭ್ರಷ್ಟ ಭವದಿ ಮಮತೆಯಿಡಲ

ದೆಷ್ಟು ಶಿಷ್ಟನಾಗಲವಗೆ ನಷ್ಟ ಮಾಧವ 12

ಹೊಟ್ಟೆಕಿಚ್ಚು ಪಡುವೆ ದೈವಕೆಷ್ಟು ಪೂಜೆ ಮಾಡೆ ಕರುಣ

ಪುಟ್ಟಲೊಲ್ಲದದಕೆ ಬೆಟ್ಟದಷ್ಟು ಕೊಟ್ಟರು

ಬೆಟ್ಟು ನೀರೊಳದ್ದಿ ಬಾಯೊಳಿಟ್ಟು ಚಪ್ಪರಿಸಲು ರುಚಿಯ

ದೆಷ್ಟೊ ದುಷ್ಟನಿತ್ತ ವರದಲಷ್ಟೆ ಮಾಧವ 13

ತಪ್ಪು ಸಾಸಿರಂಗಳನ್ನು ಒಪ್ಪಿಕೊಂಡು ಕಾವದೇವ

ಮುಪ್ಪುರಂಗಳನ್ನು ಗೆಲಿಸಿದಪ್ರಮೇಯನೆ

ಕಪ್ಪು ಮೇಘಕಾಂತಿಯಿಂದಲೊಪ್ಪುತಿಪ್ಪ ತಿರುಮಲೇಶ

ಮುಪ್ಪು ಇಲ್ಲದಿಪ್ಪ ಸರ್ಪಶಯನ ಮಾಧವ 14

ಒರಳ ನೆಕ್ಕಿ ವ್ರತವ ಕೆಟ್ಟ ಮರುಳನಂದವಾಯ್ತು ದೇಹ

ಧರಿಸಿದುದಕೆ ನಿನ್ನ ಬಿಟ್ಟು ನರರ ಸ್ತುತಿಸಲು

ಹರಕು ಚಿಂದಿ ಬಿಡಿಸಲಿಲ್ಲ ಕರಕು ಅನ್ನ ಹೋಗಲಿಲ್ಲ

ನರಕ ಬಾಧೆ ತಪ್ಪಲಿಲ್ಲ ವರದ ಮಾಧವ 15

ಮೊರಡು ತುರುವ ಹಿಡಿದು ಕಟ್ಟಿ ಕರೆದು ಕಷ್ಟ ಪಟ್ಟು ಪಾಲ

ನುರಗಗಳಿಗೆ ಎರೆದ ತೆರದಲಾಯ್ತು ನಿನ್ನನು

ಮರೆದು ತಿರಿದು ಕಾಡಿಬೇಡಿ ತರಣಿ ಮುಣಗ ದುಡಿದು ಬಡಿದು

ಕರಣ ತೃಪ್ತಿಗೆಂದು ಸುರಿದೆ ಬಂದೆ ಮಾಧವ 16

ಕೆರವ ತಿಂಬ ನಾಯಿಗಿನ್ನು ಸುರುಚಿಯನ್ನ ಸೊಗಯಿಸುವುದೆ

ನರಕ ಭಾಗಿ ಪಾಮರಂಗೆ ನಿನ್ನ ನಾಮವು

ಗರಳದಂತೆ ತೋರ್ಪುದೈಯ ಗುರುಗಳಿಲ್ಲ ಹಿರಿಯರಿಲ್ಲ

ದುರಳ ಸಂಗ ಬಿಡಲಿಸಲ್ಲ ಕರುಣಿ ಮಾಧವ 17

ಕ್ರೂರ ಮಾನವರೊಳುದಾರ ಧೀರ ಶೂರರೆಂದು ಸಾರಿ

ಬಾರಿ ಬಾರಿಗಿನ್ನು ಪೊಗಳಿ ಬೊಬ್ಬೆಯಿಟ್ಟರು

ಬಾರದವರಿಗೆಂದು ಕರುಣ ಘೋರತನದ ದನುಜರವರು

ನೀರ ಕಡೆದರುಂಟೆ ಬೆಣ್ಣೆ ಶೌರಿ ಮಾಧವ 18

ಹಾಳು ಹೊಲಕೆ ನೀರನೆತ್ತಿ ತೋಳು ಬೀಳು ಹೋದವೋಲು

ಖೂಳ ಜನಕೆ ಪೇಳಿಕೊಳ್ಳುತಿಹನು ಬಾಳ್ವೆಯು

ದಾಳಿ ಮಾಳ್ಪ ವಿಷಯಗಳನು ಹೂಳಿ ಜ್ಞಾನ ಭಕ್ತಿಯನ್ನು

ತಾಳಿ ನಿನ್ನನೋಲಗಿಸಲು ಬಾಳ್ವೆ ಮಾಧವ 19

ಎಷ್ಟು ನೀಲಿಯನ್ನು ತೊಳೆಯೆ ಬಿಟ್ಟು ಹೋಗದವರ ಬಣ್ಣ

ದುಷ್ಟ ಮಾನವರಿಗೆ ಕರುಣ ಪುಟ್ಟದೆಂದಿಗು

ಕಷ್ಟಪಟ್ಟು ಸೇವಿಸುವರ ಹೊಟ್ಟೆಯನ್ನು ಹೊಡೆದು ತಮ್ಮ

ಪೆಟ್ಟಿಗೆಯನು ತುಂಬಿಸುವರೊ ದಿಟ್ಟ ಮಾಧವ 20

ನಿರುತ ನಿನ್ನ ಕಥೆಯ ಬಿಟ್ಟು ನರರ ಕಥೆಗಳನ್ನು ಕೇಳಿ

ಗುರುಗಳನ್ನು ಹಿರಿಯರನ್ನು ಜರೆಯುತಿಪ್ಪರು

ಪೊರೆದ ತಂದೆ ತಾಯ ಮಾತ ಪರಿಕಿಸದಲೆ ತೊರೆದು ತಮ್ಮ

ತರುಣಿ ನುಡಿಯ ಕೇಳಿ ನೆಚ್ಚುತಿಹರು ಮಾಧವ 21

ಪಟ್ಟದರಸಿಯನ್ನು ತೊರೆದು ಬಿಟ್ಟು ಪರರ ಸತಿಯ ಕೂಡಿ

ಕೊಟ್ಟ ಸಾಲವನ್ನು ಕೊಡದೆ ನುಂಗುತಿಪ್ಪರು

ಮುಟ್ಟಿ ಕರವ ಭಾಷೆಯನ್ನು ಕೊಟ್ಟು ಮೋಸ ಮಾಡುತಿಹರು

ಕೆಟ್ಟು ಮಾರಿಗೆರಗಿ ನಿನ್ನ ಬಿಟ್ಟು ಮಾಧವ 22

ಕಂಡುದನ್ನು ಪೇಳದಿಹರು ಕೊಂಡೆಯವನು ಪೇಳುತಿಹರು

ಉಂಡ ಮನೆಗೆ ಬಗೆವರೆರಡನವರು ಭಂಡರು

ಕಂಡು ನುತಿಸಿ ಬೇಡಿಕೊಂಡರು ದಂಡಿಸುವರ ಕಂಡು ನಡುಗಿ

ಕೊಂಡು ಪೋಗಿ ಕೊಡುತಲಿಹರು ಕಂಡ್ಯ ಮಾಧವ 23

ಕೊಳ್ಳರೊಳಗೆ ಸ್ನೇಹ ಬಹಳ ಸುಳ್ಳರೊಳಗೆ ಸೋಲುತಿಹರು

ಒಳ್ಳೆಯವರ ಕಂಡವರ ಟೊಳ್ಳು ಮಾಳ್ಪರು

ಬಳ್ಳೆಸುರಿದು ಬಲ್ಲಿದವರಿಗಳ್ಳೆ ಬಿರಿಯಲುಣಿಸಿ ದಣಿಸಿ

ತಳ್ಳಿ ಬಿಡುವರಿಲ್ಲದವರನೆಲ್ಲ ಮಾಧವ 24

ಮಾಡಿದಂಥ ಕೃತಿಯು ಮರೆತು ಕೇಡು ಬಗೆದು ಕಾಡುತಿಹನು

ನೋಡರೊಮ್ಮೆಗಾದರವರು ಬಡವರೆಂಬುದ

ಜಾಡೆಯರಿತು ನಿನ್ನ ನಾಮ ಪಾಡಿ ಪೊಗಳುತಿಹರಿಗೆಂದು

ಕೇಡು ಬರದು ನಾಡಿನೊಳಗೆ ನೋಡೆ ಮಾಧವ 25

ಶಾಕವ್ರತದೊಳೆಲ್ಲ ಶಾಕಂಗಳನ್ನು ಬಿಡುವ ತೆರದಿ

ಬೇಕು ಬೇಕು ಎಂಬ ಬಯಕೆ ಬಿಡಲು ಬಾರದು

ಸಾಕೆನಿಸದೆ ರತಿಯ ಸುಖದೊಳೇಕ ಚಿತ್ತನಾಗುವಂತೆ

ಲೋಕನಾಥ ನಿನ್ನಲಿಡದೆ ಹೋದೆ ಮಾಧವ 26

ನೇಮ ನಿಷ್ಠೆಯೆಂದು ಪರರ ಧಾಮದನ್ನ ಬಿಡುವವೋಲು

ಕಾಮಲೋಭ ಮೋಹಗಳನು ಬಿಡಲು ಬಾರದು

ತಾಮಸರನು ನೋಡೆನೆಂಬ ನೇಮವನ್ನು ನಿತ್ಯ ಪರರ

ಕಾಮಿನಿಯರ ಬಿಡದೆ ಹೋದೆ ಸ್ವಾಮಿ ಮಾಧವ 27

ಹೇಸಿಗೆಯನು ಕಂಡು ಕರದಿ ನಾಸಿಕವನು ಹಿಡಿಯುವಂತೆ

ಹೇಸಿ ವಿಷಯ ವಾಸನೆಯನು ಬಿಡಲು ಸಲ್ಲದು

ಘಾಸಿಬಟ್ಟು ಪರರ ಸೇವೆಯಾಸೆಬಟ್ಟು ಮಾಡುವಂತೆ

ಸೂಸಿ ನಿನ್ನ ತೋಷಬಡಿಸಲಿಲ್ಲ ಮಾಧವ 28

ಪರರ ವಿತ್ತ ಪದವಿ ಕಂಡು ಹರುಷ ಕ್ಲೇಶಗಳಿಗೆ ಸಿಲುಕು-

ತಿರುಳು ಹಗಲು ಬಿಡದೆ ಕುದಿದು ತೊಳಲುತಿರುವೆನು

ನರಕವಾರ್ತೆಯನ್ನು ಕೇಳಿ ದುರುಳ ವಿಷಯಗಳಿಗೆ ಮನವ

ನೆರಗಿಸುವೆನು ಮುಂದೆ ಗತಿಯದೇನೊ ಮಾಧವ 29

ಹೇಸಿ ವಿಷಯ ಸುಖವ ನಾನು ಲೇಸೆನುತ್ತೆ ತಿಳಿದು ಮಮತೆ

ಯಾಸೆಯಲ್ಲಿ ಕಟ್ಟುಬಿದ್ದು ಕ್ಲೇಶಪಡುತಿಹೆ

ಪಾಶಬಿಡಿಸಿ ದಾಸ ದಾಸ ದಾಸನಾಗಿಸೆನ್ನ ದೋಷ

ರಾಶಿಯನ್ನು ನಾಶ ಮಾಡೊ ಶ್ರೀಶ ಮಾಧವ 30

ಆಗದೆನಗೆ ಅಬುಜನಾಭ ಭಾಗವತವ ಕೇಳೆ ಮನಸು

ಬೈಗು ಬೆಳಗು ಪೋಗುತಿಹುದು ಸಾಗಿ ಬಾರದು

ಭೋಗ ಭಾಗ್ಯಗಳನು ಬಯಸಿ ರಾಗ ಲೋಭಗಳಲಿ ನೆಲಸಿ

ತಾಗು ಬಾಗುಗಳನು ತಿಳಿಯದಾದೆ ಮಾಧವ 31

ಬಂದ ಕಾರ್ಯವಾಗಲಿಲ್ಲ ಎಂದು ಬ್ರಹ್ಮ ದೇಹ ಧರಿಸಿ

ಮುಂದೆ ಗತಿಯದಾವುದೈಯ ಸಿಂಧುಶಯನನೆ

ಮಂದನಾಗಿ ನೊಂದೆನಯ್ಯೋ ಹಿಂದು

ಮುಂದ ನೊಂದನರಿಯೆ

ಬಂದು ಸಲಹೊ ಕಂದನೆಂದೂ ತಂದೆ ಮಾಧವ 32

ದಾಸ ವೇಷವನ್ನು ಹಾಕಿ ದೇಶ ದೇಶವನ್ನು ತುಕ್ಕಿ

ಮೋಸಮಾಡಿ ಸುಜನರನ್ನು ಘಾಸಿಗೊಳಿಸಿದೆ

***