Showing posts with label ವಾಸುದೇವನ ನಾಮಾವಳಿಯ ಕ್ಲಿಪ್ತಿಯನು purandara vittala. Show all posts
Showing posts with label ವಾಸುದೇವನ ನಾಮಾವಳಿಯ ಕ್ಲಿಪ್ತಿಯನು purandara vittala. Show all posts

Saturday, 7 December 2019

ವಾಸುದೇವನ ನಾಮಾವಳಿಯ ಕ್ಲಿಪ್ತಿಯನು purandara vittala

ರಾಗ ಮುಖಾರಿ ಝಂಪೆ ತಾಳ

ವಾಸುದೇವನ ನಾಮಾವಳಿಯ ಕ್ಲ್ ಪ್ತಿಯನು
ವ್ಯಾಸರಾಯರ ಪರ್ಯಂತ ವರ್ಣಿಸಿದೆ ನಾನು ||ಪ ||

ಕೇದಾರ ರಾಮೇಶ್ವರ ಕಿರುಕುಳದ ಭೂತಳದ
ಪಾದಾರವಿಂದ ತೀರ್ಥ ಪ್ರತಿ ಕ್ಷೇತ್ರವ
ಆದರದಿ ಲಕ್ಷ ಇಪ್ಪತ್ತೈದು ಸಾವಿರ ಕೃತಿಯ
ವೇದ ಶಾಸ್ತ್ರ ಪುರಾಣ ವಿವಿಧ ಸಮ್ಮತಿಯಿಂದ ||

ಸುಳಾದಿ ಅರುವತ್ತನಾಲ್ಕು ಸಾಸಿರ ಬಹು ವ್ರತವು ನಾಮಾ-
ವಳಿಯು ಮೂವತ್ತೈದು ಸಾಸಿರವಾಗಿ
ನಲಿದು ಶ್ವೇತದ್ವೀಪ ಅನಂತಾಸನ ವೈಕುಂಠ
ಸಲೆ ಶೇಷನ ಮಹಿಮೆಯ ಬಣ್ಣಿಸಿದೆನು ||

ಬ್ರಹ್ಮಲೋಕ ಕೈಲಾಸ ಭರದಿ ದಿಕ್ಪಾಲಕರ
ಪ್ರಮೇಯ ಎಂಭತ್ತು ಸಾಸಿರ ಪೇಳಿದೆನು
ಸನ್ಮತ ಹಲವು ಕಥೆಸಾರ ತೊಂಭತ್ತು ಸಾಸಿರವು
ಒಮ್ಮನದಿ ಹೇಳಿದೆನು ಒದಗಿ ಜನರೆಲ್ಲ ಕೇಳಿ ||

ಆಹ್ನಿಕ ಗುಣ ಜನ್ಮಾಷ್ಟಮಿ ಏಕಾದಶೀ
ನಿರ್ಣಯ ಶ್ರುತಿ ಸಹಿತ ವರ್ಣಿಸಿದೆನು
ಅನಘ ಅಗಣಿತ ಮೂರ್ತಿ ಗಂಡಕೀ ಶಿಲೆಯನು
ಘನ ಕಲ್ಯಾಣ ದೇಶ ಅರುವತ್ತು ಸಾಸಿರದಿ ||

ಮಧ್ವರಾಯರ ಮಹಿಮೆ ಮಹಗುರು ಪರಂಪರೆ ಪ್ರ-
ಸಿದ್ಧ ವ್ಯಾಸರಾಯರ ಪರಿಯಂತವು
ಸಿದ್ಧ ತಂತ್ರಸಾರೋಕ್ತ ಸೇವಕರ ತಾರತಮ್ಯ
ಉದ್ಧರಿಸಿ ನಾ ನಿಮಗೆ ಊರ್ವಿಯಲಿ ಪೇಳಿಸಿದೆ ||

ಅವರವರ ಮೂರ್ತಿ ಧ್ಯಾನ ಅವರವರ ವರ ಕೀರ್ತಿಮಾನ
ವಿವರದಲಿ ನಾ ನಿಮಗೆ ವಿಸ್ತರಿಸಿದೆ
ಹವಣೆಯಿಂದಿಪ್ಪತ್ತೈದು ಸಾಸಿರ ಕೃತಿಯನ್ನು
ಭುವನದಲಿ ಪೇಳಿದೆನು ಬುಧಜನರೆಲ್ಲ ಕೇಳಿ ||

ಇಂತು ನಾಲ್ಕು ಲಕ್ಷ ಎಪ್ಪತ್ತೊಂಭತ್ತು ಸಾಸಿರ ಕೃತಿಯ
ಕಂತುಜನಕನ ನಾಮ ಘನ ಮಹಿಮೆಯ
ಸಂತಸದಿ ಶ್ರುತಿ ಸಮ್ಮತಿ ಪ್ರಮಾಣದಲಿ ಶ್ರೀ-
ಮಂತ ಪುರಂದರವಿಠಲ ವ್ಯಾಸಮುನಿಗೆ ಪೇಳಿಸಿದ ||
***

pallavi

vAsudEvana nAmAvaLiya klptiyanu vyAsarAyara paryanta varNiside nAnu

caraNam 1

kEdAra rAmEshvara kirukuLada bhUtaLada pAdAravinda tIrtta prati kSEtrava
Adaradi lakSa ippattaidu sAvira krtiya vEda shAstra purANa vividha sammatiyinda

caraNam 2

suLAdi aruvatta nAlku sAsira bahu vratavu nAmAvaLiyu mUvattaidu sAsiravAgi
nalidu shvEta dvIpa anantAsana vaikuNTha salEshaSana mahimeya baNNisidEnu

caraNam 3

brahmalOka kailAsa bharadi digpAlakara pramEya embhattu sAsi pELidEnu
samnata halavu kathesAra tombhattu sAsiravu ommanadi hELidEnu odagi janarella kELi

caraNam 4

Ahnika guNa janmASTami EkAdashi nirNaya shruti sahita varNisidEnu
anagha agaNita mUrti gaNDagI shileyanu ghana kalyANa dEsha aruvattu sAsiradi

caraNam 5

madhvarAyara mahime maha guru parampare prasiddha vyAsarAyara pariyantavu
siddha tantrasArOkta sEvakara tAratamya uddharisi nA nimage Urviyali pELiside

caraNam 6

avaravara mUrti dhyAna avaravara vara kIrtimAna vivaradali nA nimage vistariside
havaNeyindippattaidu sAsira krtiyannu bhuvanadali pELidEnu budhajanarella kELi

caraNam 7

indu nALku lakSa eppattombhattu sAsira krtiya kantujanakana nAma ghana mahimeya
santasadi shruti sammati pramANadali shrImanta purandara viTTala vyAsamunige pELisida
***