ಕಾಖಂಡಕಿ ಶ್ರೀ ಮಹಿಪತಿರಾಯರು
ಸಾಧಿಸದೆ ಹೊಳೆಯ ಹೃದಯದೊಳಿಹ್ಯ ಗೆಳಿಯ ಪ
ಸಾಧಿಸಬೇಕೊಂದು ಪಾಲ ಭೇದಿಸಿ ನೋಡುವದ್ಹತ್ತುಪಾಲ ಎದುರಿಡುವಂತೆ ಗೋಪಾಲ ಬುಧಜನ ಪ್ರತಿಪಾಲ 1
ಸಾಧನವೆಂಬುದೆ ಸುಪಥ ಬೋಧವೆ ಸದ್ಗುರುಮಾರ್ಗ ಸ್ವಹಿತ ಸದಮಲಾನಂದಭರಿತ ಇದೇ ಶಾಶ್ವತ 2
ಸಾಧಿಸಿ ಸದ್ಗುರು ಕೃಪೆಯಿಂದ ಭೇದಿಸು ಮಹಿಪತಿ ನಿನಗಿಂದು ಚೆಂದ ಹೃದಯದೊಳ್ಹಾನ ಮುಕುಂದಬದಿಯಲಿ ಗೋವಿಂದ 3
***