Showing posts with label ನೀನಲ್ಲದನ್ಯರೆ ಸಲಹಲು ಕಾಯೊ prasannavenkata. Show all posts
Showing posts with label ನೀನಲ್ಲದನ್ಯರೆ ಸಲಹಲು ಕಾಯೊ prasannavenkata. Show all posts

Wednesday, 13 November 2019

ನೀನಲ್ಲದನ್ಯರೆ ಸಲಹಲು ಕಾಯೊ ankita prasannavenkata

by ಪ್ರಾಣೇಶದಾಸರು
ನೀನಲ್ಲದನ್ಯರೆ ಸಲಹಲು ಕಾಯೊ |ಜಾನಕೀಪತಿ ದೂತ ಹನುಮಂತ ಪ

ಗುರುವೆ ನಿನ್ನಯಪಾದಭಜಿಸುವರನ್ನ |ಧರೆಯೊಳು ಬನ್ನಬಡಿಸುವೋರೆ ||ಗಿರಿಸುತ ನೀ ಗತಿಯೆನಲಾಗ ಬೇಗ |ಪೊರೆದೆಯಾತನ ಜಲಧಿಯೊಳಿಟ್ಟು1

ರವಿಜಶಕ್ರಜನಿಂದ ಬಳಲುತ ಬಂದು |ಪವನ ಪಾಲಿಪುದೆನ್ನಲಾಕ್ಷಣ ||ಭುವನೇಶನಿಂದ ವಾಲಿ ಕೊಲ್ಲಿಸಿ ಕಾಳೀ |ಧವಸುಗ್ರೀವನ ಭಯ ಬಿಡಿಸಿದೆ2

ತಂದೆ ಪ್ರಾಣೇಶ ವಿಠ್ಠಲನಿಗೆ ನಿನಗಂ |ದುಂಟಿಂದಿಲ್ಲೇ ಈ ಮಹಿಮೆಯು ||ಬಂದದುರಿತನಿವಾರಣ ಮಾಡಿ ದಯ-ದಿಂದ ಪಾಲಿಸೋ ನಿನ್ನ ದಾಸರ 3
*******