Audio by Mrs. Nandini Sripad
ಶ್ರೀ ವಿಜಯದಾಸಾರ್ಯ ವಿರಚಿತ ಶ್ರೀ ದತ್ತಾವತಾರ ಸ್ತೋತ್ರ ಸುಳಾದಿ
( ಯೋಗೀ ಯೋಗಶಕ್ತಿಪ್ರದನಾದ , ಪ್ರಣತರಿಗೆ ಪ್ರಣವ ಪ್ರತಿಪಾದ್ಯನಾದ , ಸಜ್ಜನರಿಗೆ ಸತ್ಕರ್ಮ ಪ್ರದತ್ತನಾದ , ದತ್ತನಾಮಕ ಪರಮಾತ್ಮನೇ ಜಯತು ಜಯತು.
ಭಕ್ತಾಭೀಷ್ಟದತ್ತಾ , ಸದಾ ನಿನ್ನ ಸ್ಮರಣೆಯನ್ನಿತ್ತು , ಸದ್ವಿದ್ಯೆಯನ್ನು ದಯಪಾಲಿಸಿ , ಈ ಭವಬಂಧನದಿಂದ ಬಿಡುಗಡೆ ಮಾಡು. )
ರಾಗ ಮಲಯಮಾರುತ
ಧ್ರುವತಾಳ
ದತ್ತಾ ಯೋಗೀಶ ಯೋಗಿ ಯೋಗಶಕ್ತಿಪ್ರದ
ದತ್ತಾ ಪ್ರಣತರಿಗೆ ಪ್ರಣವಪ್ರತಿಪಾದ್ಯ
ದತ್ತ ಸ್ವತಂತ್ರದಿಂದ ಜಗಕೆ ಸತ್ಕರ್ಮ ಪ್ರ -
ದತ್ತ ಮಾಡಿಕೊಡುವ ದೀಪ್ತಾ ಚೂಡಾ
ದತ್ತಾ ಚೀರಾಂಬರಗೇಯಾ ವಲ್ಕಲವಾಸ
ದತ್ತಾ ದುರ್ವಾಸ ಚಂದ್ರ ಸಹಭವ ಭವ್ಯಹಂಸಾ
ನಿತ್ಯ ಪ್ರಕೃತಿ ರಮಣಾ ಮೂಲಮೂರ್ತಿ
ಅತ್ರಿನಂದನ ಕೃಷ್ಣಾಂಜನ ಬ್ರಹ್ಮಸೂತ್ರ ಪ -
ವಿತ್ರ ಧಾರಣದೇವಾ ದೇವವಂದ್ಯಾ
ಸತ್ಯಕ್ರಿಯಾ ಸತತ ಸಾವಿರ ಹಸ್ತವರದ
ದೈತ್ಯ ಮೋಹಕ ರೂಪಾ ಘನ ಪ್ರತಾಪಾ
ಅತ್ಯಂತ ಜಗದ್ಭರಿತಾ ಜನನಾದಿ ಶೂನ್ಯ ಸ -
ರ್ವೋತ್ತಮ ಮಹಾ ಪ್ರಭುವೆ ಸ್ವಪ್ರಭಾವಾ
ಕೀರ್ತಿ ಪಾವನವಪುಷ ವೈಕುಂಠವಾಸ ತಪೋ -
ವಿತ್ತ ಸುಚಿತ್ತಾ ಸಚ್ಚಿದಾನಂದಾತ್ಮಾ ಉತ್ತುಂಗ -
ವ್ಯಾಪ್ತ ಗೋಪ್ತಾ ಪ್ರಾಪ್ತಾ ಸಂತೃಪ್ತಾ
ತಪ್ತಾಂಚನಗಾತ್ರಾ ನಿರ್ಜರಾಪ್ತಾ
ಚಿತ್ರ ವಿಚಿತ್ರ ಕರ್ಮ ವಿಜಯವಿಟ್ಠಲರೇಯಾ
ದತ್ತಾವತಾರ ಭಗದತ್ತಾಯುಧಧಾರಿ ॥ 1 ॥
ಮಟ್ಟತಾಳ
ದತ್ತ ಜ್ಞಾನದತ್ತಾ ದತ್ತ ಭಕುತಿದತ್ತಾ
ದತ್ತ ಶ್ರವಣದತ್ತಾ ದತ್ತ ಮನನದತ್ತಾ
ದತ್ತ ದಾನದತ್ತಾ ದತ್ತಾ ಸಾಧನದತ್ತಾ
ದತ್ತ ಚಿತ್ತದತ್ತಾ ದತ್ತವಿರಕ್ತಿ ದತ್ತಾ
ದತ್ತ ಮಾರ್ಗದತ್ತಾ ದತ್ತಾ ದತ್ತಾ ಇಷ್ಟದತ್ತಾ
ದತ್ತ ಸರ್ವದತ್ತಾ ದತ್ತ ಭೋಗದತ್ತಾ
ದತ್ತಾನಂದದತ್ತಾ ದತ್ತ ತನ್ನನೆದತ್ತಾ ದತ್ತಾತ್ರೇಯ
ದತ್ತ ಮೂರುತಿ ನಮ್ಮ ವಿಜಯವಿಟ್ಠಲರೇಯಾ
ದತ್ತನೆಂದವನಿಗೆ ದತ್ತ ಮಗನಾಹಾ ॥ 2 ॥
ತ್ರಿವಿಡಿತಾಳ
ಎಣಿಸಿ ಪೇಳುವನಾರು ನಿನ್ನ ಸ್ವಭಾವವಾ
ಅನುಸೂಯ ವರಸೂನು ಕರ್ದಮ ದೌಹಿತ್ರ
ಗುಣಸಿ ಕೊಂಡಾಡಿದ ಜನರಿಗೆ ಭೀತಿ ಕರ್ಮಾ
ಜನಿಸುವ ಬಗೆಯಿಲ್ಲ ಇಳಿಯೊಳಗೆ
ನೆನೆಸಿದವರ ಮಸ್ತಕದಲ್ಲಿ ಸುಳಿವ
ಮನಸಿಜ ಜನಕ ಜಗನ್ಮೋಹನಾ
ಕನಸಿನೊಳಾದರೂ ಕಳವಳಿಕಿಯಿಂದಾಡೆ
ಮನ ಸೂರೆಗೊಡುವಾನು ಮಂದಹಾಸಾ
ಅನುಸರಿಸಿ ತಿರುಗುವ ಭಕ್ತರೊಡನೆ ದತ್ತಾ
ಘನ ಶುದ್ಧಾತ್ಮನು ಕಾಣೊ ಗೌರವರ್ಣಾ
ಉಣಿಸುವ ತನ್ನಯ ನಾಮಾಮೃತವ ವ -
ಕ್ಕಣಿಸುವಂತೆ ನಿತ್ಯ ಪ್ರೇರಿಸುವಾ
ಜನ ಸುಮ್ಮನಿರದಲೆ ಜಪಿಸಿ ಈತನ ನಾಮಾ
ಮಣಿ ಸಾರಿಸಾರಿಗೆಲಿ ಎಣಿಕೆ ಗೈಯೊ
ಗುಣ ಸಾರಾತರ ನಮ್ಮ ವಿಜಯವಿಠ್ಠಲರೇಯಾ
ಮನಸಿನೊಳಗೆ ನಿಲುವಾ ನಂಬಿದವಗೆ ದತ್ತಾ ॥ 3 ॥
ಅಟ್ಟತಾಳ
ಯೋಗಾಸನಾ ಅಕ್ಷಮಾಲಾ ಜ್ಞಾನ ಮುದ್ರ
ಯೋಗಶಾಸ್ತ್ರ ಕರ್ತ ವರ್ತಮಾನಕಾಲ
ಭೂಗೋಲ ಚರಿಸುವ ಬ್ರಹ್ಮಚರ್ಯಧಾರ್ಯಾ
ಶ್ರೀಗುರು ಅಜಗುರು ಸರ್ವಜಗದ್ಗುರು
ಭಾಗೀರಥಿ ತೀರ ಬದರಿನಿವಾಸ ಅ -
ಯೋಗ ಕರ್ಮಹಾರಿ ದತ್ತ ದಾನವರಿಗೆ
ಭೋಗ ಶಾಯಿ ಮುಕ್ತಾಭೋಗ ಭಾಗಾಧೇಯಾ
ಭಾಗ ತ್ರಯಗುಣ ನಾಶ ಗುಣಾಂಬುಧಿ
ರಾಗವಿದೂರ ಸರಾಗ ಮಣಿ ನಖಾ
ಪೂಗರ್ಭನೆನಿಸುವ ಈ ತನ್ನ ತಾತನ್ನ
ಆಗಸದಲಿ ನೋಡಿ ತಾತನ್ನ ಐಶ್ವರ್ಯ
ಯಾಗಾ ತೀರ್ಥಯಾತ್ರಿ ನಾನಾ ಪುಣ್ಯ ಸಂ -
ಯೋಗದಿಂದಧಿಕ ದತ್ತನ ಸ್ಮರಣೆ ಒಮ್ಮೆ
ಜಾಗು ಮಾಡದೆ ಮಾಡೆ ಮುದದಿ ಬಂದೊದಗೋದು
ಜಾಗರತನದಿಂದ ಮಹಪುಣ್ಯ ಪ್ರತಿದಿನ
ಸಾಗರ ಮಂದಿರ ವಿಜಯವಿಟ್ಠಲ ಭವ -
ರೋಗದ ವೈದ್ಯ ವೈಲಕ್ಷಣ್ಯ ॥ 4 ॥
ಆದಿತಾಳ
ಜಯ ಜಯವೆಂದು ದತ್ತಮಂತ್ರವ
ನಯಮತಿಯಿಂದ ಜಪಿಸಲು
ತ್ರಯ ಪರಿಚ್ಛೇದಕ ಛೇದನಾ
ಭಯಪರ್ವತ ವಿಭೇದನಾ
ಅಯುತದುರಿತ ರೋದನಾ
ಕ್ಷಯರಹಿತ ಸನ್ಮೋದನಾ
ಜಯಜಯವೆಂದು ದತ್ತಾ ಮಂತ್ರಾ
ಪ್ರಿಯವಾಗಿಪ್ಪದು ಗತಿಲಬ್ಧಾ
ಲಯವಾಗುವದು ಪ್ರಾರಬ್ಧಾ
ಜಯಜಯವೆನ್ನನೊ ಬಲುಲಬ್ಧಾ
ತ್ರಯ ಜಗದೊಳವನೆ ತಬ್ಧಾ
ಸುಯತಿಗಳು ನುಡಿದ ಶಬ್ಧಾ
ಪಯಳಾಯಂತಿದೆ ನೋಡಬ್ಧಾ
ದಯಪೂರ್ಣ ನಮಗೆ ವಿಜಯವಿಠ್ಠಲ ದತ್ತ
ಬಯಕೆ ಕೊಡುವದು ಒಲಿದು ಬಿಡಬ್ಧ ಅಬ್ಧಾ ॥ 5 ॥
ಜತೆ
ದತ್ತ ಪ್ರಧಾನ ವಿದ್ಯಾ ಸಪ್ರದಾತಾ ಪಾರ -
ತಂತ್ರರಹಿತ ವಿಜಯವಿಟ್ಠಲ ಪ್ರಜ್ಞಾ ॥
*****************
ಶ್ರೀ ಭೃಗು ಮಹರ್ಷಿಗಳ ಅವತಾರರಾದ ಶ್ರೀ ವಿಜಯ ರಾಯರು ಶ್ರೀ ದತ್ತ ನಾಮಕ ಶ್ರೀ ಹರಿಯನ್ನು ಸರಲ ಸುಂದರವಾಗಿಯೂ, ಅತಿ ಮನೋಜ್ಞವಾಗಿ ವರ್ಣಿಸಿದ " ಶ್ರೀ ದತ್ತಾವತಾರ ಸ್ತೋತ್ರ ಸುಳಾದಿ ".
ಧ್ರುವ ತಾಳ :
ದತ್ತಾ ಯೋಗೀಶಾ ಯೋಗಿ ಯೋಗಶಕ್ತಿಪ್ರದ । ದತ್ತ ಪ್ರಣತರಿಗೆ ಪ್ರಣವ ಪ್ರತಿಪಾದ್ಯ । ದತ್ತ ಸ್ವಾತಂತ್ರದಿಂದಜಗಕೆ ಸತ್ಕರ್ಮ । ಪ್ರ । ದತ್ತ ಮಾಡಿಕೊಡುವ ದೀಪ್ತಾ ಚೂಡಾ । ದತ್ತಾ ಚೀರಾ೦ಬರಗೇಯಾ ವಲ್ಕಲ ವಾಸ । ದತ್ತಾ ದುರ್ವಾಸ ಚಂದ್ರ ಸಹಭವ ಭವ್ಯಹಂಸಾ । ನಿತ್ಯ ಪ್ರಕೃತಿ ರಮಣಾ ಮೂಲಮೂರ್ತಿ । ಅತ್ರಿ ನಂದನ ಕೃಷ್ಣಾ೦ಜನ ಬ್ರಹ್ಮಸೂತ್ರ । ಪ । ವಿತ್ರ ಧಾರಣ ದೇವಾ ದೇವ ವಂದ್ಯಾ । ಸತ್ಯ ಕ್ರಿಯಾ ಸತತ ಸಾವಿರ ಹಸ್ತ ವರದ । ದೈತ್ಯ ಮೋಹಕ ರೂಪಾ ಘನ ಪ್ರತಾಪಾ । ಅತ್ಯಂತ ಜಗದ್ಭರಿತಾ ಜನನಾದಿ ಶೂನ್ಯ । ಸ । ರ್ವೋತ್ತಮ ಮಹಾ ಪ್ರಭವೇ ಸ್ವಪ್ರಭಾವಾ । ಕೀರ್ತಿ ಪಾವನ ವಪುಷ ವೈಕುಂಠ ವಾಸ । ತಪೋ । ವಿತ್ತ ಸುಚಿತ್ತ ಸಚ್ಚಿದಾನಂದಾತ್ಮಾ ಉತ್ತುಂಗ । ವ್ಯಾಪ್ತಾ ಗೋಪ್ತಾ ಪ್ರಾಪ್ತಾ ಸಂತೃಪ್ತಾ । ತಪ್ತಕಾಂಚನ ಗಾತ್ರಾ ನಿರ್ಜರಾಪ್ತಾ । ಚಿತ್ರ ವಿಚಿತ್ರ ಕರ್ಮ ವಿಜಯವಿಠ್ಠಲರೇಯಾ । ದತ್ತಾವತಾರ ಭಗದತ್ತಾಯುಧಧಾರಿ ।।
ಮಟ್ಟ ತಾಳ :
ದತ್ತಾ ಜ್ಞಾನದತ್ತಾ ದತ್ತ ಭಕುತಿ ದತ್ತಾ । ದತ್ತ ಶ್ರವಣ ದತ್ತಾ ಮನನ ದತ್ತಾ । ದತ್ತ ದಾನದತ್ತಾ ದತ್ತ ಸಾಧನದತ್ತಾ । ದತ್ತಾ ಚಿತ್ತದತ್ತಾ ದತ್ತ ವಿರಕ್ತಿಡತ್ತಾ । ದತ್ತ ಮಾರ್ಗದತ್ತಾ ದತ್ತ ದತ್ತಾ ಇಷ್ಟ ದತ್ತಾ । ದತ್ತ ಸರ್ವದತ್ತಾ ದತ್ತ ಭೋಗದತ್ತಾ । ದತ್ತಾನಂದದತ್ತಾ ದತ್ತ ತನ್ನನೆ ದತ್ತಾ । ದತ್ತಾತ್ರೇಯ ದತ್ತ ಮೂರುತಿ ನಮ್ಮ ವಿಜಯವಿಠ್ಠಲರೇಯಾ । ದತ್ತನೆಂದವನಿಗೆ ದತ್ತಮಗನಾಹಾ ।।
ತ್ರಿವಿಡಿ ತಾಳ :
ಎಣಿಸಿ ಪೇಳುವನಾರು ನಿನ್ನ ಸ್ವಭಾವವಾ । ಅನಸೂಯ ವರ ಸೂನು ಕರ್ದಮ ದೌಹಿತ್ರ । ಗುಣಿಸಿ ಕೊಂಡಾಡಿದ ಜನರಿಗೆ ಭೀತಿ ಕರ್ಮಾ । ಆನಿಸುವ ಬಗೆಯಿಲ್ಲ ಇಳಿಯೊಳಗೆ । ನೆನಿಸಿದವರ ಮಸ್ತಕದಲ್ಲಿ ಸುಳಿವ । ಮನಸಿಜ ಜನಕ ಜಗನ್ಮೋಹನ । ಕನಸಿನೊಳಾದರೂ ಕಳವಳಿಕಿಯಿಂದಾಡೆ । ಮನ ಸೂರೆಗೊಡುವಾನು ಮಂದಹಾಸಾ । ಅನುಸರಿಸಿ ತಿರುಗುವ ಭಕ್ತರೊಡನೆ ದತ್ತಾ । ಘನ ಶುದ್ಧಾತ್ಮನು ಕಾಣೋ ಗೌರವರ್ಣಾ । ಉಣಿಸುವ ತನ್ನಯ ನಾಮಾಮೃತವಾ । ವ । ಕ್ಕಣಿಸುವಂತೆ ನಿತ್ಯ ಪ್ರೇರಿಸುವಾ । ಜನ ಸುಮ್ಮನಿರದಲೆ ಜಪಿಸಿ ಈತನ । ನಾಮಾ । ಮಣಿ ಸಾರಿಸಾರಗೆಲಿ ಎಣಕಿ ಗೈಯೊ । ಗುಣಸಾರತರ ನಮ್ಮ ವಿಜಯವಿಠ್ಠಲರೇಯಾ ಮನಸಿನೊಳಗೆ ನಿಲುವಾ ನಂಬಿದವಗೆ ದತ್ತಾ ।।
ಅಟ್ಟ ತಾಳ :
ಯೋಗಾಸನಾ ಅಕ್ಷಮಾಲಾ ಜ್ಞಾನಮುದ್ರಾ । ಯೋಗಶಾಸ್ತ್ರ ಕರ್ತಾ ವರ್ತಮಾನಕಾಲ । ಭೂಗೋಲ ಚರಿಸುವ ಬ್ರಹ್ಮಚರ್ಯಧಾರ್ಯಾ । ಶ್ರೀ ಗುರು ಅಜಗುರು ಸರ್ವ ಜಗದ್ಗುರು । ಭಾಗೀರಥೀ ತೀರ ಬದರೀ ನಿವಾಸಾ । ಅ । ಯೋಗ ಕರ್ಮ ಹಾರಿ ದತ್ತ ದಾನವರಿಗೆ । ಭೋಗಾಶಾಯಿ ಮುಕ್ತಾಭೋಗ ಭಾಗಾಧೇಯಾ । ಭಾಗ ತ್ರಯಗುಣ ನಾಶ ಗುಣಾಂಬುಧಿ । ರಾಗ ವಿದೂರ ಸರಾಗಮಣಿ ನಖಾ । ಪೂಗರ್ಭ ನೆನಿಸುವ ಈತನ್ನ ತಾತನ್ನ । ಆಗಸದಲಿ ನೋಡಿ ತಾತನ್ನ ಐಶ್ವರ್ಯ । ಯಾಗಾ ತೀರ್ಥ ಯಾತ್ರಿ ನಾನಾ ಪುಣ್ಯ । ಸಂ । ಯೋಗದಿಂದಧಿಕ ದತ್ತನ ಸ್ಮರಣೆ ಒಮ್ಮೆ । ಜಾಗು ಮಾಡದೆ ಮಾಡೆ ಮುದದಿ ಬಂದೊದಗೋದು । ಜಗರ ತನದಿಂದ ಮಹಾಪುಣ್ಯ ಪ್ರತಿದಿನ । ಸಾಗರ ಮಂದಿರ ವಿಜಯವಿಠ್ಠಲ ಭವ । ರೋಗದ ವೈದ್ಯ ವೈಲಕ್ಷಣ್ಯ ।।
ಆದಿ ತಾಳ :
ಜಯಜಯವೆಂದು ದತ್ತ ಮಂತ್ರವ । ನಯಮತಿಯಿಂದ ಜಪಿಸಲು । ತ್ರಯ ಪರಿಚ್ಛೇದಕ ಛೇದನಾ । ಭಯ ಪರ್ವತ ವಿಭೇದನಾ । ಅಯುತ ದುರಿತ ರೋದನಾ । ಕ್ಷಯ ರಹಿತ ಸನ್ಮೋದನಾ । ಜಯಜಯವೆಂದು ದತ್ತ ಮಂತ್ರ । ಪ್ರಿಯವಾಗಿಪ್ಪದು ಗತಿಲಬ್ಧಾ । ಲಯವಾಗುವದು ಪ್ರಾರಬ್ಧ । ಜಯಜಯವೆನ್ನನೋ ಬಲು ಲಬ್ಧಾ । ತ್ರಯ ಜಗದೊಳವನೇ ತಬ್ಧಾ । ಸುಯತಿಗಳು ನುಡಿದ ಶಬ್ದಾ । ಪಯಳಾಯಂತಿದೆ ನೋಡಬ್ಧಾ । ದಯಪೂರ್ಣ ನಮಗೆ ವಿಜಯವಿಠ್ಠಲ ದತ್ತಾ । ಬಯಕೆ ಕೊಡುವದು ವೊಲಿದು ಬಿಡಬ್ಧ ಅಭ್ದಾ ।।
ಜತೆ :
ದತ್ತ ಪ್ರದಾನ ವಿದ್ಯಾ ಸಪ್ರದಾತಾ । ಪಾರ । ತಂತ್ರ ರಹಿತ ವಿಜಯವಿಠ್ಠಲ ಪ್ರಜ್ಞಾ ।।
ಮೇಲ್ಕಂಡ ಸುಳಾದಿಯಲ್ಲಿ ಶ್ರೀ ವಿಜಯರಾಯರು ಶ್ರೀ ದತ್ತಾತ್ರೇಯನ ರೂಪ ಲಾವಣ್ಯ ಮಹಿಮಾತಿಶಯಗಳನ್ನು ಅತ್ಯದ್ಭುತವಾಗಿ ವರ್ಣಿಸಿದ್ದಾರೆ. ಇದುವೇ ಶ್ರೀ ದತ್ತನಾಮಕ ಭಗವಂತನ ಚಿಂತಾನಾ ಕ್ರಮ!!
*************
" ಶ್ರೀ ದತ್ತಾವತಾರ ಸುಳಾದಿ "
ರಚನೆ : ಶ್ರೀ ದಾಸಪ್ಪ ದಾಸರು [ ಶ್ರೀ ವಿಜಯ ದಾಸರು ]
ಅಂಕಿತ : ಶ್ರೀ ವಿಜಯ ವಿಠ್ಠಲ
" ಧ್ರುವ ತಾಳ "
ದತ್ತಾಯೋಗೀಶ ಯೋಗಿ ಯೋಗ ಶಕ್ತಿಪ್ರದ । ದತ್ತ ಪ್ರಣತರಿಗೆ ಪ್ರಣವ ಪ್ರತಿಪಾದ್ಯ । ದತ್ತ ಸ್ವಾತಂತ್ರದಿಂದ ಜಗಕೆ ಸತ್ಕರ್ಮ । ಪ್ರ । ದತ್ತ ಮಾಡಿ ಕೊಡುವ ದೀಪ್ತಾ ಚೂಡಾ । ದತ್ತಾಚೀರಾಂಬರಗೇಯಾ ವಲ್ಕಲ ವಾಸ । ದತ್ತಾ ದುರ್ವಾಸ ಚಂದ್ರ ಸಹ ಭವ ಭವ್ಯ ಹಂಸಾ । ನಿತ್ಯ ಪ್ರಕೃತಿ ರಮಣಾ ಮೂಲಮೂರ್ತಿ । ಅತ್ರಿ ನಂದನ ಕೃಷ್ಣಾ೦ಜನ ಬ್ರಹ್ಮಸೂತ್ರ । ಪ । ವಿತ್ರ ಧಾರಣ ದೇವಾ ದೇವ ವಂದ್ಯಾ । ಸತ್ಯ ಕ್ರಿಯಾ ಸತತ ಸಾವಿರ ಹಸ್ತ ವರದ । ದೈತ್ಯ ಮೋಹಕ ರೂಪಾ ಘನ ಪ್ರತಾಪಾ । ಅತ್ಯಂತ ಜಗದ್ಭರಿತಾ ಜನನಾದಿ ಶೂನ್ಯ । ಸ । ರ್ವೋತ್ತಮ ಮಹಾ ಪ್ರಭುವೇ ಸ್ವಪ್ರಭಾವಾ । ಕೀರ್ತಿ ಪಾವನ ವಪುಷ ವೈಕುಂಠ ವಾಸ । ತಪೋ । ವಿತ್ತ ಸುಚಿತ್ತ ಸಚ್ಚಿದಾನಂದಾತ್ಮ ಉತ್ತುಂಗ । ವ್ಯಾಪ್ತಾ ಗೋಪ್ತಾ ಪ್ರಾಪ್ತಾ ಸಂತೃಪ್ತಾ । ತಪ್ತಕಾಂಚನ ಗಾತ್ರಾ ನಿರ್ಜರಾಪ್ತಾ । ಚಿತ್ರ ವಿಚಿತ್ರ ಕರ್ಮ ವಿಜಯವಿಠ್ಠಲರೇಯಾ । ದತ್ತಾವತಾರ ಭಗದತ್ತಾಯುಧ ಧಾರಿ ।।
" ಮಠ್ಯ ತಾಳ "
ದತ್ತ ಜ್ಞಾನ ದತ್ತಾ ಭಕುತಿ ದತ್ತಾ । ದತ್ತ ಶ್ರಾವಣ ದತ್ತಾ ದತ್ತ ಮನನ ದತ್ತಾ । ದತ್ತ ದಾನ ದತ್ತಾ ದತ್ತ ಸಾಧನ ದತ್ತಾ । ದತ್ತ ಚಿತ್ತ ದತ್ತಾ ದತ್ತ ವಿರಕ್ತಿ ದತ್ತಾ । ದತ್ತ ಮಾರ್ಗ ದತ್ತಾ ದತ್ತ ದತ್ತಾ ಇಷ್ಟ ದತ್ತಾ । ದತ್ತ ಸರ್ವ ದತ್ತಾ ದತ್ತ ಭೋಗ ದತ್ತಾ । ದತ್ತಾನಂದ ದತ್ತಾ ದತ್ತ ತನ್ನನೆ ದತ್ತಾ । ದತ್ತಾತ್ರೇಯ । ದತ್ತ ಮೂರುತಿ ನಮ್ಮ ವಿಜಯವಿಠ್ಠಲರೇಯಾ । ದತ್ತನೆಂದವನಿಗೆ ದತ್ತಮಗನಾಹ ।।
" ತ್ರಿವಿಡಿ ತಾಳ "
ಎಣಿಸಿ ಪೇಳುವನಾರು ನಿನ್ನ ಸ್ವಭಾವವಾ । ಅನಸೂಯ ವರಸೂನು ಕರ್ದಮ ದೌಹಿತ್ರ । ಗುಣಿಸಿ ಕೊಂಡಾಡಿದ ಜನರಿಗೆ ಭೀತಿ ಕರ್ಮಾ । ಆನಿಸುವ ಬಗೆಯಿಲ್ಲ ಇಳಿಯೊಳಗೆ । ನೆನೆಸಿದವರ ಮಸ್ತಕದಲ್ಲಿ ಪೊಳೆವ । ಮನಸಿಜ ಜನಕ ಜಗನ್ಮೋಹನಾ । ಕನಸಿನೊಳಗಾದರೂ ಕಳವಳಿಕಿಯಿಂದಾಡೆ । ಮನ ಸೂರೆಗೊಡುವಾನು ಮಂದಹಾಸಾ । ಅನುಸರಿಸಿ ತಿರುಗುವ ಭಕ್ತರೊಡನೆ ದತ್ತಾ । ಘನ ಶುದ್ಧಾತ್ಮನು ಕಾಣೋ ಗೌರವರ್ಣಾ । ಉಣಿಸುವ ತನ್ನಯ ನಾಮಾಮೃತವ । ವ । ಕ್ಕಣಿಸುವಂತೆ ನಿತ್ಯ ಪ್ರೇರಿಸುವಾ । ಜನ ಸುಮ್ಮನಿರದಲೆ ಜಪಿಸಿ ಈತನಾ ನಾಮಾ । ವಣಿ ಸಾರಿಸಾರಗೆಲಿ ಎಣಿಕೆ ಗೈಯ್ಯೊ । ಗುಣಸಾರತರ ನಮ್ಮ ವಿಜಯವಿಠ್ಠಲರೇಯಾ । ಮನಸಿನೊಳಗೆ ನಿಲುವಾ ನಂಬಿದವಗೆ ದತ್ತಾ ।।
" ಅಟ್ಟ ತಾಳ "
ಯೋಗಾಸನಾ ಅಕ್ಷಮಾಲಾ ಜ್ಞಾನಮುದ್ರಾ । ಯೋಗಶಾಸ್ತ್ರ ಕರ್ತಾ ವರ್ತಮಾನ ಕಾಲ । ಭೂಗೋಲ ಚರಿಸುವ ಬ್ರಹ್ಮಚರ್ಯಧಾರ್ಯಾ । ಶ್ರೀ ಗುರು ಅಜಗುರು ಸರ್ವ ಜದ್ಗುರು । ಭಾಗೀರಥಿ ತೀರ ಬದರಿ ನಿವಾಸ । ಅ । ಯೋಗ ಕರ್ಮಹಾರಿ ದತ್ತ ದಾನವರಿಗೆ । ಭೋಗಾಶಾಯಿ ಮುಕ್ತಾಭೋಗ ಭಾಗಾಧೇಯಾ । ಭಾಗ ತ್ರಯ ಗುಣ ನಾಶ ಗುಣಾಂಬುಧಿ । ರಾಗ ವಿದೂರ ಸರಾಗಮಣಿ ನಖಾ । ಪೂಗರ್ಭ ನೆನಿಸುವ ಈತನ್ನ ತಾತನ್ನ । ಆಗಸದಲ್ಲಿ ನೋಡಿ ತಾತನ್ನ ಐಶ್ವರ್ಯ । ಯಾಗಾ ತೀರ್ಥ ಯಾತ್ರಿ ನಾನಾ ಪುಣ್ಯ । ಸಂ । ಯೋಗದಿಂದಧಿಕ ದತ್ತನ ಸ್ಮರಣೆ ಒಮ್ಮೆ । ಜಗ್ಗು ಮಾಡದೆ ಮಾಡೆ ಮುದದಿ ಬಂದೊದಗೋದು । ಜಾಗರತನದಿಂದ ಮಹಾಪುಣ್ಯ ಪ್ರತಿದಿನ । ಸಾಗರ ಮಂದಿರ ವಿಜಯವಿಠ್ಠಲ । ಭವ । ರೋಗದ ವೈದ್ಯ ವೈಲಕ್ಷಣ್ಯ ।।
"" ಆದಿ ತಾಳ "
ಜಯ ಜಯವೆಂದು ದತ್ತ ಮಂತ್ರವ । ನಯ ಮತಿಯಿಂದ ಜಪಿಸಲು । ತ್ರಯ ಪರಿಚ್ಛೇದಕ ಛೇದನಾ । ಭಯ ಪರ್ವತ ವಿಭೇದನಾ । ಆಯುತ ದುರಿತ ರೋದನಾ ।ಕ್ಷಯ ರಹಿತ ಸನ್ಮೋದನಾ | ಜಯ ಜಯವೆಂದು ದತ್ತ ಮಂತ್ರಾ । ಪ್ರಿಯವಾಗಿಪ್ಪದು ಗತಿಲಬ್ಧಾ ।ಲಯವಾಗುವುದು ಪ್ರಾರಬ್ಧಾ ।ಜಯ ಜಯವೆನ್ನೆನೊ ಬಲು ಲಬ್ಧಾ ।ತ್ರಯ ಲೋಕದೊಳವನೆ ತಬ್ಧಾ ।ಸುಯತಿಗಳು ನುಡಿದ ಶಬ್ಧಾ ।ಪಯಳಾಯಂತಿದೆ ನೋಡಬ್ಧಾ । ದಯಪೂರ್ಣ ನಮಗೆ ವಿಜಯವಿಠ್ಠಲದತ್ತ । ಬಯಕೆ ಕೊಡುವುದು ವೊಲಿದು ಬಿಡಬ್ಧ ಅಬ್ಧಾ ।।
" ಜತೆ "
ದತ್ತ ಪ್ರಧಾನ ವಿದ್ಯಾ ಸುಪ್ರದಾತಾಪಾರ । ತಂತ್ರ ರಹಿತ ವಿಜಯವಿಠ್ಠಲ ಪ್ರಜ್ಞಾ ।