Showing posts with label ಮಧ್ವನುದಿಸಿದನು ಭೂತಳದಲಿ krishnavittala. Show all posts
Showing posts with label ಮಧ್ವನುದಿಸಿದನು ಭೂತಳದಲಿ krishnavittala. Show all posts

Monday, 2 August 2021

ಮಧ್ವನುದಿಸಿದನು ಭೂತಳದಲಿ ankita krishnavittala

ಮಧ್ವನುದಿಸಿದನು ಭೂತಳದಲಿ ಪ


ವದ್ದು ದುರ್ಮತ ತಿದ್ಧಿ ಸುಜನರ ಪದ್ಮನಾಭನ ಪಾದಸೇವಿಸೆ ಅ.ಪ


ದೇವ ದುಂದುಭಿಗಳ್À ಮೊಳಗೆ ದೇವಗಣಗಳು

ಕುಣಿದು ಕುಣಿಯೇ

ಗೀರ್ವಾಣಮಾತೆಯು ನಲಿದುನಲಿಯೆ ಪೂರ್ವಜಾತರ

ಖೇದ ಉಕ್ಕಿಹರಿಯೆ

ಸರ್ವಲಕ್ಷಣದಿಂದ ಶೊಭಿಪ ಸರ್ವತೆರದಲಿ ಪೂರ್ಣಕಾಯದಿ

ಸರ್ವಜೀವರ ನಾಥನಾಯಕ ಸರ್ವರೀಶನ ಆಜ್ಞೆಧರಿಸುತ 1

ವಾಸುದೇವನಲ್ಲೆ ರತನು ವಾಸುದೇವನ ತೋರಿ ಪೊರೆವಾ

ದೋಷವಿಲ್ಲದ ಮಹಾಮಹಿಮಾ ನಾಶವಿಲ್ಲದ e್ಞÁನಸ್ವರೂಪಾ

ತೋಷಬೀರುತ ಮಧ್ಯಗೇಹಗೆ ವಾಸುದೇವ ಸುನಾಮಗೊಳ್ಳುತ

ನಾಶಮಾಡುತ ದೋಷe್ಞÁನವ ಭಾಸಬೀರಲು ವೇದರಾಶಿಯ 2

ವನಜಜಾಂಡವ ಪೊತ್ತಿಹಧೀರ ವನಜನಾಭವ ಮುಖ್ಯದೂತ

ಅನಿಲ ದೇವನ ತೃತೀಯ ರೂಪ ವನಜಸಂಭವ ಪದಕೆ ಬರುವ

ಅನಘ ಜಯಮುನಿ ವಾಯು ಹೃದಯದಿ ಕುಣಿವ

“ಶ್ರೀಕೃಷ್ಣವಿಠಲ”

ದಯದೊಳ್ ಮಣಿವೆ ಸುಜನರ ಬಂಧನೀಗಿಸಿ

ದಣಿವು ಕಾಣದೆ ವೇದವತಿಯಲಿ 3

****