Showing posts with label ಪರಾಕು ಭೀಮನೆಂದು ಸ್ತುತಿಸಿದೆ ಪಾಲಿಸಬೇಕನ್ನ purandara vittala. Show all posts
Showing posts with label ಪರಾಕು ಭೀಮನೆಂದು ಸ್ತುತಿಸಿದೆ ಪಾಲಿಸಬೇಕನ್ನ purandara vittala. Show all posts

Friday, 6 December 2019

ಪರಾಕು ಭೀಮನೆಂದು ಸ್ತುತಿಸಿದೆ ಪಾಲಿಸಬೇಕನ್ನ purandara vittala

ರಾಗ ದೇವಗಾಂಧಾರ. ಆದಿ ತಾಳಾ

ಪರಾಕು ಭೀಮನೆಂದು ಸ್ತುತಿಸಿದೆ ಪಾಲಿಸಬೇಕನ್ನ ||ಪ||

ಸರೋರುಹಾಸನ ಕೌರವನಾಶನಗಿನ್ನು ಸಂಭ್ರಮ ಮೋದಕ ಪಲ್ಲವಪಾಣಿ ||ಅ||

ವಾಣಿಯೊಡೆಯ ಎನ್ನ ಧಿಕ್ಕರಿಸಿ ನಿ-
ರ್ವಾಣ ಮಾಡಿ ದಂಡಪಾಣಿ ಸಜ್ಜನಕೆಲ್ಲ
ವಾಣಿರಮಣ ನಿನಗೆಲ್ಲೆಣೆಗಾಣೆನು ಅಮಿತವುಳ್ಳ ದೊರೆಯೆ
ಎಣೆಗಾಣೆ ಮೂರ್ಲೋಕದಿ ಸರ್ವ
ಸ್ಥಾಣು ಮೊದಲಾದ ಪ್ರಾಣಿಗಳಲ್ಲಿ ಇದ್ದ
ಪ್ರಾಣಪಂಚರಿಗೆ ನೀನು ಮುಖ್ಯನಾಗಿ
ಪ್ರಾಣ ಮುಖ್ಯಪ್ರಾಣ ಸಲಹೊ ಪ್ರಣರಾಯ ||

ಉಚ್ಚಸ್ಥಾನ ವಿರಾಟನ ಮನೆಯಲಿ
ಯಾಚಕರೂಪದೊಳೈವರು ತಾವು
ಪಾಚಕವೇಷ ಧರಿಸಿ ಪಾಕವ
ಆಚರಿಸುತಲಿರಲು
ನೀಚನ ಕರ್ತವ್ಯ ದ್ರೌಪದಿ ಬಂದು
ಸೂಚಿಸಲು ನೀ ಕೋಪದಿ ಸರ್ವ
ಕೀಚಕ ಮೊದಲವನನುಜರನೆಲ್ಲ
ಹೀಚಿ ಬಿಸಾಡಿದ ಮಹಿಮನೆ ||

ಮಧ್ಯಗೇಹಭಟ್ಟನ ಮನೆಯಲ್ಲಿ ತಾ-
ನುದ್ಭವಿಸಿ ತುರ್ಯಾಶ್ರಮ ಧರಿಸಿ
ಮಧ್ವಾಚಾರ್ಯರೆಂಬ ನಾಮ ಪ್ರ-
ಸಿದ್ಧಿಯನು ಪಡೆದನುದಿನದಿ
ಅದ್ವೈತರನೆಲ್ಲ ಗೆದ್ದು ಸದೆದು ಈ
ಮಧ್ವಮತವೆ ಭವರೋಗದ ಮದ್ದು
ಸದ್ವೈಷ್ಣವರನುದ್ಧಾರ ಮಾಡಿದ
ಮುದ್ದು ಪುರಂದರವಿಠಲನ ದಾಸ ||
***

pallavi

parAku bhImanendu stutiside pAlisa bEkanna

anupallavi

sarOruhAsana kaurava nAshanaginnu sambhrama mOdaka pallavapANi

caraNam 1

vANiyoDeya enna dhikkarisi nirvANa mADi daNDapANi sajjanakella vANiramaNa
ninakelleNa kANenu amitavuLLa doreye eNe kANe mUrlOkadi sarva sthANu modalAda
prANigaLalli idda prANapancarige nInu mukhyanAgi prANa mukhyaprANa salahA praNarAya

caraNam 2

uccasthAna virATana maneyali yAcaka rUpadoLaivaru tAvu pAcaka vESa
dharisi pAkava Acarisutaliralu nIcana krtyava draupadi bandu sUcisalu nI
gOpati sarva kIcaka modala vananujaranella hIsi bisADida mahimane

caraNam 3

madhyagEha bhaTTana maneyalli tAnudbhavisi duryAshrama dharisi madhvAcAryaremba
nAma prasiddhiyanu baDedanudinadi advaitaranella geddu sadedu I madhva matave bhavarOgada
muddu sadvaiSNavara -nuddhAra mADida muddu purandara viTTalana dAsa
***