ಕಾಖಂಡಕಿ ಶ್ರೀ ಕೃಷ್ಣದಾಸರು
ನೀರೇ ನೀಕರೆ ತಾರೇ ಪ್ರಾಣದೊಲ್ಲಭನಾ|ಜಾಣ ಸುಜ್ಷಾನೇ ಪ
ಹೃದಯ ಮಂದಿರದೊಳು ಅರುಹುದೀಪವಹಚ್ಚಿ| ಹಾಡಿ ನೋಡಲಿಹೆ ಮೈದೋರನ್ಯಾಕ|ಮೈದೋರ ನ್ಯಾಕ 1
ಧ್ಯಾಸಮಂಚದಿ ಭಕುತಿ ಹಾಸಿಕೆಯು ಸು| ವಾಸನೆಪುಣ್ಯಕ ವಲಿದು ಬಾರನೇ|ವಲಿದು ಬಾರನೇ 2
ಸಕಲ ನುಕೂಲಿರಲು ಕ್ರೀಡೆಗೆ ಇನಿಯನು ಪುಕಟ ದೊಲಿಯಭಾಗ್ಯ ಮಂದಳು ಕಾಣೇ|ಮಂದಳು ಕಾಣೇ 3
ಅರಿದವಳು ಎಂದು ಅರಿತು ಕೈಯ್ಯವಿಡಿದು| ಮರಳೆನ್ನ ಅಂತ ನೊಡುವರೇನೇ ನೋಡುವರೇನೇ 4
ಧರೆಯೊಳು ಭೋಗಪದಾರ್ಥಿವು ಸರ್ಪದ| ಸರಸದ ಓಲಾಯಿತು ಅಗಲಿರಲಾರೇ|ಅಗಲಿರಲಾರೇ 5
ಬಂದರೊಂದಿನ ನಿಶೆದಲಿ ಕಳೆಗೂಡದೇ| ಒಂದು ಜಾವ ವ್ಯರ್ಥಿಹೋಯಿತಲ್ಲಮ್ಮಾ|ಹೋಯಿತಲ್ಲಮ್ಮಾ 6
ಗುರುವರ ಮಹಿಪತಿ ನಂದನ ಪ್ರಭುವಿನ| ಚರಣವಗಾಣದೇ ಜೀವಿಸಲಾರೆ|ಜೀವಿಸಲಾರೆ 7
***