ಶ್ರೀ ಕಾಖಂಡಕಿ ಕೃಷ್ಣದಾಸರ ಕೃತಿ ankita ಗುರುಮಹೀಪತಿ
kakhandaki krishnadasaru ankita gurumahipati
ಪಾಹಿಮಾಂ ಪಾಹಿ ಶಿವಹರ ಮೃಡ ಶಂಭೋ ...... ಪಲ್ಲವಿ..
ಅದ್ರಿಧರ ಪ್ರಿಯ ಅದ್ರಿಕೃತಾಲಯ
ಅದ್ರಿಜಾಮಾತಾದ್ರಿ ರಿಪುನುತ
ಅದ್ರಿಜೆಪತಿ ಪಾಪಾದ್ರಿ ಕುಲಿಶಕನ
ಅದ್ರಿಶರಾಸನ ಮುದ್ರಿತ ಪಾಣೀ....
ಉನ್ನತದಿಂದಲಿ ಮನ್ಮಥ ಬರಲುದ
ಹನ್ಮಾಡಿದ ಷಣ್ಮುಖ ಜನಕನೆ
ಉನ್ಮನ ಯೊಗಿ ಸನ್ನುತ ಲೀಲಾ
ಜನ್ಮರಹಿತ ಘನ ಚಿನ್ಮಯ ರೂಪಾ...
ಬರಿಸಿದಗಂಗೆಯ ನಿರಿಸಿದೆ ಜಡೆಯೊಳು
ಧರಿಸಿದೆ ಚಂದ್ರನ ಮೆರೆಸಿದೆ ಭಕ್ತರ
ಗುರುಮಹೀಪತಿ ಯಂಕುರಿಸಿದ ಬಾಲನ
ಸಿರಸದಲಿಡು ನಿಜ ಪರಸದ ಕೈಯಾ// ....
***
ಹರಿವಾಯುಗುರುಗಳ ಅನುಗ್ರಹ ದಿಂದ ಅರ್ಥಾನುಸಂಧಾನದ ಅತ್ಯಲ್ಪ ಪ್ರಯತ್ನ 👇🏽👇🏽👇🏽👇🏽 ......
ಅರ್ಥಾನುಸಂಧಾನ ಶ್ರೀಹರಿವಾಯುಗುರುಗಳ ಅನುಗ್ರಹ ದಿಂದ ಮಾತ್ರ
ಅದ್ರಿಧರ ಪ್ರಿಯ - ಗೋವರ್ಧನಧಾರಿಯಾದ ಶ್ರೀಕೃಷ್ಣನಿಗೆ ಅತ್ಯಂತ ಪ್ರಿಯನಾದವನು, ಪರಮಾತ್ಮನ ತನ್ನ ಮೊಮ್ಮಗನಾದ ರುದ್ರದೇವರಿಗೆ ಸಖನೆಂಬುವ ಸುಖವನ್ನು ನೀಡಿದ್ದರಿಂದ ರುದ್ರದೇವರು ಅದ್ರಿಧರ ಪ್ರಿಯ
ಅದ್ರಿ ಕೃತಾಲಯ - ಕೈಲಾಸ ಪರ್ವತವನ್ನೇ ತನ್ನ ಆಲಯವನ್ನಾಗಿ ಉಳ್ಳವರು ಶ್ರೀ ರುದ್ರದೇವರು.
ಅದ್ರಿ ಮತಾದ್ರಿರಿಪುನುತ - ಅದ್ರಿಮತ - ಅದ್ರಿ ಅಂದರೇ ಇನ್ನೂ ಒಂದರ್ಥ ಸೂರ್ಯ.
ಮತ ಅಂದ್ರೆ ವಂಶ. ಸೂರ್ಯವಂಶ. ಸೂರ್ಯವಂಶಕ್ಕೆ ಅದ್ರಿ, ಶಿಖರಪ್ರಾಯವಾದ ಅಥವಾ ಶ್ರೇಷ್ಠನಾದವನು ಅರ್ಥಾತ್ ಸೂರ್ಯವಂಶದಲ್ಲಿ ಹುಟ್ಟಿಬಂದಂತಹ ಶ್ರೀ ರಾಮಚಂದ್ರದೇವರು,
ಆ ರಾಮದೇವರ ರಿಪು - ವೈರಿ, ಶತ್ರು ರಾವಣ, ರಾವಣನಿಂದ ಸ್ತುತನಾದವನು ಅಂದರೇ ರಾವಣನಿಂದ ಸ್ತುತಿಸಲ್ಪಟ್ಟವರು ಶ್ರೀ ರುದ್ರದೇವರು.
ಅದ್ರಿಜೆ ಪತಿ - ಪಾರ್ವತಿಯ ಪತಿಯೇ
ಹೇ ಮನೋನಿಯಾಮಕರಾದ ಮಹಾರುದ್ರದೇವರೆ
ಪಾಪಾದ್ರಿ ಕುಲಿಶ - ನಮ್ಮ ಪಾಪಗಳೆಂಬ ಬೆಟ್ಟಕ್ಕೆ , ಕುಲಿಶ - ವಜ್ರಾಯುಧದಂತೆ ಇರುವವರು ನೀವು..
ಕನಕಾದ್ರಿ ಶರಾಸನ ಮುದ್ರಿತ ಪಾಣಿ - ಕನಕಾದ್ರಿ ಎಂದರೆ ಕನಕಾಚಲ ಪವಿತ್ರವಾದ ಮೇರುಪರ್ವತ, ಈ ಸುಮೇರು ಪರ್ವತಕ್ಕೆ ಹೇಮಾದ್ರಿ, ಕನಕಾಚಲ, ಕನಕಾದ್ರಿ ಎನ್ನುವ ಹೆಸರುಗಳೂ ಇದ್ದವೆ. ಇಂತಹ ಸುಮೇರು ಪರ್ವತದಲ್ಲಿ ಧನುಸ್ಸು ಹಿಡಿದುಕೊಂಡು ನಿಂತವರಾದ ಹೇ ಮಹರುದ್ರದೇವರೆ ! ಎಂದು ಮಹದೇವರನ್ನ ಮೊದಲಿನ ಸಾಲಿನಲ್ಲಿ ಸ್ತುತಿಮಾಡುತ್ತಿದ್ದಾರೆ ಶ್ರೀ ಕೃಷ್ಣದಾಸರು.
ಉನ್ಮತದಿಂದ ಆ ಮನ್ಮಥ ಬರಲು - ನಿನ್ನ ತಪಸ್ಸನ್ನು (ರುದ್ರದೇವರ ತಪಸ್ಸನ್ನು ) ಭಂಗ ಪಡಿಸಲು ಉನ್ಮತ್ತತನದಿಂದ ಮನ್ಮಥನು ಬಂದಾಗ ಅವನನ್ನು ನಿನ್ನ ಮೂರನೆಯ ಕಣ್ಣಿನ ತೀಕ್ಷ್ಣದೃಷ್ಟಿಯಿಂದಲೇ ದಹನ ಮಾಡಿದವರು ,
ಹಾಗೆಯೇ ಅದೇ ಮನ್ಮಥನು ಮತ್ತೆ ಸ್ಕಂಧನಾಗಿ ರುದ್ರದೇವರಿಗೆ ಹುಟ್ಟಿಬರುವುದರಿಂದ ಷಣ್ಮುಖನ ತಂದೆಯೆಂದೂ ಸಹ ತಿಳಿಸುತ್ತ - ಒಂದೆ ಸಲ ಗಿರಿಜಾಕಲ್ಯಾಣದ ಪ್ರಸಂಗವನ್ನು, ಹಾಗೂ ತ್ರಿಪುರಾಸುರರನ್ನು ಕೊಂದ ಕಥೆಯನ್ನು ಉಲ್ಲೇಖಮಾಡುತ್ತಾರೆ.
ಉನ್ಮನ ಅಂದರೇ ಉತ್ಕಂಠತೆಯುಳ್ಳ ಅಂತ ಅರ್ಥ. ರುದ್ರದೇವರು ಸಾಮಾನ್ಯವಾದ ಯೋಗಿ ಅಲ್ಲ. ವೈಷ್ಣವೋತ್ತಮರು. ಸದಾ ರಾಮಧ್ಯಾನಾಸಕ್ತರು, ನರಸಿಂಹ ದೇವರ ಉಪಾಸಕರು. ಶ್ರೀಹರಿಯ ಮಾಹತ್ಮ್ಯವನ್ನು ಸಾರುವ ಶ್ರೇಷ್ಠ ಯೋಗಿಪುಂಗವರಾದ ಶುಕಾಚಾರ್ಯರೂ ಇವರೇ ಎನ್ನುವುದನ್ನು ತಿಳಿಸುತ್ತಾರೆ.
ಕೃತ್ತಿವಾಸನೆ ಹಿಂದೆ ನೀನಾ-
ಲ್ವತ್ತು ಕಲ್ಪ ಸಮೀರನಲಿ ಶಿ-
ಷ್ಯತ್ವ ವಹಿಸ್ಯಖಿಳಾಗಮಾರ್ಥಗಳೋದಿ ಜಲಧಿಯೊಳು /
ಹತ್ತು ಕಲ್ಪದಿ ತಪವಗೈದಾ-
ದಿತ್ಯರೊಳಗುತ್ತಮನೆನಿಸಿ ಪುರು-
ಷೋತ್ತಮನಪರಿಯಂಕಪದ ವೈದಿದಿಯೋ ಮಹದೇವ //
ಎಂದು ಶ್ರೀ ಮಾನವಿ ಪ್ರಭುಗಳಾದ ಶ್ರೀ ಜಗನ್ನಾಥದಾಸಾರ್ಯರು ತಿಳಿಸಿದಂತೆ ಶಿವ ಪದವಿಯು ಬರುವ ಮೊದಲೇ ಶ್ರೀ ಚತುರ್ಮುಖಬ್ರಹ್ಮನ ಎಪ್ಪತ್ತೈದು ವರ್ಷಗಳಲ್ಲಿ ಉಗ್ರತಪ ಎಂಬ ಹೆಸರಿನಿಂದ 40 ವರ್ಷ ವಾಯುದೇವರಲ್ಲಿ ಶಿಷ್ಯರಾಗಿ ಅನಂತವಾದ ವೇದ ಹಾಗೂ ವೇದಾರ್ಥವಾದ ಪರಮಾತ್ಮನ ಗುಣಗಳನ್ನು ಶ್ರವಣ ಮನನಾದಿಗಳಿಂದ ವ್ಯಾಸಂಗ ಮಾಡಿ ಪರಮಾತ್ಮನ ಉಪಾಸನೆಯನ್ನು ಮಾಡಿದ್ದಾರೆ ಎನ್ನವುದನ್ನು
ಶ್ರೀಮದನುನುವ್ಯಾಖ್ಯಾನದಲ್ಲಿ - ಶುಶ್ರಾವೋಗ್ರತಪಾ ಎಂದು ಹೇಳಿದ್ದಾರೆ.. ಅಪರೋಕ್ಷ ಜ್ಞಾನವಾದ ನಂತರ ಲವಣ ಸಮುದ್ರದಲ್ಲಿ ಹತ್ತು ಕಲ್ಪಗಳ ವರೆಗೆ ತಪವನ್ನಾಚರಿಸಿ, ಇಂದ್ರಾದಿ ದೇವತೆಗಳಲ್ಲಿ ಶ್ರೇಷ್ಠನೆನಿಸಿಕೊಂಡು, ಕ್ಷರಾಕ್ಷರ ಪುರುಷ ಶ್ರೇಷ್ಠನಾದ ಹರಿಯ ಪರ್ಯಂಕರೂಪನಾದ (ತಲ್ಪ) ಶೇಷ ಪದವಿಯನ್ನು ಹೊಂದುವಲರಾಗಿದ್ದಾರೆ.
ಹೀಗೇ ಪ್ರತೀಯೊಂದು ಹಂತದಲ್ಲೂ ಸಹ ಪರಮಾತ್ಮನ ಸೇವೆಯಲ್ಲಿ ಭಗವದ್ವಿಷಯಕ ಜ್ಞಾನ ಸಂಪಾದನೆಯಲ್ಲಿ ಶ್ರೀ ರುದ್ರದೇವರು ಉತ್ಕಂಠತೆಯುಳ್ಳರಾಗಿರುವರು ಆದ್ದರಿಂದ ಶ್ರೀ ಕಾಖಂಡಕಿ ಕೃಷ್ಣರಾಯರು ಇಲ್ಲಿ ಉನ್ಮನ ಯೋಗಿ ಎನ್ನುವ ಪದಪ್ರಯೋಗವನ್ನು ಮಾಡಿದ್ದಾರೆಂದು ಹೇಳಬಹುದು.
ಶ್ರೀ ರುದ್ರದೇವರ ಪ್ರತಿಯೊಂದು ಲೀಲೆಗಳು ಭಗವಂತನಲ್ಲಿ ಜ್ಞಾನವೃದ್ಧಿಯನ್ನು ಮಾಡುವ ಲೀಲೆಗಳು ಆಗಿವೆ. ಉದಾಹರಣೆಗೆ ವಿಷವನ್ನು ಉಂಡದ್ದಾಗಲಿ, ಮನ್ಮಥನನ್ನು ಕೊಂದದ್ದಾಗಲಿ ಎಲ್ಲವೂ ಸಹ ಪರಮಾತ್ಮನ ಅನುಜ್ಞಯಿಂದಲೇ ಆಗಿರುವಂಥವು, ಜೊತೆಗೆ ಜಗತ್ಕಲ್ಯಾಣಕ್ಕೆ ನಡೆದಿರುವಂತಹ ಲೀಲೆಗಳೂ ಹೌದು. ಹೀಗಾಗಿ ಎಲ್ಲ ಯೋಗ್ಯರಿಂದಲೂ ನಮಸ್ಕರಿಸಲ್ಪಡುವ ಲೀಲೆಗಳಾದ್ದರಿಂದ ಸನ್ನುತ ಲೀಲಾ ಎಂದು ಸ್ತುತಿಸಿದ್ದಾರೆ.
ನಮ್ಮ ಹಾಗೆ ಗರ್ಭವಾಸಾದಿ ದುಃಖಗಳಿಂದ ದೂರರಾದವರು ರುದ್ರದೇವರು ಹೀಗಾಗಿ ಅವರು ಜನ್ಮರಹಿತ ರು . ಅತ್ಯಂತ ಸ್ಫುರದ್ರೂಪಿಯಾದವರು ಶ್ರೀ ರುದ್ರದೇವರು, ಬ್ರಹ್ಮದೇವರ ಹುಬ್ಬುಗಳ ಮಧ್ಯದಿಂದ ಹುಟ್ಟಿಬಂದವರು.
ಹಾಗೆಯೇ ಸಚ್ಚಿದಾನಂದಾತ್ಮಕವಾದ ರೂಪವುಳ್ಳವರೂ ಹೀಗಾಗಿ ಇಲ್ಲಿ
ಘನ ಚಿನ್ಮಯರೂಪ ಶಂಭೋ ಎಂದು ಎರಡನೆಯ ಸಾಲಿನಿಂದ ಸ್ತುತಿಮಾಡುತ್ತಾರೆ.
ಬರಿಸಿದೆ ಗಂಗೆಯ ನಿರಿಸಿದೆ ಜಡೆಯೊಳು - ಧುಮ್ಮಿಕ್ಕಿ, ಭೋರ್ಗರೆದು ಬರುತ್ತಿರುವ ಗಂಗೆಯನ್ನು ತಡೆಯಲು ತಮ್ಮ ಜಟೆಗಳನ್ನೇ ಆಕಾಶದ ಕಡೆ ಹರಡಿದವರಾಗಿ ಧೂರ್ಜಟಿ , ಗಂಗಾಧರ ಎನಿಸಿಕೊಂಡವರಾಗಿದ್ದಾರೆ...
ಚಂದ್ರನ ಕಲೆಯನ್ನು ಜಟೆಯಲ್ಲಿ ಧರಿಸಿ ಚಂದ್ರಶೇಖರ ರೆನಿಸಿಕೊಂಡ ಹೇ ಮಹರುದ್ರದೇವರೇ ! ನಿಮ್ಮ ನಿಜ ಭಕ್ತರ ಮೇಲೆ ಯಾವಾಗಲೂ ನಿಮ್ಮ ಅನುಗ್ರಹಪೂರ್ವಕವಾದ ಹಸ್ತವನ್ನಿಟ್ಟು ಜಗದೊಡೆಯನಾದ ಗುರುಮಹಿಪತಿಯಾದ, ಜಗತ್ಪತಿಯಾದ ಪರಮಾತ್ಮನಲ್ಲಿ ನಮಗೆಲ್ಲಾ ನಿಶ್ಚಲವಾದ ಧೃಢವಾದ ಮನಸ್ಸನ್ನು , ಭಕ್ತಿಯನ್ನು ಕರುಣಿಸಿ ಉದ್ಧರಿಸಿರಿ... ಎಂದು ದಾಸಾರ್ಯರು ಮನೋನಿಯಾಮಕರಾದ , ಪಾರ್ವತೀಪತಿಯಾದ ಮಹಾರುದ್ರದೇವರಲ್ಲಿ ವಿನಯ ಪೂರ್ವಕವಾಗಿ ಪ್ರಾರ್ಥನೆ ಮಾಡಿಕೊಂಡಿದ್ದಾರೆ. ನಮಗೂ ಪ್ರಾರ್ಥನೆ ಮಾಡಿಕೊಳ್ಳುವ ರೀತಿಯನ್ನು ತಿಳಿಸುತ್ತಿದ್ದಾರೆ.
ಮೌಲೌ ಯಚ್ಚರಣಾಂಬು ಫಾಲಫಲಕೇ ಯಸ್ಯಾಂಘ್ರಿರೇಣುಃ ಕಥಾ
ಕರ್ಣೇ ವಾಚಿ ಯದೀಯನಾಮ ಹೃದಿ ಯದ್ರೂಪಂ ಯದಾಸ್ವಾದಿತಮ್।
ಕುಕ್ಷೌ ಯತ್ತಪಸೇsಪಟಂ ಕಟಿತಟಂ ವ್ಯಾಘ್ರಾಜಿನೇ ಸಂಸ್ಥಿತಿಃ
ಪಾದೌ ಯತ್ಪುರಚಾರಿಣೌ ಸ ಹಿ ಸದಾ ತತ್ಕಿಂಕರಃ ಶಂಕರಃ ॥
ಶ್ರೀ ಭಾವಿಸಮೀರ ವಾದಿರಾಜತೀರ್ಥ ಗುರುಸಾರ್ವಭೌಮರ ತೀರ್ಥಪ್ರಬಂಧ (ಕಾಶೀ ರುದ್ರದೇವರ ಸ್ತುತಿ)
ಶ್ರೀ ರುದ್ರದೇವರು ಪರಮ ವೈಷ್ಣವೋತ್ತಮರು ಎಂದು ವೈಷ್ಣವಾನಾಂ ಯಥಾ ಶಂಭುಃ ಎನ್ನುವ ಉಕ್ತಿಯಿಂದ ಶ್ರೀಮದ್ಭಾಗವತ ಸಾರಿದಂತೆಯೇ -
ರುದ್ರದೇವರು ಶ್ರೀಹರಿಯ ಪಾದೋದಕವಾದ ಗಂಗೆಯನ್ನು ಜಡೆಯಲ್ಲಿ ಧರಿಸಿದ್ದಾರೆ, ಹಣೆಯಲ್ಲಿ ಪರಮಾತ್ಮನ ಪಾದಧೂಳಿಯನ್ನು ಧರಿಸಿದ್ದಾರೆ, ಸದಾ ಪರಮಾತ್ಮನ ಕಥಾಶ್ರವಣದಲ್ಲಾಸಕ್ತರಾಗಿದ್ದಾರೆ (ಕಾಶಿಯಲ್ಲಿ ಬಿಂದುಮಾಧವನ ಪೂಜೆ ,ಅರ್ಚನಾದಿಗಳ ಧ್ವನಿಯನ್ನು ಸದಾ ಕಿವಿಯಿಂದ ಶ್ರವಣಮಾಡುತ್ತ ಕಾಶಿಯಲ್ಲಿ ಶ್ರೀ ರುದ್ರದೇವರು ವಾಸಮಾಡುತ್ತಿದ್ದಾರೆ). ಸದಾ ಪರಮಾತ್ಮನ ನಾಮ ಜಪ ರಾಮಧ್ಯಾನಪರಾಯಣರಾಗಿರುತ್ತಾರೆ, ಹೃದಯದಲ್ಲಿ ಬಿಂಬರೂಪಿಯಾಗಿ ನರಸಿಂಹದೇವರನ್ನು ಅಭಿನ್ನ ಸಂಕರ್ಷಣರೂಪೀ ಪರಮಾತ್ಮನನ್ನು ಧ್ಯಾನವನ್ನು ಮಾಡುತ್ತಿರುತ್ತಾರೆ. ಪರಮಾತ್ಮನ ನೈವೇದ್ಯದ ಶೇಷವನ್ನು ಸ್ವೀಕರಿಸುತ್ತಾರೆ. ಭಗವಂತನ ತಪಸ್ಸಿಗೋಸ್ಕರ ದಿಗಂಬರರಾಗಿ ವ್ಯಾಘ್ರಾಜಿನ ಆಸನಾಸಕ್ತರಾಗಿ ಜೊತೆಗೆ ವಿಷ್ಣುಕ್ಷೇತ್ರಗಳಲ್ಲಿ ಸಂಚರಿಸುತ್ತಾ ಭಗವಂತನ ಅನುಗ್ರಹ ಸಂಪಾದನೆ ಮಾಡುತ್ತಿದ್ದಾರೆ. ರುದ್ರದೇವರಿರುವ ಕ್ಷೇತ್ರಗಳೆಲ್ಲದರಲ್ಲಿಯೂ ಶ್ರೀಹರಿಯ ವಾಸವಿದ್ದೇ ಇರುತ್ತದೆ. ಹಾಗೆಯೇ ಸದಾ ವೈಷ್ಣವ ಕ್ಷೇತ್ರ ಸಂಚಾರಾಸಕ್ತರಾಗಿಯೇ ಶ್ರೀ ರುದ್ರದೇವರು ಇರುತ್ತಾರೆ. ಹೀಗಾಗಿ ರುದ್ರದೇವರು ಪರಮಾತ್ಮನ ಕಿಂಕರರೂ ಹೌದು, ಪ್ರೀತಿಪಾತ್ರರೂ ಹೌದು, ವೈಷ್ಣವೋತ್ತಮರೂ ಹೌದು.
ಇದರಿಂದ ರುದ್ರದೇವರು ಪರಮ ವೈಷ್ಣವೋತ್ತಮರು ಎನ್ನುವುದು ಮತ್ತು ವೈಷ್ಣವರ ಮುಖ್ಯ ಲಕ್ಷಣಗಳೇನು ಎನ್ನುವುದನ್ನು ತಮ್ಮ ಭಕ್ತರಿಗೆ ತೋರಿಸುತ್ತಿದ್ದಾರೆ.
ತ್ರಿಶೂಲಪಾಣಿ, ಮುಕ್ಕಣ್ಣ,ಧವಲಕಾಯ, ಜಪನಿರತ, ಪಾಪನಾಶಕ, ದಕ್ಷಯಜ್ಞನಾಶಕರ, ನಾಗಭೂಷಣ, ಗಂಗಾಧರ,
ಯತಿಗಳಿಂದಲೂ ಸ್ತ್ಯುತ್ಯ, ಗೌರೀಪ್ರಿಯ, ಇಂದ್ರಾದಿವಂದ್ಯ, ಚಂದ್ರಮೌಲಿ, ಕಮಲನೇತ್ರ, ಕಾಮಹರ, ಅಪಾರಜ್ಞಾನಿ, ನಾರದಾದಿಸ್ತುತ್ಯ,
ನೀಲಕಂಠ, ಸುಂದರರೂಪ,
ನಮಕಚಮಕಾದಿವೇದಪ್ರತಿಪಾದ್ಯ, ತ್ರಿಪುರಾರಿ, ಕಪರ್ದೀ, ಭಕ್ತಪ್ರಿಯ ಹೀಗೆ ಅನೇಕೆ ಹಿರಿಮೆಗಳು ಹೊಂದಿದವರು 28 ಸಲ್ಲಕ್ಷಣೋಪೇತರಾದ ಮನೋನಿಯಾಮಕರಾದ ಶ್ರೀರುದ್ರದೇವರು ಸದಾ ನಮ್ಮಿಂದ ಉತ್ತಮ ಸಾಧನೆಯನ್ನು ಮಾಡಿಸಲಿ ಎಂದು ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾ.
Smt. Padma Sirish
ಜೈ ವಿಜಯರಾಯ
ನಾದನೀರಾಜನದಿಂ ದಾಸಸುರಭಿ 🙏🏽
***
ಅದ್ರಿಧರ ಪ್ರಿಯ - ಗೋವರ್ಧನಧಾರಿಯಾದ ಶ್ರೀಕೃಷ್ಣನಿಗೆ ಅತ್ಯಂತ ಪ್ರಿಯನಾದವನು..
ಅದ್ರಿ ಕೃತಾಲಯ - ಕೈಲಾಸ ಪರ್ವತವನ್ನೇ ತನ್ನ ಆಲಯವನ್ನಾಗಿ ಉಳ್ಳವನು..
ಅದ್ರಿ ಮತಾದ್ರಿರಿಪುನುತ - ಅದ್ರಿಮತ - ಅದ್ರಿ ಅಂದರೇ ಇನ್ನೂ ಒಂದರ್ಥ ಸೂರ್ಯ.
ಮತ ಅಂದ್ರೆ ವಂಶ. ಸೂರ್ಯವಂಶ. ಸೂರ್ಯವಂಶಕ್ಕೆ ಅದ್ರಿ ಅಂದರೇ ಶ್ರೇಷ್ಠನಾದವನು ಅರ್ಥಾತ್ ರಘುಕುಲೋತ್ತುಮ ರಾಮಚಂದ್ರದೇವರು,
ಆ ರಾಮದೇವರ ರಿಪು ಅಂದರೇ ವೈರಿ, ಶತ್ರು ರಾವಣ, ರಾವಣನಿಂದ ಸ್ತುತನಾದವನು ಅಂದರೇ ರಾವಣನಿಂದ ಸ್ತುತಿಸಲ್ಪಟ್ಟವನು-
ಅದ್ರಿಜೆ ಪತಿ - ಪಾರ್ವತಿಯ ಪತಿಯೇ, ಹೇ ಮನೋನಿಯಾಮಕರಾದ ಮಹಾರುದ್ರದೇವರು ಪಾಪಾದ್ರಿ ಕುಲಿಶ - ನಮ್ಮ ಪಾಪಗಳೆಂಬ ಬೆಟ್ಟಕ್ಕೆ , ಕುಲಿಶ - ವಜ್ರಾಯುಧದಂತೆ ಇರುವವರು..
ಕನಕಾದ್ರಿ ಶರಾಸನ ಮುದ್ರಿತ ಪಾಣಿ - ಕನಕಾದ್ರಿ ಅಂದರೇ ಕನಕಾಚಲ , ಕನಕಾಚಲ ಅಂದರೇ ಸುಮೇರು ಪರ್ವತ, ಈ ಸುಮೇರು ಪರ್ವತಕ್ಕೆ ಹೇಮಾದ್ರಿ , ಕನಕಾಚಲ, ಕನಕಾದ್ರಿ ಎನ್ನುವ ಹೆಸರುಗಳೂ ಇದ್ದವೆ. ಇಂತಹಾ ಸುಮೇರು ಪರ್ವತದಲ್ಲಿ ಧನುಸ್ಸು ಹಿಡಿದುಕೊಂಡು ನಿಂತವನಾದ ಹೇ ಪರಮಶಿವನೇ ! ಹೇ ಪರಮೇಶ್ವರನೇ... ಅಂತ ಮೊದಲ ಸಾಲಿನ ಅರ್ಥ...
ಉನ್ಮತದಿಂದ ಆ ಮನ್ಮಥ ಬರಲು - ನಿನ್ನ ತಪಸ್ಸನ್ನು (ರುದ್ರದೇವರ ತಪಸ್ಸನ್ನು ) ಭಂಗ ಪಡಿಸಲು ಉನ್ಮತ್ತತನದಿಂದ ಮನ್ಮಥನು ಬಂದಾಗ ಅವನನ್ನು ನಿನ್ನ ಮೂರನೆಯ ಕಣ್ಣಿನ ತೀಕ್ಷ್ಣದೃಷ್ಟಿಯಂದಲೇ ದಹನ ಮಾಡಿದ, ಹಾಗೂ ಷಣ್ಮುಖನ ತಂದೆ ನೀನು..
ಉನ್ಮನ ಅಂದರೇ ಉತ್ಕಂಠತೆಯುಳ್ಳ ಅಂತ ಅರ್ಥ, ನೀನು ಸಾಮಾನ್ಯ ಯೋಗಿ ಅಲ್ಲ ಸ್ವಾಮೀ ... ಮಹಾ ಯೋಗಿ ಅಂತಾರೆ...
ಕೃತ್ತಿವಾಸನೆ ಹಿಂದೆ ನೀನಾ-
ಲ್ವತ್ತು ಕಲ್ಪ ಸಮೀರನಲಿ ಶಿ-
ಷ್ಯತ್ವ ವಹಿಸ್ಯಖಿಳಾಗಮಾರ್ಥಗಳೋದಿ ಜಲಧಿಯೊಳು /
ಹತ್ತು ಕಲ್ಪದಿ ತಪವಗೈದಾ-
ದಿತ್ಯರೊಳಗುತ್ತಮನೆನಿಸಿ ಪುರು-
ಷೋತ್ತಮನಪರಿಯಂಕಪದ ವೈದಿದಿಯೋ ಮಹದೇವ //
ಎಂದು ಶ್ರೀ ಮಾನವಿ ಪ್ರಭುಗಳಾದ ಶ್ರೀ ಜಗನ್ನಾಥದಾಸಾರ್ಯರು ತಿಳಿಸಿದಂತೆ ಶಿವ ಪದವಿಯು ಬರುವ ಮುಂದೇ(ಮೊದಲೆ) ಚತುರ್ಮುಖಬ್ರಹ್ಮನ ಎಪ್ಪತ್ತೈದು ವರ್ಷಗಳಲ್ಲಿ ಉಗ್ರತಪ ಎಂಬ ಹೆಸರಿನಿಂದ 40 ವರ್ಷ ವಾಯುದೇವರಲ್ಲಿ ಶಿಷ್ಯನಾಗಿ ಅನಂತವಾದ ವೇದ ಹಾಗೂ ವೇದಾರ್ಥವಾದ ಪರಮಾತ್ಮನ ಗುಣಗಳನ್ನು ಶ್ರವಣ ಮನನಾದಿಗಳಿಂದ ವ್ಯಾಸಂಗ ಮಾಡಿ ಪರಮಾತ್ಮನ ಉಪಾಸನೆ ಮಾಡಿದ್ದಾರೆ... ಎನ್ನುವುದನ್ನೇ ಅನುವ್ಯಾಖ್ಯಾನದಲ್ಲಿ - ಶುಶ್ರಾವೋಗ್ರತಪಾ ಎಂದು ಹೇಳಿದ್ದಾರೆ.. ಅಪರೋಕ್ಷ ಜ್ಞಾನವಾದ ನಂತರ ಲವಣ ಸಮುದ್ರದಲ್ಲಿ ಹತ್ತು ಕಲ್ಪಗಳ ವರೆಗೆ ತಪಸ್ಸಾಚರಿಸಿ, ಇಂದ್ರಾದಿ ದೇವತೆಗಳಲ್ಲಿ ಶ್ರೇಷ್ಠನೆನಿಸಿಕೊಂಡು, ಕ್ಷರಾಕ್ಷರ ಪುರುಷ ಶ್ರೇಷ್ಠನಾದ ಹರಿಯ ಪರ್ಯಂಕರೂಪನಾದ (ತಲ್ಪ) ಶೇಷ ಪದವಿಯನ್ನು ಹೊಂದುವರಾಗಿದ್ದಾರೆ. ಹೀಗೇ ಪ್ರತೀಯೊಂದು ಹಂತದಲ್ಲೂ ಸಹಾ ಪರಮಾತ್ಮನ ಸೇವೆಯಲ್ಲಿ ಭಗವದ್ವಿಷಯಕ ಜ್ಞಾನ ಸಂಪಾದನೆಯಲ್ಲಿ ರುದ್ರದೇವರು ಉತ್ಕಂಠತೆಯುಳ್ಳರಾಗಿರುವರು ಆದ್ದರಿಂದ ಶ್ರೀ ಕಾಖಂಡಕಿ ಮಹಿಪತಿದಾಸರು ಇಲ್ಲಿ ಉನ್ಮನ ಯೋಗಿ ಎನ್ನುವ ಪದಪ್ರಯೋಗ ಮಾಡಿದ್ದಾರೆ ಶ್ರೀ ದಾಸಾರ್ಯರು...
ರುದ್ರದೇವರ ಪ್ರತಿಯೊಂದು ಲೀಲೆಗಳು ಭಗವಂತನಲ್ಲಿ ಜ್ಞಾನವೃದ್ಧಿಯನ್ನು ಮಾಡುವ ಲೀಲೆಗಳೇನೇ...ಆದ್ದರಿಂದ ಎಲ್ಲರಿಂದಲೂ ಒಳ್ಳೆಯರೀತಿಯಿಂದ ನಮಸ್ಕರಿಸಲ್ಪಡುವ ಲೀಲೆಗಳಾದ್ದರಿಂದ ಸನ್ನುತ ಲೀಲಾ ಅಂತಾರೆ...
ನಮ್ಮ ಹಾಗೆ ಗರ್ಭವಾಸಾದಿ ದುಃಖಗಳಿಂದ ದೂರರಾದವರು ರುದ್ರದೇವರು ಹೀಗಾಗಿ ಅವರು ಜನ್ಮರಹಿತ ರು . ಅತ್ಯಂತ ಸ್ಫುರದ್ರೂಪಿಯಾದವರು ರುದ್ರದೇವರು... ಸಚ್ಚಿದಾನಂದಾತ್ಮಕವಾದ ರೂಪವುಳ್ಳವರೂ .. ಆದ್ದರಿಂದ ಇಲ್ಲಿ
ಘನ ಚಿನ್ಮಯರೂಪ ಶಂಭೋ ಎಂದಿದ್ದಾರೆ.... ಎರಡನೇ ಸಾಲಿನ ಮುಖಾಂತರ...
ಧುಮ್ಮಿಕ್ಕಿ, ಭೋರ್ಗರೆದು ಬರುತ್ತಿರುವ ಗಂಗೆಯನ್ನು ತಡೆಯಲು ತಮ್ಮ ಜಟೆಗಳನ್ನೇ ಆಕಾಶದ ಕಡೆ ಹರಡಿದವರಾಗಿ ಧೂರ್ಜಟಿ , ಗಂಗಾಧರ ಎನಿಸಿಕೊಂಡವರಾಗಿದ್ದಾರೆ...
ಚಂದ್ರನ ಕಲೆಯನ್ನು ಜಟೆಯಲ್ಲಿ ಧರಿಸಿ ಚಂದ್ರಶೇಖರ ರೆನಿಸಿಕೊಂಡ ಹೇ ಮಹರುದ್ರದೇವರೇ...! ನಿಮ್ಮ ನಿಜ ಭಕ್ತರ ಮೇಲೆ ಯಾವಾಗಲೂ ನಿಮ್ಮ ಅನುಗ್ರಹಪೂರ್ವಕವಾದ ಹಸ್ತವನ್ನಿಟ್ಟು ಜಗದೊಡೆಯನಾದ ಗುರುಮಹಿಪತಿಯಾದ ಅರ್ಥಾತ್ ಜಗತ್ಪತಿಯಾದ ಪರಮಾತ್ಮನಲ್ಲಿ ನಮಗೆಲ್ಲಾ ನಿಶ್ಚಲವಾದ ಧೃಢವಾದ ಮನಸ್ಸನ್ನು , ಭಕ್ತಿಯನ್ನು ಕರುಣಿಸಿ ಉದ್ಧರಿಸಿ... ಎಂದು ದಾಸಾರ್ಯರು ಮನೋನಿಯಾಮಕರಾದ , ಪಾರ್ವತೀಪತಿಯಾದ ಮಹಾರುದ್ರದೇವರಲ್ಲಿ ವಿನಯ ಪೂರ್ವಕವಾಗಿ ಪ್ರಾರ್ಥನೆ ಮಾಡಿಕೊಂಡಿದ್ದಾರೆ .... ನಮಗೂ ಪ್ರಾರ್ಥನೆ ಮಾಡಿಕೊಳ್ಳುವ ರೀತಿಯನ್ನು ತಿಳಿಸುತ್ತಿದ್ದಾರೆ ಶ್ರೀ ಕೃಷ್ಣದಾಸಾರ್ಯರು.....
-Smt. Padma Sirish
ನಾದನೀರಾಜನದಿಂ ದಾಸಸುರಭಿ 🙏🏽
***
ರಾಗ - ಮಲಯಮಾರುತ : ತಾಳ - ಆದಿತಾಳ
ಪಾಹಿಮಾಂ ಪಾಹಿ ಶಿವಹರ ಮೃಡ ಶಂಭೋ ll ಪ ll
ಅದ್ರಿಧರಪ್ರಿಯ ಅದ್ರಿಕೃತಾಲಯ l
ಅದ್ರಿಜಾಮಾತಾದ್ರಿ ರಿಪುನುತ l
ಅದ್ರಿಜೆ ಪತಿ ಪಾಪಾದ್ರಿ ಕುಲಿಶ ಕನ l
ಕಾದ್ರಿ ಶರಾಸನ ಮುದ್ರಿತ ಪಾಣೆ ll 1 ll
ಉನ್ಮತದಿಂದಲಿ ಮನ್ಮಥ ಬರಲು ದ- l
ಹನ್ಮಾಡಿದ ಷಣ್ಮುಖ ಜನಕನೆ l
ಉನ್ಮನಯೋಗಿ ಸನ್ನುತ ಲೀಲಾ l
ಜನ್ಮರಹಿತ ಘನ ಚಿನ್ಮಯ ರೂಪಾ ll 2 ll
ಭರಿಸಿದ ಗಂಗೆಯ ನಿರಿಸಿದೆ ಜಡೆಯೊಳು l
ಧರಿಸಿದೆ ಚಂದ್ರನ ಮೆರೆಸಿದೆ ಭಕ್ತರ l
ಗುರುಮಹೀಪತಿ ಯಂಕುರಿಸಿದ ಬಾಲನ l
ಸಿರಸದಲಿಡು ನಿಜ ಪರಸಾದ ಕೈಯ ll 3 ll
*****