Showing posts with label ಸುರನರರ ಸಹಸಕ್ಹರಿ ಸಹಾಯ ಬೇಕುನರಹರಿಯು prasannavenkata. Show all posts
Showing posts with label ಸುರನರರ ಸಹಸಕ್ಹರಿ ಸಹಾಯ ಬೇಕುನರಹರಿಯು prasannavenkata. Show all posts

Monday, 18 November 2019

ಸುರನರರ ಸಹಸಕ್ಹರಿ ಸಹಾಯ ಬೇಕುನರಹರಿಯು ankita prasannavenkata

by ಪ್ರಸನ್ನವೆಂಕಟದಾಸರು
ಸುರನರರ ಸಹಸಕ್ಹರಿ ಸಹಾಯ ಬೇಕುನರಹರಿಯು ಕೊಡದನಕ ದೊರೆವುದೇನು ಪ.

ಹರಿಕೊಡದೆ ಅಜಭವರಿಗರಸುತನವೆಲ್ಲಿಯದುಹರಿಕೊಡದೆ ಸಿರಿಸಂಪದೆರವು ತನಗೆಹರಿಕೊಡದೆ ಸಕಳ ಜೀವರಿಗಶನ ದುರ್ಲಭವುಹರಿಕೊಡುವನಿರಲು ಅನ್ಯರಿಗೆ ಸ್ವಾತಂತ್ರ್ಯಿಲ್ಲ 1

ಹರಿಯೆ ಜಡಚೇತನರ ಹೊರೆದುದ್ಭವಿಸಿ ಅಳಿವಹರಿಯಾವ ಕಾರ್ಯಕ್ಕೆ ಬೆರೆದು ಬರುವಹರಿಅಂತರ್ಬಹಿರದೊಳು ಭರಿತನಾಗಿಹ ತತ್ವಹರಿಯಿಲ್ಲದಾವ ತಾಣಿಲ್ಲ ನಂಬು ಹರಿಯ 2

ಹರಿನುಡಿಯದಾರಿಗುತ್ತರಗುಡಲು ಬಲವಿಲ್ಲಹರಿನುಡಿಯನಾಲಿಪರು ಸಿರಿದಿವಿಜರುಹರಿನುಡಿಯೆ ಗತಿಮತಿಯು ಹರಿಯೆನ್ನ ದಾತಾರಹರಿಪ್ರಸನ್ವೆಂಕಟಪ ನಿರುತ ಬಿಡನೆನ್ನ3
*******