Showing posts with label ಮಾಯೆ ಎನ್ನ ಕಾಯವನ್ನುಪಾಯದಿಂದ ಮೋಹಿಸಿ purandara vittala MAAYE ENNA KAAYAVANNUPAAYADINDA MOHISI. Show all posts
Showing posts with label ಮಾಯೆ ಎನ್ನ ಕಾಯವನ್ನುಪಾಯದಿಂದ ಮೋಹಿಸಿ purandara vittala MAAYE ENNA KAAYAVANNUPAAYADINDA MOHISI. Show all posts

Friday 1 October 2021

ಮಾಯೆ ಎನ್ನ ಕಾಯವನ್ನುಪಾಯದಿಂದ ಮೋಹಿಸಿ purandara vittala MAAYE ENNA KAAYAVANNUPAAYADINDA MOHISI





ಮಾಯೆ ಎನ್ನ ಕಾಯವನ್ನುಪಾಯದಿಂದ ಮೋಹಿಸಿ
ಬಾಯಿ ಮುಚ್ಚಿ ಕೊಲ್ಲುತಾಳೆ ಕಾಯೋ ಲಕ್ಷ್ಮಿಯರಸನೆ

ಮಾತಾ ಪಿತರ ವಿಕಳದಿಂದ ಶ್ವೇತ ಬಿಂದು ಬೀಳಲು
ರಕ್ತ ಕೀವು ತಾಕಿ ಮಾಂಸ ಚೀಲದೊಳಗೆ ಬೆಳೆದ ನಾ
ರಕ್ತ ಸೂಸಿ ಬಸಿರೊಳೊಂಭತ್ತು ತಿಂಗಳಿದ್ದೆ ನಾ
ಮತ್ತೆ ಭೂಮಿಯೊಳಗೆ ಜನಿಸಲಾರೆ ಲಕ್ಷ್ಮಿಯರಸನೆ

ಎಲುಬುಗಳವ ಮಾಡಿ ನರದ ಬಳ್ಳಿಯಲ್ಲಿ ಬಿಗಿಯುತ
ಒಳಗೆ ರಕ್ತ ಮಾಂಸದಿಂದ ಮಲವು ಮಜ್ಜ ಮೇದಾದಿ
ಮಲಿನ ಚರ್ಮವನು ಹೊದಿಕೆಯೆಳೆದು ನಿತ್ಯ ಬೆಳೆವ ಈ
ಹೊಲೆಯ ಗೂಡಿನೊಳಗೆ ಜನಿಸಲಾರೆ ಲಕ್ಷ್ಮಿಯರಸನೆ

ಎನ್ನ ಸತಿಯು ಎನ್ನ ಸುತರು ಎನ್ನ ಬಂಧು ಬಳಗವು
ಇನ್ನು ಸಾಕಿ ಸಲಹು ಎಂದು ಎನ್ನ ಹರಿದು ತಿಂಬರು
ತನ್ನ ಸೆಳೆದೊಯ್ಯುವಾಗ ಬೆನ್ನಾಪರ ಕಾಣೆನೋ
ಎನ್ನ ಸಲಹಬೇಕು ನೀನು ಚೆನ್ನ ಲಕ್ಷ್ಮಿಯರಸನೆ

ಇರುವೆ ಮೊದಲು ಮಾಡಿ ಆನೆ ಕಡೆಯ ಮಾಡಿ ಬಸಿರಿನಲ್ಲಿ
ಮರಳಿ ಮರಳಿ ಹುಟ್ಟಿ ಹೊಂದಿ ತೊಳಲಿ ಬಳಲಿ ಬಂದೆ ನಾ
ಇರುಸು ಗಾಳಿಯೊಳಗೆ ಬಿದ್ದ ತರೆಗೆಲೆಯ ಅಂದವಾಯ್ತು
ಮರಳಿ ಮರಳಿ ಹುಟ್ಟು ಹೊಂದಲಾರೆ ಲಕ್ಷ್ಮಿಯರಸನೆ

ಲಕ್ಷ ಜೀವರಾಶಿ ನಿನ್ನ ಕುಕ್ಷಿಯೊಳಗಿಂಬಿಟ್ಟು
ಅಚ್ಯುತಾ ಅನಂತ ನನ್ನನೇಕೆ ಹೊರಗು ಮಾಡಿದೆ
ಮಚ್ಚರಿಸದೆನ್ನ ನೀನು ಕುಕ್ಷಿಯೊಳಗಿಂಬಿಟ್ಟು
ರಕ್ಷಿಸಯ್ಯ ಲಕುಮಿಯರಸ ಪುರಂದರವಿಠಲಯ್ಯ
***


pallavi

mAye enna kyavannupAyadinda nOyisi bAyi mucci kollutALe kAyO lakSmiyarasane

caraNam 1

mAtA pitara vikaLadinda shvEta bindu bILalu rakta kIvu tAki mAmsa cIladoLage beLeda nA
rakta susi basiroLembhattu tingaLidde nA matte bhUmiyoLage janisalAre lakSmiyarasane

caraNam 2

elubu gaLava mADi narada baLLiyalli bigiyuta oLage rakta mAmsadinda malavu majja mEdAdi
malina carmavanu hodikeyaLedu nitya beLeva holeya gUDinoLage janisalAre lakSmiyarasane

caraNam 3

enna satiyu enna sutaru enna bandhu baLagavu innu sAki salahu endu enna haridu timbaru
tanna seLedoyyuvAga bennApara kANenO enna salahabhEku nInu cenna laksmiyarasane

caraNam 4

iruve modalu mADi Ane kaDeya mADi basirinalli maraLi maraLi huTTi hondi toLali baLali munde nA
irusu kALiyoLage bidda taregeleya andavAitu maraLi maraLi huTTu hondalAre lakSmiyarasane

caraNam 5

lakSa jIvarAshi ninna kukSiyoLagimbiTTu acyutAnanda nannanEke horagu mADide
maccarisadenna nInu kukSiyoLagimbiTTu rakSisayya lakumiyarasa purandara viTTala
***

ಮಾಯೆ ಎನ್ನ ಕಾಯವನ್ನು ಪಾಯದಿಂದ ಮೋಹಿಸಿ |
ಬಾಯ ಮುಚ್ಚಿ ಕೊಲ್ಲುತಿಹಳು ಕಾಯೊ ಲಕ್ಷ್ಮೀರಮಣನೆ ಪ

ಮಾತೆ-ಪಿತರ ವಿಷಯದಿಂದ ಶ್ವೇತಬಿಂದು ಬೀಳಲಾಗಿ |ಕೀತ ತತ್ತಿ ಬಲಿದು ಮಾಸಚೀಲದೊಳಗೆ ಬೆಳೆದೆನು ||ರಕ್ತಗೂಡಿ ಬಸಿರೊಳೊಂಬತ್ತು ತಿಂಗಳಿದ್ದೆ ನಾನು |ಸತ್ತು ಮತ್ತೆ ಹುಟ್ಟ ಹೋಗಲಾರೆ ಲಕ್ಷ್ಮೀರಮಣನೆ 1

ಎಲವು ಕಂಬಮಾಡಿ ನರದ ಬಳ್ಳಿಯಲ್ಲಿ ಬಿಗಿದು ಬಿಗಿದು |ಒಳಗೆ ರಕ್ತದಿಂದ ಮೆತ್ತಿ ಹೊಸೆ ಪಾಪದಿಂದ ನಿಂದೆ ||ನೆಲೆಯ ಮನೆಯ ಮಾಡಿ ಚರ್ಮಹೊಲಿzಯ ಹೊದಿಕೆ ಹೊದಿಸಿದಂಥ |ಹೊಲೆಯ ಗೂಡಿನಲ್ಲಿ ಜನಿಸಲಾರೆ ಲಕ್ಷ್ಮೀರಮಣನೆ 2

ಎನ್ನ ಸತಿಯು ಎನ್ನ ಸುತರು ಎನ್ನ ಬಂಧು - ಬಳಗವು |ಎನ್ನ ಸಾಕಿ ಸಲಹು ಎಂದು ಹರಿದು ತಿಂಬರು ||ಎನ್ನ ತನುವ ಜವನು ಬಂದು ಎಳೆದುಕೊಂಡು ಒಯ್ಯುವಾಗ |ಬೆನ್ನಬಪ್ಪರಾರ ಕಾಣೆ ಚೆನ್ನ ಲಕ್ಷ್ಮೀರಮಣನೇ 3

ಇರುವೆ ಮೊದಲು ಆನೆ ಕಡೆಯು ಬಸಿರೊಳು ಬಂದೆ ನಾ |ಹರಿದು ಪಾಪಕರ್ಮದಿಂದೆ ತೊಪಳಲಿಬಳಲಿ ನೊಂದೆ ನಾ ||ಬಿರುಗಾಳಿಗೆ ಸಿಕ್ಕ ಮರದ ತರಗೆಲೆಯಂತುದುರಿ ನಾ |ಮರಳಿ ಮರಳಿ ಸತ್ತು ಹುಟ್ಟಲಾರೆ ಲಕ್ಷ್ಮೀರಮಣನೆ 4

ಲಕ್ಷ ಜೀವರಾಶಿಗಳನು ಕುಕ್ಷಿಯೊಳಗೆ ಇರಿಸಿ ನಿನ್ನ |ಅಕ್ಷಯ- ಅನಂತ ನನ್ನನೇಕೆ ಹೊರಗೆ ಮಾಡಿದೆ ||ಈಕ್ಷಿಸುತಿರು ಎನ್ನ ನೀನು ಕುಕ್ಷಿಯೊಳಗೆ ಇಂಬನಿತ್ತು |ರಕ್ಷಿಸಯ್ಯ ಲಕ್ಷೀಪತಿಪುರಂದರವಿಠಲನೆ5
****

ರಾಗ ಧನ್ಯಾಸಿ. ಅಟ ತಾಳ (raga, taala may differ in audio)