Showing posts with label ಏಸು ಜನ್ಮದ ಫಲವೋ ಈ ಗುರು ಕರುಣಾ lakshmipati vittala gurushreesha vittala stutih. Show all posts
Showing posts with label ಏಸು ಜನ್ಮದ ಫಲವೋ ಈ ಗುರು ಕರುಣಾ lakshmipati vittala gurushreesha vittala stutih. Show all posts

Saturday, 1 May 2021

ಏಸು ಜನ್ಮದ ಫಲವೋ ಈ ಗುರು ಕರುಣಾ ankita lakshmipati vittala gurushreesha vittala stutih

by lakshmipati vittala dasa (hanumaddasaru) 1760-1858 kampli

gurushreesha vittala stutih


ರಾಗ : ಕಲ್ಯಾಣಿ ತಾಳ : ತ್ರಿಪುಟ


ಏಸು ಜನ್ಮದ ಫಲವೋ ಈ ಗುರು ಕರುಣಾ ।

ಏಸು ಜನ್ಮದ ಫಲವೋ ।। ಪಲ್ಲವಿ ।।


ಏಸು ಜನ್ಮದ ಫಲ ।

ಲೇಸೂ ಸೂರಿ ಗುರು ।

ಶ್ರೀಶರಾಯರ ಕರುಣಾ ।

ಸೂಸಿದ ಸುಖವೆನಗೆ ।। ಅ. ಪ ।।


ಕೇವಲ ದ್ರವವಾರಿ ವತ್ಸ

ತನ್ನಯ ನಿಹಾ ।

ಗೋವಿನ ಕಾಣದೆ

ಪುಡುಕುತಿರೆ ।

ಆ ವ್ಯಾಳ್ಯೆ ಸುರಧೇನು

ತಾನೆ ಒದಗಿ ಬಂದು ।

ಸಾವಧಾನದಿ ಮೊಲಿಯಾನುಣಿಸಿ

ಸಂತೈಸಿದಂತೆ ।। ಚರಣ ।।


ಬ್ಯಾಸಿಗಿ ಬಿಸಿಲಿಂದ ಸಂತಪ್ತನಾಗಿ ನಿ ।

ಶ್ವಾಸಾವೈದುವ ಸಮಯದಲ್ಲಿ ಮತ್ತೆ ।

ಭೂಸುರ ರೂಪದಿ ಕಲ್ಪವೃಕ್ಷವೇ ಬಂದು ।

ಲೇಸಾದ ಉದಕ ಪೂರೈಸಿ ನೆಲಳಿತ್ತಂತೆ ।। ಚರಣ ।।


ಪರಮ ದರಿದ್ರನೋರ್ವನು ದೇಶದೇಶವಾ ।

ತಿರುಗುತಿರಲು ಚಿಂತಾಮಣಿಯು ತಾನೆ ।

ಭರದಿಂದ ಕೈಯಲ್ಲಿವೊದಗಿ ತಾ ಬಂದಂತೆ ।

ಸಿರಿ ಲಕ್ಷ್ಮೀಪತಿ ವಿಠ್ಠಲ ಪರನೆಂದು ಅರುಹಿದ ।। ಚರಣ ।।

*****