Showing posts with label ನೀನೇ ಶ್ರಾದ್ಧದನ್ನವನುಂಡವಾ ನಾನರಿಯದಂತೆ ಯೆನ್ನ ಗೃಹದೊಳು ಶ್ರೀವೈಷ್ಣವನಾಗಿ vaikunta vittala. Show all posts
Showing posts with label ನೀನೇ ಶ್ರಾದ್ಧದನ್ನವನುಂಡವಾ ನಾನರಿಯದಂತೆ ಯೆನ್ನ ಗೃಹದೊಳು ಶ್ರೀವೈಷ್ಣವನಾಗಿ vaikunta vittala. Show all posts

Sunday 1 August 2021

ನೀನೇ ಶ್ರಾದ್ಧದನ್ನವನುಂಡವಾ ನಾನರಿಯದಂತೆ ಯೆನ್ನ ಗೃಹದೊಳು ಶ್ರೀವೈಷ್ಣವನಾಗಿ ankita vaikunta vittala

 ..

kruti by ಬೇಲೂರು ವೈಕುಂಠ ದಾಸರು belur vaikunta dasaru

ಶ್ರೀ ಬೇಲೂರು ವೈಕುಂಠದಾಸರ ಕೃತಿ 


 ರಾಗ : ಪೂರ್ವಿಕಲ್ಯಾಣಿ   ಆದಿತಾಳ 


ನೀನೆ ಶ್ರಾದ್ಧದನ್ನವನುಂಡವಾ ನಾನರಿಯದಂತೆ

ಎನ್ನ ಗೃಹದೊಳ್ ವೈಷ್ಣವನಾಗಿ ॥ಪ॥


ಬಾಣಸಿಗನಾದವನು ನೀನೆ ನಾರಾಯಣನೊ

ಕ್ಷೋಣಿಯೋ ರವಿಯೊ ಜನಪತಿಯೊ ರತಿಯೊ

ಯೋನಿಯೋ ಸುರಧೇನು ಬಂದಾತ ಧನಂಜಯ

ತಾನೆ ಎನ್ನಲ್ಲಿಧಾಗಾಯಿತ್ಯಲೆ ದೇವಾ॥೧॥


ತಿಳಿದೆ ನಾನೀಗ ನಿನ್ನಯ ಕೂಡೆ ಬಂದ

ಬಿಳಿಯ ಜುಟ್ಟಿನ ಎಣ್ಣೆಗೆಂಪಿನವರೂ

ತಳಿತಕರದಲಿ ಪುಸ್ತಕದ ಕೊಂಕಳ ಬುಟ್ಟಿ

ಇಳಿದ ಮಡಿಗೊಡೆ ಅವರಾರು ಪೇಳೆಲೆ ದೇವ॥೨॥


ಆವಾವ ಸ್ಥಾನಕ್ಕೆ ಆರಾರ ನೇಮಿಸಿದೆ ನೀ

ಯಾವ ಸ್ಥಾನಕ್ಕೆ ಯೋಗ್ಯನಾದೆ

ದೇವ ಉಪಾಧ್ಯಾಯರು ಅಭಿಶ್ರವಣವನು ಪೇಳೆ

ಕೋವಿದವರಾರು ಶ್ರೀವೈಷ್ಣವರಾರೆಲೆ ದೇವ॥೩॥


ಜನಿಮಿಸ್ತಿ ನಿಲಯಕೆ ಕಾರವೋ ತಾನೋರ್ವ

ಇನಿತು ವೇದಾಂತಗಳು ಪೊಗಳಿತಿವಕೊ

ನಿರುತಕೆ ಬಂಧನದುಗುಳೆ ಕುಡತಿ ಪಾಲಿಗೆ

ಮನವ ಸೋಲಿಸ ಬಂದ್ಯಾ ಎಲ ನಿತ್ಯತೃಪ್ತಾ॥೪॥


ದೇವನಂದದದಲಿ ಶ್ರೀವೈಷ್ಣವನು ನೀನಾಗಿ

ಶರಣ ಪಿತೃಗಳಿಗೆ ಶ್ರಾದ್ಧವನುಂಡದೂ

ಪರಿಹಾಸ್ಯವಾಯ್ತೆನ್ನ ನೂರೊಂದು ಕುಲಗಳಿಗೆ

ಪರಮಪದವಿತ್ತೆ ವೈಕುಂಠ ಚನ್ನಿಗರಾಯ ॥೫॥

****

ಕೃತಿ ರಚನೆಯ ಸಂದರ್ಭ : 


ನಿರಾಶ್ರಿತಳಾದ ಚಿಕ್ಕ ಪ್ರಾಯದ ಅನಾಥ ವಿಧವೆ ಮಾದಮ್ಮ ಎಂಬುವಳು ಶ್ರೀವೈಕುಂಠದಾಸರಲ್ಲಿ ಶರಣಾಗಿ ಆಶ್ರಯಬೇಡಿಕೊಂಡು ಬಂದಿರುತ್ತಾಳೆ. ದಾಸರ ಉಪದೇಶವನ್ನು ಭಕ್ತಿಯಿಂದ ಕೇಳಿಕೊಂಡು ಕಾಲಕಳೆಯುತ್ತಿದ್ದಳು. ದಾಸರೂ ಸಹ ಆಕೆಯನ್ನು ತಮ್ಮ ಮಗಳಂತೆಯೆ ಕಾಣುತ್ತಿದ್ದರು. ವೀರ ವೈಷ್ಣವರ ಮನೆಯಲ್ಲಿ ವೀರಶೈವಳಾದ ಅವಳು ವಾಸಿಸುವುದು ಅವಳ ಕುಲಸ್ಥರಿಗೆ ಅತೃಪ್ತಿಯನ್ನುಂಟುಮಾಡಿತು.


ಸಂತಾನಾಪೇಕ್ಷೆಯಿಂದ ದಾಸರಲ್ಲಿ ಬೇಡಿಕೊಂಡ ಸಾಹುಕಾರನೊಬ್ಬನಿಗೆ ಮಂತ್ರಿಸಿಟ್ಟ ಫಲವನ್ನು , ಅಚಾತುರ್ಯವಾಗಿ ತಿಂದು ಬಿಟ್ಟ ಮಾದಮ್ಮಳಿಗೆ ಪ್ರಮಾದವಶಾತ್ತಾಗಿ ಗರ್ಭವತಿಯಾಗಿ ಗಂಡುಮಗುವಾಗಲು, ಎಲ್ಲರೂ ದಾಸರನ್ನೂ ಮಾದಮ್ಮಳನ್ನೂ ನಿಂದಿಸಿದರು.ಲೋಕಾಪವಾದ ಬಂದುದರಿಂದ ಬ್ರಾಹ್ಮಣರು ದಾಸರನ್ನು ಬಹಿಷ್ಕರಿಸಿದರು. ಯಾರೊಬ್ಬ ಬ್ರಾಹ್ಮಣನೂ ದಾಸರ ಮನೆಗೆ ಬರುತ್ತಿರಲಿಲ್ಲ.


ದಾಸರ ಮನೆಯ ಪಿತೃ ಶ್ರಾದ್ಧಕೆ ಬ್ರಾಹ್ಮಣರಿಗೆ ಆಮಂತ್ರಣ ಕೊಟ್ಟರೂ ಯಾರೊಬ್ಬರೂ ಬರಲಿಲ್ಲ. ಬೇರೆ ಹಳ್ಳಿಯ ಬ್ರಾಹ್ಮಣರಿಗೆ ಹೇಳಿಕಳುಹಿಸಿದಾಗ ಬರುವೆವೆಂದು ಆಶ್ವಾಸಕೊಟ್ಟವರು ಮಳೆಗಾಲವಾಗಿದ್ದುದರಿಂದ , ನದಿ ದಾಟಲು ಸಾಧ್ಯವಾಗದೆ ಬರದಿರಲು, ಇನ್ನು ಕೇಶವನೇ ಗತಿಯೆಂದು ಕುಳಿತುಬಿಟ್ಟರು ದಾಸರು. ಅಷ್ಟುಹೊತ್ತಿಗೆ ಕೇಶವನೇ ಬ್ರಾಹ್ಮಣನ ವೇಷತಾಳಿ ಬಂದು ಶ್ರಾದ್ಧವನ್ನು ನಡೆಸಿಕೊಟ್ಟನು. ಬ್ರಾಹ್ಮಣರೂಪಿ ಭಗವಂತನು ದಾಸರು ಕೊಟ್ಟ ಧೋತ್ರ ದಕ್ಷಿಣೆಗಳನ್ನು ತೆಗೆದುಕೊಂಡು ದೇವಾಲಯಕ್ಕೆ ತೆರಳಿದನು.

ರಾತ್ರಿಯ ಪೂಜೆಗೆಂದು ಅರ್ಚಕರು ಬಾಗಿಲು ತೆರೆಯಲು, ಸ್ವಾಮಿಯ ಪಾದಪೀಠದಲ್ಲಿ ಧೋತ್ರದಕ್ಷಿಣೆಗಳಿರುವುದನ್ನು ಕಂಡು ಹೌಹಾರಿ, ಜನಸಂದಣಿ ಸೇರಿ,  ಈ ವಸ್ತುಗಳನ್ನಿಟ್ಟವರಾರೆಂದು ತರ್ಕಿಸಿದರು. ದಾಸರನ್ನೇ ವಿಚಾರಿಸಲು, ಆ ದಿವಸ ಬಂದ ಬ್ರಾಹ್ಮಣನು ಬೇಲೂರಿನಲ್ಲಿ ಎಲ್ಲೂ ಕಾಣಿಸಲಿಲ್ಲವೆಂದು ತಿಳಿದು, ಹಾಗಾದರೆ ಬಂದ ವೈಷ್ಣವೋತ್ತಮ ಬ್ರಾಹ್ಮಣನು ಕೇಶವ ಸ್ವಾಮಿಯೇ ಎಂದು ಖಚಿತವಾಯಿತು ದಾಸರಿಗೆ, ಅವರು ಭಗವಂತನಿಗೆ ನಮಸ್ಕರಿಸಿ ಈ ಕೃತಿಯನ್ನು ಸಮರ್ಪಿಸಿ ಹಾಡಲು ಪರಮಾಶ್ಚರ್ಯ! ದಾಸರನ್ನು ಬಹಿಷ್ಕರಿಸಿದ್ದ ತಪ್ಪಿಗೆ ಶರಣಾಗಿ ಕ್ಷಮೆಯಾಚಿಸಿದರು.🙏

🙏ಶ್ರೀಕೃಷ್ಣಾರ್ಪಣಮಸ್ತು🙏

***


ನೀನೇ ಶ್ರಾದ್ಧದನ್ನವನುಂಡವಾ

ನಾನರಿಯದಂತೆ ಯೆನ್ನ ಗೃಹದೊಳು ಶ್ರೀವೈಷ್ಣವನಾಗಿ ಪ


ಬಾಣಸಿಗಾದವರು ನೀನೋ ನಾರಾಯಣಿಯೋ

ಕ್ಷೋಣಿಯೊ ರವಿಯೋ ಜಾಹ್ನವಿಯೊ ರತಿಯೋ

ವಾಣಿಯೋ ಸುರಧೇನುವೋ ಬಂದಾತಧನಂಜಯನೂ

ತಾನೆ ಎನ್ನ ಆದ್ದಾಗಾಯ ತೆಲೆದೇವಾ1


ತಿಳಿದೆ ನಾನೀಗ ನಿನ್ನನು ಕೂಡೆ ಬಂದಿದ್ರ್ದ

ಬಿಳಿಯ ಚುಟ್ಟಿನ ಯೆಣ್ಣೆಗೆಂಪಿನವನೂ

ಕುಳಿತವನು ಕೈಯಪುಸ್ತುಕದವನು ಕಂಕುಳೊಳ

ಗಿಳಿದ ಮಡಿಗಡೆಯವರಾರು ಪೇಳೆಲೆ ದೇವಾ 2


ಆವಾವ ಸ್ಥಾನಕಾರಾರ ನೇಮಿಸಿದೆ ನೀ

ನಾವಸ್ಥಾನಕೆ ಪೂಜ್ಯನಾದ

ದೇವಾ ಉಪಾಧ್ಯರಾರಭಿಶ್ರವಣವನು ಪೇಳ್ದ

ಕೋವಿದರಾರು ಶ್ರೀವೈಷ್ಣವರಾರೆಲೆದೇವ 3


ಜನನ ಸ್ಥಿತಿಲಯಕೆ ಕಾರಣಭೂತನೋರ್ವ ನೀ

ನೆನುತ ವೇದಾಂತಗಳು ಪೊಗಳುತಿರಲೂ

ಇನಿತಕ್ಕೆ ಯೆಂದನ್ನದಗಳು ಕುಡಿತೇಪಾಲ್ಗೇ

ಮನವ ಸೋತುದ ಬಿಡುವೆಯಾ ನಿತ್ಯತೃಪ್ತಾ 4


ಗುರುಗಳಂದದಲಿ ಶ್ರೀವೈಷ್ಣವ ನೀನಾಗಿ

ಶರಣನಾ ಪಿತೃಗಳಿಗೇ ಶ್ರಾಧ್ಧವನುಂಡುದದೂ

ಪಿರಿಯದಾಯ್ತು ಎನ್ನ ನೂರೂಂದು ಕುಲಕೆಲ್ಲಾ

ಪರಮಪದವಾಯ್ತು ವೈಕುಂಠಚೆನ್ನಿಗರಾಯಾ 5

***