Showing posts with label ಹರಿಚರಣಾಮೃತ ರುಚಿಕರವಲ್ಲವು ಪರಮಭಕ್ತರಿಗಲ್ಲದೆ others. Show all posts
Showing posts with label ಹರಿಚರಣಾಮೃತ ರುಚಿಕರವಲ್ಲವು ಪರಮಭಕ್ತರಿಗಲ್ಲದೆ others. Show all posts

Friday, 27 December 2019

ಹರಿಚರಣಾಮೃತ ರುಚಿಕರವಲ್ಲವು ಪರಮಭಕ್ತರಿಗಲ್ಲದೆ others

ರಾಗ ರೇಗುಪ್ತಿ ಮತ್ತು ಪೂರ್ವಿ , ಆದಿತಾಳ

ಹರಿಚರಣಾಮೃತ ರುಚಿಕರವಲ್ಲವು ಪರಮಭಕ್ತರಿಗಲ್ಲದೆ
ಅರಿಯದ ಮೂಢಮನುಜನಿಗೆ ಪೇಳಲು ಹರುಷವಾಗಬಲ್ಲುದೆ ||ಪ||

ಅಂದುಗೆ ಅರಳೆಲೆ ಇಟ್ಟರೆ ಕೋಡಗ ಕಂದನಾಗಬಲ್ಲುದೆ
ಹಂದಿಗೆ ಸಕ್ಕರೆ ತುಪ್ಪವ ತಿನಿಸಲು ದಂತಿಯಾಗಬಲ್ಲುದೆ
ಚಂದಿರ ಕಿರಣವ ನೋಡಲು ಅಂಧಕ ಅಂದವರಿಯಬಲ್ಲನೇ
ಇಂದಿರೆಯರಸನ ಮಹಿಮೆಯ ಮಂದ ಮನುಜ ಬಲ್ಲನೇ ||೧||

ಉರಗಗೆ ಕ್ಷೀರವನೆರೆಯಲು ವಿಷ ತಾ ಹರಿದುಹೋಗಬಲ್ಲುದೆ
ಭರದಿಂದ ಶುನಕನ ಬಾಲವ ತಿದ್ದಲು ಸರಳವಾಗಬಲ್ಲುದೆ
ಪರಿಪರಿ ಬಂಗಾರವ ಇಡೆ ದಾಸಿಯು ಅರಸಿಯಾಗಬಲ್ಲಳೆ
ಭರದಿಂದ ನೀಲಿಯ ತೊಳೆಯಲು ಅದರಾ ಕರಿದು ಹೋಗಬಲ್ಲುದೆ ||೨||

ಮೋಡಕೆ ಮೋರವು ಕುಣಿಯಲು ಕುಕ್ಕುಟ ನೋಡಿ ಕುಣಿಯಲುಬಲ್ಲುದೆ
ಗೋಡೆಯ ಮುಂದೆ ನಾಟ್ಯವನಾಡಲು ನೋಡಿ ಕೊಡಲು ಬಲ್ಲುದೆ
ಹಾಡಿನ ಕುಶಲವ ಬಧಿರಗೆ ಪೇಳಲು ಕೇಳಿ ಸುಖಿಸಬಲ್ಲನೆ
ಮೂಡಲ ಗಿರಿ ತಿಮ್ಮಪ್ಪನ ಮಹಿಮೆಯ ಮೂಢ ಮನುಜ ಬಲ್ಲನೆ ||೩||
********