..
kruti by bhupati vittalaru ( kakhandaki Ramacharyaru)
ಧನ್ಯನಾದೆ ಪಾಂಡುರಂಗನ ಕಣ್ಣಾರೆ ಕಂಡು¥ತಂದೆತಾುಯ ಸೇವೆ ಮಾಡಿಪುಂಡಲೀಕನ ಭಕ್ತಿಗೊಲಿದುಚಂದ್ರಭಾಗಾ ತೀರದಲ್ಲಿಬಂದು ನಿಂತವಿಠ್ಠಲನ ಕಂಡು 1
ವೆಂಕಟೇಶ ಅಲ್ಲಿರುವಶಂಖಚಕ್ರ ಪಿಡಿದ ಕರವಟೊಂಕದ ಮೇಲಿಟ್ಟುಕೊಂಡುನಿಂತು ಇಲ್ಲಿ ವಿಠಲನಾದ 2
ಕಡಗೋಲಿಂದ ಗಡಿಗೆ ಒಡೆದುತುಡುಗು ಮಾಡಿದ್ಹುಡುಗ ಬಂದಉಡುಪಿಯಲ್ಲಿ ಕೃಷ್ಣನಾಗಿಓಡಿಬಂದಿಲ್ಲಿ ವಿಠಲನಾದ 3
ಎಷ್ಟು ಜನ್ಮದ ಸುಕೃತವೊ ಶ್ರೀ-ಕೃಷ್ಣ ವಿಠಲರೂಪದಿಂದಭಕ್ತಜನರಿಗಾಲಿಂಗನಭೆಟ್ಟಿ ಕೊಡುತ ನಿಂತುಬಿಟ್ಟ 4
ಅನ್ನಬ್ರಹ್ಮ ಉಡುಪಿಯಲ್ಲಿಚಿನ್ನ ಬ್ರಹ್ಮ ಬೆಟ್ಟದಲ್ಲಿಸಣ್ಣ ತುಳಸಿಮಾಲೆ ಸಾಕುನಾದಬ್ರಹ್ಮ ಭೂಪತಿವಿಠಲಗೆ 5
ಗಲಗಲಿ ವಾಸಸ್ಥ ಶ್ರೀ ಪಾಂಡುರಂಗ
***