Showing posts with label ಸದಾ ಪೂಜಿಪೆ ನಿನ್ನ ಸೌಭಾಗ್ಯಳೆ kamalanabha vittala. Show all posts
Showing posts with label ಸದಾ ಪೂಜಿಪೆ ನಿನ್ನ ಸೌಭಾಗ್ಯಳೆ kamalanabha vittala. Show all posts

Friday, 27 December 2019

ಸದಾ ಪೂಜಿಪೆ ನಿನ್ನ ಸೌಭಾಗ್ಯಳೆ ankita kamalanabha vittala

by ನಿಡಗುರುಕಿ ಜೀವೂಬಾಯಿ
ಸದಾ ಪೂಜಿಪೆ ನಿನ್ನ ಸೌಭಾಗ್ಯಳೆ ಪ

ಇಂದಿರಾದೇವಿಯೆ ಮಂದರೋದ್ಧರನ ರಾಣಿಇಂದೀವರಾಕ್ಷಿ ಆನಂದದಲಿ 1

ಪದ್ಮಾಕ್ಷಿ ಎನ್ನ ಹೃತ್ಪದ್ಮದಿ ಹರಿಪಾದಪದ್ಮವ ತೋರಿ ಉದ್ಧರಿಸುವಳೆ 2

ಅಂಬುಜಪಾಣಿಯೆ ಅಂಜುಜಾಕ್ಷನ ರಾಣಿಅಂಬುಧಿಶಯನನ ಪೊಂದಿರ್ಪಳೆ 3

ಆದಿಕಾರಿಣಿ ಪತ್ರಾದಿ ರೂಪದಿ ಹರಿಯಆರಾಧಿಸುವಿ ಸರ್ವರಾಧಾರಿಯೆ 4

ಹೆದರದೆ ಭೃಗುಮುನಿ ಒದೆಯೆ ಪಾದದಿಂದಕದನವ ಮಾಡಿದ ಕಲ್ಯಾಣಿಯೆ 5

ಭಕ್ತಜನರು ನಿನ್ನ ಭಕ್ತಿಯಿಂ ಪೂಜಿಸಲುಮುಕ್ತಿ ಮಾರ್ಗವ ತೋರಿ ಸಲಹುವಳೆ 6

ಸರಸಿಜಾಸನ ಮಾತೆ ಸ್ಮರಿಸುವೆ ನಿಮ್ಮಪಾದಸ್ಮರಣೆ ಮರೆಯದಂತೆ ಕರುಣಿಪುದು 7

ಪಂಕಜನಾಭನ ಕಿಂಕರರನ್ನು ಕಾಯ್ವಬಿಂಕನಿನ್ನದು ಸರ್ವ ಅಲಂಕಾರಿಣಿ8

ಕಮಲನಯನನೆ ಶ್ರೀ ಕಮಲನಾಭ ವಿಠ್ಠಲನಕ್ಷಣ ಬಿಡದಲೆ ತೋರು ನಮಿಸುವೆನು 9
*******