1. ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ ।
ಬೆಲ್ಲ ಸಕ್ಕರೆಯಾಗು ದೇನದುರ್ಬಲರಿಂಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ ॥
2. ಘನತತ್ವವೊಂದಕ್ಕೆ ದಿನರಾತ್ರಿ ಮನಸೋತು
ನೆನೆಯದಿನ್ನೊಂದನೆಲ್ಲವ ನೀಡುತದರಾ|
ಅನುಸಂಧಿಯಲಿ ಜೀವಭಾರವನು ಮರೆಯುವುದು
ಹನುಮಂತನುಪದೇಶ - ಮಂಕುತಿಮ್ಮ||
3. ನಡೆವುದೊಂದೇ ಭೂಮಿ
ಕುಡಿವುದೊಂದೇ ನೀರು
ಸುಡುವಗ್ನಿಯೊಂದೇ ಇರುತಿರಲು| ಕುಲಗೋತ್ರ
ನಡುವೆ ಎತ್ತಣದು - ಸರ್ವಜ್ಞ||
***
4. ಮಾತಿನಿಂ ನಗೆನುಡಿಯು ಮಾತಿನಿಂ ಹಗೆ
ಹೊಲೆಯು |
ಮಾತಿನಿಂ ಸರ್ವಸಂಪದವು ಲೋಕಕ್ಕೆ |
ಮಾತೇ ಮಾಣಿಕವು ಸರ್ವಜ್ಞ ||
***
6. ಅಕ್ಕಿಯೊಳಗನ್ನವನು ಮೊದಲಾರು ಕಂಡವರು। ಅಕ್ಕರದ ಬರಹಕ್ಕೆ ಮೊದಲಿಗನದಾರು।
ಲೆಕ್ಕವಿರಿಸಿಲ್ಲ ಜಗ ತನ್ನಾದಿ ಬಂಧುಗಳ।
ದಕ್ಕುವುದೇ ಜಸ ನಿನಗೆ ಮಂಕುತಿಮ್ಮ॥
***
7.
***
panchanga
Kaliyubdha 5125
Sri Shalivahana Shakha 1946
Sri Shobhakrut nama samvatsara
Uttarayana
Hemanta Rutu
Pushya masa
Shukla paksha
Trayodashi tithi
Aridra nakshatra
Mangalavara
Shubha raatri
***