ರಚನೆ : ಶ್ರೀಯುತ ರಂಗನಾಥ ಭಾರಧ್ವಾಜ್
ಅಂಕಿತ :ಗಜಗಹ್ವರದಲಿ ನೆಲೆನಿಂತ - ಶ್ರೀ ವ್ಯಾಸರಾಜ ಗುರುಸಾರ್ವಭೌಮರ ವರ ಪ್ರಸಾದಾಂಕಿತ " ವಿಜಯರಂಗ ವಿಠ್ಠಲ"
ಗುರುರಾಜರ ಸ್ಮರಿಸಿರೋ ।। ಪಲ್ಲವಿ ।।
ದುರಿತವ ಕಳೆದು ಸದ್ಗತಿಯ -
ಪಡೆವವರೆಲ್ಲ ।। ಅ ಪ ।।
ಪ್ರಿಯತೀರ್ಥ ಮುನಿಗಳ -
ಸಂಜಾತ ಇವ ।
ಅನಿಲದೇವನ ನಿಜ ಭಕುತ ।
ಪಾಮರರನು ಇವ -
ಪಾವನಗೊಳಿಸುವ ।
ಶ್ರೀ ಪ್ರದ್ಯುಮ್ನತೀರ್ಥರೆಂಬೋ -
ಪ್ರಿಯವಾದ ಪೆಸರುಳ್ಳ ।। ಚರಣ ।।
ಬ್ರಹ್ಮಣ್ಯ ಬ್ರಹ್ಮಾಣಿ ಪದಗಳ ಇವ ।
ಸದಾ ಸಂಸ್ಕರಿಸುತ ।
ಗುರು ಮಧ್ವರಾಯರ -
ಮತವ ಸಾಧಿಸುತ ।
ಭಾವಿರಾಯರೆಂಬೋ -
ರಘುಪತಿ ಪ್ರಿಯರ ।। ಚರಣ ।।
ಬ್ರಹ್ಮಣ್ಯತೀರ್ಥರ ಕಂದ ಇವ ।
ಬಂಕಾಪುರದಲ್ಲಿ ಮೆರೆವ ।
ಸೇವಿಪ ಜನರ -
ದುರ್ಬೋಧ ಪರಿಹರಿಸುತ ।
ವಿಜಯರಂಗ ವಿಠ್ಠಲನ -
ಹೃದಯದಿ ನೋಳ್ಪರ ।। ಚರಣ ।।
****