Showing posts with label ಯಾಕೆ ಮನದಲಿ ಶೋಕಿಸುತ್ತಿರುವೆ ಜಗದೇಕನಾಥನು kamalanabha vittala. Show all posts
Showing posts with label ಯಾಕೆ ಮನದಲಿ ಶೋಕಿಸುತ್ತಿರುವೆ ಜಗದೇಕನಾಥನು kamalanabha vittala. Show all posts

Thursday, 5 August 2021

ಯಾಕೆ ಮನದಲಿ ಶೋಕಿಸುತ್ತಿರುವೆ ಜಗದೇಕನಾಥನು ankita kamalanabha vittala

 ..


kruti by Nidaguruki Jeevubai


ಯಾಕೆ ಮನದಲಿ ಶೋಕಿಸುತ್ತಿರುವೆ ಜಗ

ದೇಕನಾಥನು ಸಾಕುತಿರುವನು ನೀ ತಿಳಿಯದಿರುವೆ ಪ


ಲೋಕನಾಥನ ವಿವೇಕದಿ ಸ್ತುತಿಸದೆ

ವ್ಯಾಕುಲದಿಂ ಮನ ಕಳವಳಗೊಳುತಲಿ ಅ.ಪ


ಸೃಷ್ಟಿಕರ್ತನು ರಕ್ಷಿಸುತ್ತಿರುವ

ದುರಿತಂಗಳ ರಾಸಿಯ

ಬೆಟ್ಟಗಳ ತರಿದೊಟ್ಟು ತಿರುವ

ಅದು ತಿಳಿಯದು ನೀ ಬಲು

ಕಷ್ಟಗಳ ಪಡುತಿರ್ಪ ವಿಷಯಗಳ

ನೋಡುತ ನಗುತಿರುವ

ಇಷ್ಟು ಈತನ ಪ್ರಭಾವವು ತಿಳಿಯದೆ

ಲಕ್ಷ್ಮಿರಮಣ ರಕ್ಷಿಸೆನ್ನುತ ಸ್ಮರಿಸದೆ 1

ನಾನು ನನ್ನದು ಎಂಬ ಅಭಿಮಾನ

ಅದು ಪೋಗುವ ತನಕ

e್ಞÁನ ಮಾರ್ಗಕೆ ಇಲ್ಲ ಸಾಧನ-

ವೆಂದರಿಯುತ ಮನದಲಿ

ಧ್ಯಾನಿಸುತ್ತಿರು ಶ್ರೀನಿಧಿ ಗುಣಗಳನು

ಹೀಗಿರುವುದೆ ಪ್ರಧಾನ

ಧ್ಯಾನ ಗಾನ ಮೌನಾದಿ ವ್ರತಗಳನು

ಶ್ರೀನಿಧಿಗರ್ಪಿಸಿ ಮನ ಹರುಷಿಸದಲೆ2

ತಂದೆ ಶ್ರೀ ವೆಂಕಟೇಶ ವಿಠ್ಠಲನು

ಹರಿಭಕುತರ ಮೊರೆಯನು

ಛಂದದಿಂದಲಿ ಕೇಳಿ ಪೋಷಿಪನು

ಮುಕುಂದನಲಿ ಭಕುತಿ

ಎಂದೆಂದಿಗೂ ತಪ್ಪದೆ ಉದ್ಧರಿಸುವನು

ನಿಜವೆಂದರಿ ಇದನು

ಮುಂದೆ ಕಮಲನಾಭ ವಿಠ್ಠಲ ಭಕುತರ

ಸಂದಣಿ ಪೊರೆದು ಸಂತೈಸುತಲಿರೆ ವೃಥ 3

***