Showing posts with label ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ purandara vittala RAAGI TANDEERA BHIKSHAKE RAAGI TANDEERA. Show all posts
Showing posts with label ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ purandara vittala RAAGI TANDEERA BHIKSHAKE RAAGI TANDEERA. Show all posts

Friday, 6 December 2019

ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ purandara vittala RAAGI TANDEERA BHIKSHAKE RAAGI TANDEERA



2nd Audio by Sri. Madhava Rao


ರಾಗಿ ತಂದೀರ್ಯಾ ,ಭಿಕ್ಷಕೆ
ರಾಗಿ ತಂದೀರ್ಯಾ ||ಪ||

ಯೋಗ್ಯರಾಗಿ ಭೋಗ್ಯರಾಗಿ
ಭಾಗ್ಯವಂತರಾಗಿ ನೀವು ||ಅ.ಪ||

ಅನ್ನದಾನವ ಮಾಡುವರಾಗಿ
ಅನ್ನ ಛತ್ರವನಿಟ್ಟವರಾಗಿ
ಅನ್ಯ ವಾರ್ತೆಯ ಬಿಟ್ಟವರಾಗಿ
ಅನುದಿನ ಭಜನೆಯ ಮಾಡುವರಾಗಿ

ಮಾತಾ ಪಿತೃಗಳ ಸೇವಿಪರಾಗಿ
ಪಾಪ ಕಾರ್ಯವ ಬಿಟ್ಟವರಾಗಿ
ಜಾತಿಯಲ್ಲಿ ಮಿಗಿಲಾದವರಾಗಿ
ನೀತಿ ಮಾರ್ಗದಲಿ ಖ್ಯಾತರಾಗಿ

ಗುರು ಕಾರುಣ್ಯವ ಪಡೆದವರಾಗಿ
ಗುರುವಿನ ಮರ್ಮವ ತಿಳಿದವರಾಗಿ
ಗುರುವಿನ ಪಾದವ ಸ್ಮರಿಸುವರಾಗಿ
ಪರಮ ಪುಣ್ಯವ ಮಾಡುವರಾಗಿ

ಶ್ರೀನಿವಾಸನ ಸ್ಮರಿಸುವರಾಗಿ
ಪ್ರಾಣರಾಯರ ದಾಸರಾಗಿ
ದಾನಕೆಂದು ಬಲು ಹೆದರಿ ಇಂಥ
ದೀನ ವೃತ್ತಿಯಲಿ ಹೀನರಾಗಿ

ಪಕ್ಷಮಾಸ ವ್ರತ ಮಾಡುವರಾಗಿ
ಪಕ್ಷಿವಾಹನಗೆ ಪ್ರಿಯರಾಗಿ
ಕುಕ್ಷಿಯಲಿ ಕಲುಷವಿಲ್ಲದವರಾಗಿ
ಭಿಕ್ಷಕರು ಅತಿ ತುಚ್ಛರಾಗಿ

ವೇದ ಪುರಾಣವ ತಿಳಿದವರಾಗಿ
ಮೇದಿನಿಯಾಳುವಂಥವರಾಗಿ
ಸಾಧು ಧರ್ಮಗಳ ಚರಿಸುವರಾಗಿ
ಓದಿ ಗ್ರಂಥಗಳ ಪಂಡಿತರಾಗಿ

ಆರು ಮಾರ್ಗವ ಅರಿತವರಾಗಿ
ಮೂರು ಮಾರ್ಗವ ತಿಳಿದವರಾಗಿ
ಭೂರಿ ತತ್ವವ ಬೆರದವರಾಗಿ
ಕ್ರೂರರ ಸಂಗವ ಬಿಟ್ಟವರಾಗಿ

ಕಾಮ ಕ್ರೋಧವ ಅಳಿದವರಾಗಿ
ನೇಮ ನಿತ್ಯವ ಮಾಡುವರಾಗಿ
ಆ ಮಹಾ ಪದವಿಯ ಸುಖಿಸುವರಾಗಿ
ಪ್ರೇಮದಿ ಕುಣಿ ಕುಣಿದಾಡುವರಾಗಿ

ಸಿರಿರಮಣನ ಸದಾ ಸ್ಮರಿಸುವರಾಗಿ
ಗುರುತಿಗೆ ಬಾಹೋರಂಥವರಾಗಿ
ಕರಕರೆ ಸಂಸಾರವ ನೀಗುವರಾಗಿ
ಪುರಂದರವಿಠಲನ ಸೇವಿಪರಾಗಿ
***

ರಾಗ ನಾದನಾಮಕ್ರಿಯ ಛಾಪು ತಾಳ (raga tala may differ in audio)
KalyanaVasanta-Chapu

ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ
ಯೋಗ್ಯರಾಗಿ ಭೋಗ್ಯರಾಗಿ ಭಾಗ್ಯವಂತರಾಗಿ ನೀವು ||ಪ.||

ಅನ್ನದಾನವ ಮಾಡುವರಾಗಿ ಅನ್ನಛತ್ರವನಿಟ್ಟವರಾಗಿ
ಅನ್ಯವಾರ್ತೆಯ ಬಿಟ್ಟವರಾಗಿ ಅನುದಿನ ಭಜನೆಯ ಮಾಡುವರಾಗಿ ||೧||

ಮಾತಾಪಿತರನು ಸೇವಿಪರಾಗಿ ಪಾಪಕರ್ಮವ ಬಿಟ್ಟವರಾಗಿ
ರೀತಿಯ ಬಾಳನು ಬಾಳುವರಾಗಿ ನೀತಿಮಾರ್ಗದಲಿ ಖ್ಯಾತರಾಗಿ ||೨||

ಕಾಮಕ್ರೋಧವ ಅಳಿದವರಾಗಿ ನೇಮನಿತ್ಯವ ಮಾಡುವರಾಗಿ
ರಾಮನಾಮವ ಜಪಿಸುವರಾಗಿ ಪ್ರೇಮದಿ ಕುಣಿಕುಣಿದಾಡುವರಾಗಿ ||೩||

ಸಿರಿರಮಣನ ದಿನ ನೆನೆಯುವರಾಗಿ ಗುರುತಿಗೆ ಬಾಹೋರಂಥವರಾಗಿ
ಕರೆದರೆ ಭವವನು ನೀಗುವರಾಗಿ ಪುರಂದರ ವಿಠಲನ ಸೇವಿಪರಾಗಿ ||೪||
***

rAgi taMdIrA bhikShake rAgi taMdIrA
yOgyarAgi bhOgyarAgi bhAgyavaMtarAgi nIvu ||pa.||

annadAnava mADuvarAgi annaChatravaniTTavarAgi
anyavArteya biTTavarAgi anudina bhajaneya mADuvarAgi ||1||

mAtApitaranu sEviparAgi pApakarmava biTTavarAgi
rItiya bALanu bALuvarAgi nItimArgadali khyAtarAgi ||2||

kAmakrOdhava aLidavarAgi nEmanityava mADuvarAgi
rAmanAmava japisuvarAgi prEmadi kuNikuNidADuvarAgi ||3||

siriramaNana dina neneyuvarAgi gurutige bAhOraMthavarAgi
karedare bhavavanu nIguvarAgi puraMdara viThalana sEviparAgi ||4||
***

pallavi

rAgi tandIryA bhikSake rAgi tandIryA

caraNam 1

yOgyarAgi bhOgyarAgi bhAgyavantarAgi nIvu annadAnava mADuvarAgi anna
chatra vaniTTavarAgi anya vArteya biTTavarAgi anudina bhajaneya mADuvarAgi

caraNam 2

mAtA pitrugaLa sEviparAgi pApa kAryava biTTavarAgi
jAtiyalli migilAdavarAgi nIti mArgadali khyAtarAgi

caraNam 3

guru kAruNyava paDedavarAgi guruvina marmava tiLidavarAgi
guruvina pAdava smarisuvarAgi parama puNyava mADuvarAgi

caraNam 4

shrInivAsana smarisuvarAgi prANarAyara dAsarAgi
dAnakendu balu hedari intha dIna vrttiyali hInarAgi

caraNam 5

pakSamAsa vrta mADuvarAgi pakSi vAhanage priyarAgi
kukSiyali kaluSavilladavarAgi bhikSakaru ati duccharAgi

caraNam 6

vEda purANava tiLidavarAgi mEdiniyALuvaranthavarAgi
sAdhu dhrmagaLa carisuvarAgi Odi granthagaLa paNDitarAgi

caraNam 7

Aru mArgava aridavarAgi mUru mArgava tiLidavarAgi
bhUri tatvava beradavarAgi krUrara sangava biTTavarAgi

caraNam 8

kAma krOdhava aLidavarAgi nEma nityava mADuvarAgi
A mahA padaviya sukhisuvarAgi prEmadi kuNi kuNidADuvarAgi

caraNam 9

siri ramaNa sadA smarisuvarAgi gurutige bAhOranthavarAgi
kare kare samsArava nIguvarAgi purandara viTTala sEviparAgi
***


Ragi [finger millet - Eleusine coracana] is a coarse staple grain (resembling seasame seeds) grown in Karnataka and Andhra.  ‘aagi’ is averb = be = become. In this krti Purandaradasa has used ‘raagi’ and ‘aagi’ to clearly convey a message that ragi is highly eatable, besides advising on a righteous life. Perhaps ragi was considered a poor man’s food, but Purandaradasa had no qualms accepting it in bhiksha.

 “Have you brought Ragi for alms?” While in one sense, it can be read as an extolment of Ragi, the staple local grain, the sustainer of life itself with various adjectives: Yogya (worthy) + Ragi, Bhogya (enjoyable) + Ragi ; on another level, it is a veiled ordainment to the householders to become “worthy”, “Yogyaragi” as one word.

It is a admixture of many shades of meanings conveying a sense of worthiness, deservingness, etc. exhorting to do various acts of goodness like offering food to the needy (anna chatrava nittavarAgi), attaining fame for the right reasons (kyathiyali migilAdavarAgi) and cautioning people to stay away from unethical practices (anya varthegaLa bittavarAgi) and so on.


rAgi tandIryA bhikShakE rAgi tandIryA

bhOgyarAgi yOgyarAgi bhAgyavantarAgi nIvu

annadAnava mADuvarAgi anna chatra vaniTTavarAgi
anya vArteya biTTavarAgi anudina bhajaneya mADuvarAgi (Ragi)

siri ramaNana sada smarisuvaragi gurutige bAhOranthavarAgi
Kare kare samsArava nIguvaragi purandara viTTalana sEviparAgi
***
 

P: have you brought(tandirya= tandeera) rAgi for bhiksha.

A: rAgi is eatable(bhogya)[be the one to enjoy life], ragi is preferable(yogya ragi)[become worthy humans], all of you(niVu) becomre(aagi) wealthy(bhagyavanta).

C1:be the one to distribute (dAna) food, be the one to own(ittavaragi) chowltries (chatra)[for free distribution of food], be the one to give up (bittavaragi) undesirable interests(anya vArteya), be the one to do bhajane(of God) every day(anudina).

C2: Be the one to remember(smarisu) shri ramana, [gurutige bAhOrathavaragi – meaning is not clear perhaps it means ‘be the one to be recognised (gurutige) for good deeds], be the one to avoid(nIguvaragi) this nasty(kare kare) world, (and) be the one to worship(seviparagi) purandaravithala
***


***

ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ
ಯೋಗ್ಯರಾಗಿ ಭೋಗ್ಯರಾಗಿ ಭಾಗ್ಯವಂತರಾಗಿ ನೀವು

ಅನ್ನದಾನವ ಮಾಡುವರಾಗಿ
ಅನ್ನ ಛತ್ರವನ್ನಿಟ್ಟವರಾಗಿ
ಅನ್ಯ ವಾರ್ತೆಯ ಬಿಟ್ಟವರಾಗಿ
ಅನುದಿನ ಭಜನೆಯ ಮಾಡುವರಾಗಿ

ಮಾತಾಪಿತೃಗಳ ಸೇವಿಪರಾಗಿ
ಪಾಪ ಕಾರ್ಯದ ಬಿಟ್ಟವರಾಗಿ
ಜಾತಿಯಲಿ ಮಿಗಿಲಾದವರಾಗಿ
ನೀತಿ ಮಾರ್ಗದಲಿ ಖ್ಯಾತರಾಗಿ

ಗುರು ಕಾರುಣ್ಯವ ಪಡೆದವರಾಗಿ
ಗುರುವಿನ ಮರ್ಮವ ತಿಳಿದವರಾಗಿ
ಗುರುವಿನ ಪಾದವ ಸ್ಮರಿಸುವರಾಗಿ
ಪರಮ ಪುಣ್ಯವ ಮಾಡುವರಾಗಿ

ಶ್ರೀನಿವಾಸನ ಸ್ಮರಿಸುವರಾಗಿ
ಪ್ರಾಣರಾಯನ ದಾಸರಾಗಿ
ದಾನಕೆಂದು ಬಲು ಹೆದರಿ ಇಂಥ
ದೀನವೃತ್ತಿಯಲಿ ಹೀನರಾಗಿ

ಪಕ್ಷಮಾಸ ವ್ರತ ಮಾಡುವರಾಗಿ
ಪಕ್ಷಿವಾಹನಗೆ ಪ್ರಿಯರಾಗಿ
ಕುಕ್ಷಿಲಿ ಕಲ್ಮಷ ಇಲ್ಲದವರಾಗಿ
ಭಿಕ್ಷುಕರು ಅತಿ ತುಚ್ಛರಾಗಿ

ವೇದ ಪುರಾಣದ ತಿಳಿದವರಾಗಿ
ಮೇದಿನಿಯಾಳುವಂಥವರಾಗಿ
ಸಾಧು ಧರ್ಮವಾಚರಿಸುವರಾಗಿ
ಓದಿ ಗ್ರಂಥಗಳ ಪಂಡಿತರಾಗಿ

ಆರು ಮಾರ್ಗವ ಅರಿತವರಾಗಿ
ಮೂರು ಮಾರ್ಗವ ತಿಳಿದವರಾಗಿ
ಭೂರಿ ತತ್ತ್ವವ ಬೆರೆದವರಾಗಿ
ಕ್ರೂರರ ಸಂಗವ ಬಿಟ್ಟವರಾಗಿ

ಕಾಮ ಕ್ರೋಧವ ಅಳಿದವರಾಗಿ
ನೇಮ ನಿಷ್ಠೆಗಳ ಮಾಡುವರಾಗಿ
ಆ ಮಹಾಪದವಿಲಿ ಸುಖಿಸುವರಾಗಿ
ಪ್ರೇಮದಿ ಕುಣಿ ಕುಣಿದಾಡುವರಾಗಿ

ಸಿರಿ ರಮಣನ ಸದಾ ಸ್ಮರಿಸುವರಾಗಿ
ಗುರುತಿಗೆ ಬಾಹೋರಂಥವರಾಗಿ
ಕರೆಕರೆ ಸಂಸಾರ ನೀಗುವರಾಗಿ
ಪುರಂದರವಿಠಲನ ಸೇವಿಪರಾಗಿ
********

ಪುರಂದರದಾಸರು

ರಾಗಿ ತಂದಿರಾ - ಭಿಕ್ಷಕೆ -ರಾಗಿ ತಂದಿರಾ ಪ.

ಯೋಗ್ಯರಾಗಿ ಭೋಗ್ಯರಾಗಿ |ಭಾಗ್ಯವಂತರಾಗಿ ನೀವು ಅಪ

ಅನ್ನದಾನವ ಮಾಡುವರಾಗಿ |ಅನ್ನಛತ್ರವನಿಟ್ಟವ ರಾಗಿ ||ಅನ್ಯವಾರ್ತೆಗಳ ಬಿಟ್ಟವರಾಗಿ |ಅನುದಿನಭಜನೆಯ ಮಾಡುವರಾಗಿ1

ಮಾತಾಪಿತರನು ಸೇವಿಪರಾಗಿ |ಪಾತಕಕಾರ್ಯವ ಬಿಟ್ಟವರಾಗಿ |ಖ್ಯಾತಿಯಲ್ಲಿ ಮಿಗಿಲಾದವರಾಗಿ |ನೀತಿಮಾರ್ಗದಲಿ ಖ್ಯಾತರಾಗಿ 2

ಗುರು ಕಾರುಣ್ಯವ ಪಡೆದವರಾಗಿಗುರುವಿನ ಮರ್ಮವ ತಿಳಿದವರಾಗಿ ||ಗುರುವಿನ ಪಾದವ ಸ್ಮರಿಸುವರಾಗಿ |ಪರಮಪುಣ್ಯವನು ಮಾಡುವರಾಗಿ3

ವೇದ ಪುರಾಣವ ತಿಳಿದವರಾಗಿ |ಮೇದಿನಿಯಾಳುವಂಥವರಾಗಿ ||ಸಾಧು ಧರ್ಮವಾಚರಿಸುವರಾಗಿ |ಓದಿ ಗ್ರಂಥಗಳ ಪಂಡಿತರಾಗಿ 4

ಆರರ ಮಾರ್ಗವ ಅರಿತವರಾಗಿ |ಮೂರರ ಮಾರ್ಗವ ತಿಳಿದವರಾಗಿ ||ಭೂರಿತತ್ವವನು ಬೆರೆತವರಾಗಿ |ಕ್ರೂರರ ಸಂಗವ ಬಿಟ್ಟವರಾಗಿ 5

ಕಾಮಕ್ರೋಧಗಳನಳಿದವರಾಗಿ |ನೇಮನಿಷ್ಠೆಗಳ ಮಾಡುವರಾಗಿ ||ಆ ಮಹಾಪದದಲಿ ಸುಖಿಸುವರಾಗಿ |ಪ್ರೇಮದಿ ಕುಣಿಕುಣಿದಾಡುವರಾಗಿ 6

ಸಿರಿರಮಣನ ಸದಾ ಸ್ಮರಿಸುವರಾಗಿ |ಕುರುಹಿಗೆ ಬಾಗುವಂತವರಾಗಿ ||ಕರೆಕರೆಸಂಸಾರ ನೀಗುವರಾಗಿ |ಪುರಂದರವಿಠಲನ ಸೇವಿಪರಾಗಿ 7
*********