Showing posts with label ಭಳಿ ಭಳಿರೆ ಎನ್ನ ಸುಖವೆಂಬುದೇ ಸುಖವು purandara vittala BHALI BHALIRE ENNA SUKHAVEMBUDE SUKHAVU. Show all posts
Showing posts with label ಭಳಿ ಭಳಿರೆ ಎನ್ನ ಸುಖವೆಂಬುದೇ ಸುಖವು purandara vittala BHALI BHALIRE ENNA SUKHAVEMBUDE SUKHAVU. Show all posts

Thursday, 2 September 2021

ಭಳಿ ಭಳಿರೆ ಎನ್ನ ಸುಖವೆಂಬುದೇ ಸುಖವು purandara vittala BHALI BHALIRE ENNA SUKHAVEMBUDE SUKHAVU



ಭಳಿ ಭಳಿರೆ ಎನ್ನ ಸುಖವೆಂಬುದೇ ಸುಖವು
ಕಲಿಕಾಲಕಿದಕಿರಲೊ ಕಾವೇರಿ ರಂಗನೆ ||ಪ||

ತಂದೆ ನೀನೆ ಕೃಷ್ಣ, ತಾಯಿ ಇಂದಿರಾದೇವಿ
ಮಂದಜಾಸನ ಎನಗೆ ಹಿರಿಯಣ್ಣನು
ಇಂದುಮುಖಿ ಶ್ರೀಸರಸ್ವತಿದೇವಿಯತ್ತಿಗೆಯು
ಎಂದೆಂದಿಗೂ ವಾಯುದೇವರೇ ಗುರುವು ||

ಗುರುಪತ್ನಿ ಶ್ರೀಭಾರತಿಯು ನೋಡೆ ಮೇಲಾಗಿ
ಗರುಡಾಹಿ(ಗರುಡಾದಿ?) ರುದ್ರರಣ್ಣನ ಮಕ್ಕಳು
ಸುರರು ಸನಕಾದಿಗಳು ಪರಮ ಬಾಂಧವರೆನಗೆ
ಸ್ಥಿರವಾದ ವೈಕುಂಠವೆನಗೆ ಮಂದಿರವು || 

ನಿನ್ನ ಪಾದಾಂಬುರುಹ ಭಜಿಸುವುದೆ ಸೌಭಾಗ್ಯ
ನಿನ್ನ ನಿರ್ಮಾಲ್ಯಗಳೆ ಭೋಗದ್ರವ್ಯ
ನಿನ್ನ ಕಥೆ ಕೇಳುವುದೆ ಮಂಗಳ ಸುವಾದ್ಯಗಳು
ನಿನ್ನಂಥ ಅರಸೆನಗೆ ಪುರಂದರವಿಠಲ
****

ರಾಗ ನಾಟಿ ಝಂಪೆತಾಳ

ಭಳಿ ಭಳಿರೆ ಎನ್ನ ಸುಖವೆಂಬುದೇ ಸುಖವುಹಲಕಾಲಕಿದೆ ಇರಲಿ ಕಾವೇರಿ ರಂಗ ಪ

ತಂದೆ ನೀನೇ ಕೃಷ್ಣ ತಾಯಿ ಇಂದಿರೆದೇವಿಮಂದಹಾಸನನೆನಗೆ ಹಿರಿಯಣ್ಣನು ||ಇಂದುಶ್ರೀ ಸರಸ್ವತೀದೇವಿ ಅತ್ತಿಗೆಯುಎಂದೆಂದಿಗೂ ವಾಯುದೇವರೇ ಗುರುವು 1

ಗುರುಪತ್ನಿ ಶ್ರೀಭಾರತಿಯು ನೋಡೆ ಮೇಲಾಗಿಗರುಡಾಹಿ ರುದ್ರರಣ್ಣನ ಮಕ್ಕಳು ||ಸುರರುಸನಕದಿಗಳು ಪರಮಬಾಂಧವರೆನಗೆಸ್ಥಿರವಾದ ವೈಕುಂಠವೆನಗೆ ಮಂದಿರವು 2

ನಿನ್ನ ಪಾದಾಂಬುಜವ ಭಜಿಸುವುದೆ ಸೌಭಾಗ್ಯನಿನ್ನ ನಿರ್ಮಾಲ್ಯಗಳೆ ಭೋಗದ್ರವ್ಯ ||ನಿನ್ನ ಕಥೆ ಕೇಳುವುದೆ ಮಂಗಳಸುವಾದ್ಯಗಳುನಿನ್ನಂಥ ಅರಸೆನಗೆ ಪುರಂದರವಿಠಲ 3
*******