Showing posts with label ಮಹಿಮನಿಗೆ ನಮಸ್ಕಾರ ಬ್ರಹ್ಮಾನಂದದಿ ಸಮರಸವಾದ ಸಪ್ರೇಮಿಗೆ ನಮಸ್ಕಾರ mahipati. Show all posts
Showing posts with label ಮಹಿಮನಿಗೆ ನಮಸ್ಕಾರ ಬ್ರಹ್ಮಾನಂದದಿ ಸಮರಸವಾದ ಸಪ್ರೇಮಿಗೆ ನಮಸ್ಕಾರ mahipati. Show all posts

Wednesday, 1 September 2021

ಮಹಿಮನಿಗೆ ನಮಸ್ಕಾರ ಬ್ರಹ್ಮಾನಂದದಿ ಸಮರಸವಾದ ಸಪ್ರೇಮಿಗೆ ನಮಸ್ಕಾರ ankita mahipati

ಮಹಿಮನಿಗೆ ನಮಸ್ಕಾರ ಬ್ರಹ್ಮಾನಂದದಿ ಸಮರಸವಾದ ಸಪ್ರೇಮಿಗೆ ನಮಸ್ಕಾರ ಕಾಮಕ್ರೋಧಗಳೆಂದು ನಿಷ್ಕಾಮದಿ ನೇಮದಲಿಹಗೆ ನಮಸ್ಕಾರ ಶಮೆದಮೆದಲಿ ಸಮದೃಷ್ಟಿಗೂಡಿಹ ಸ್ವಾಮಿ ಸೇವಿಗೆ ನಮಸ್ಕಾರ 1 

ಆಶಿ ತಿಳಿದು ನಿರಾಶೆಯೊಳಿಹ ಉದಾಸಿಗೆ ನಮಸ್ಕಾರ ಸುಮಿಲೊಂತಕಗೆ ನಮಸ್ಕಾರ ಸೂಸಿ ತುಳುಕದೆ ಕಾಸಿನಾಶೆಗೆ ಹರಿದಾಸರಿಗೆ ನಮಸ್ಕಾರ 2 

ಹೆಚ್ಚು ಕುಂದನೆ ರಚ್ಚಿಗೆ ತಾರದ ಸ್ವಚ್ಛಲಿಹಗೆ ನಮಸ್ಕಾರ ಕಚ್ಚಿ ಕೈ ಬಾಯಿಲಿ ಹುಚ್ಚಾಗದ ನಿಶ್ಚಲೇಂದ್ರಿಗೆ ನಮಸ್ಕಾರ ಮತ್ಸರಳಿದು ನಿರ್ಮತ್ಸರೊಳಿಹ ಸುನಿಶ್ಚಿತನಿಗೆ ನಮಸ್ಕಾರ ಮೆಚ್ಚಿ ಘನದೊಳು ಇಚ್ಛೆಲಿಹ ಮಹಾ ಎಚ್ಚರಿಗೆ ನಮಸ್ಕಾರ 3 

ನಾ ನೀನೆಂಬುವ ನುಡಿ ನೀಗಿನ ಅನುಭವಿನಗೆ ನಮಸ್ಕಾರ ಖೂನ ತಿಳಿದಿಹ ಸ್ವಾನುಭವದ ಸುಙÁ್ಞನಿಗೆ ನಮಸ್ಕಾರ ತಾನೆ ತಾನಾಗಿಹ ಘನದೊಳು ನಿರಾಶನಿಗೆ ನಮಸ್ಕಾರ ಮೌನದಲಿ ನಿಜಸ್ಥಾನದಲಿರುವ ಸುದಾನಿಗೆ ನಮಸ್ಕಾರ 4 

ಗರ್ವವಳಿದು ಸರ್ವವೇ ನಿಜ ತಿಳಿದ ನಿಗರ್ವಗೆ ನಮಸ್ಕಾರ ತೋರ್ವ ಕರದೊಳು ಅರ್ವನುಭವನಿರ್ವಾಣಿಗೆ ನಮಸ್ಕಾರ ನಿರ್ವಾಹದ ಸುಪರ್ವಾಣಿಯ ಫಲ ಇರ್ವನಿಗೆ ನಮಸ್ಕಾರ ಸರ್ವಸುಖ ಸುರಿಸಿದ ಮಹಿಪತಿ ಶ್ರೀಗುರುವಿಗೆ ನಮಸ್ಕಾರ 5

****