Showing posts with label ಕಲ್ಲು ಬೀಳಲಿ ಮೇಲ್ಮುಗಿಲ್ಲು ಬೀಳಲಿ prasannavenkata. Show all posts
Showing posts with label ಕಲ್ಲು ಬೀಳಲಿ ಮೇಲ್ಮುಗಿಲ್ಲು ಬೀಳಲಿ prasannavenkata. Show all posts

Monday, 11 November 2019

ಕಲ್ಲು ಬೀಳಲಿ ಮೇಲ್ಮುಗಿಲ್ಲು ಬೀಳಲಿ ankita prasannavenkata

by ಪ್ರಸನ್ನವೆಂಕಟದಾಸರು
ಕಲ್ಲು ಬೀಳಲಿ ಮೇಲ್ಮುಗಿಲ್ಲು ಬೀಳಲಿ ಫುಲ್ಲನಾಭನಿನ್ನ ಪಾದಪಲ್ಲವ ಛಾಯೆಯ ಬಿಡೆ ಪ.

ಶೂಲಕೋಟಿಗಂಜೆಕರವಾಳಘಾತಿಗಂಜೆವಿಶ್ವಪಾಲಕ ನಿನ್ನ ದಿವ್ಯನಾಮಮಾಲಿಕೆ ವಜ್ರಾಯುಧುಂಟು 1

ಪೋಕಜನಕಂಜೆ ದುರಿತಾನೀಕ ಬರಲಂಜೆ ಜಗದೇಕ ನಿನ್ನ ಶ್ರೀಪದಾರಾಧಕರ ಬಲ ಉಂಟೆನಗೆ 2

ಅಂದು ಅಪಮೃತ್ಯು ಬಂದೆನ್ನಂದಗೆಡಿಸಲು ಎನ್ನತಂದೆ ಪ್ರಸನ್ವೆಂಕಟೇಶ ಬಂದು ಕಾಯಿದ ಹವಣು ಬಲ್ಲೆ 3
*******