Showing posts with label ಲಂಬೋದರನೆ ನಿನ್ನ ನಂಬಿರುವೆನು ಯೆನ್ನ ಬೆಂಬಿಡದೆಲೆ ಪೊರೆ shyamasundara. Show all posts
Showing posts with label ಲಂಬೋದರನೆ ನಿನ್ನ ನಂಬಿರುವೆನು ಯೆನ್ನ ಬೆಂಬಿಡದೆಲೆ ಪೊರೆ shyamasundara. Show all posts

Saturday, 1 May 2021

ಲಂಬೋದರನೆ ನಿನ್ನ ನಂಬಿರುವೆನು ಯೆನ್ನ ಬೆಂಬಿಡದೆಲೆ ಪೊರೆ ankita shyamasundara

 ರಾಗ : ದುರ್ಗಾ  ತಾಳ : ದಾದರ 


ಲಂಬೋದರನೆ ನಿನ್ನ ।

ನಂಬಿರುವೆನು ಯೆನ್ನ ।

ಬೆಂಬಿಡದೆಲೆ ಪೊರೆ ।

ಅಂಬಿಕಾ ತನಯನೆ ।। ಪಲ್ಲವಿ ।\


ಖೇಶನೆ ಎನ್ನನು- ।

ದಾಸಿನ ಮಾಡದೆ ।

ಲೇಸಾಗಿ ಪೋಷಿಸು ।

ವಾಸುಕೀ ಭೂಷಣ ।। ಚರಣ ।।


ನಾಕೇಶ ವಂದಿತ ।

ಆಖು ವಾಹನ ಎನ್ನ ।

ಕಾಕುಮತಿ ಕಳೆದು ।

ನೀ ಕಾಯೋ ಕರುಣದಿ ।। ಚರಣ ।।


ಶ್ರೀ ಮನೋಹರ ಸ್ವಾಮಿ ।

ಶ್ಯಾಮಸುಂದರ ಸಖ ।

ಕಾಮಹರ ಸುತ ।

ಸಾಮಜ ವದನನೆ ।। ಚರಣ ।।

***

ವಿವರಣೆ-ಆಚಾರ್ಯ ನಾಗರಾಜು ಹಾವೇರಿ,ಗುರು ವಿಜಯ ಪ್ರತಿಷ್ಠಾನ

ಲಂಬೋದರನೆ = ದೊಡ್ಡ ಹೊಟ್ಟೆ ಉಳ್ಳವನೆ 

ಅಂಬಿಕಾ ತನಯ = ಶ್ರೀ ಪಾರ್ವತೀ ದೇವಿಯ ಮಗ 

ಖೇಶನೆ = ಆಕಾಶಕ್ಕೆ ಅಭಿಮಾನಿಯಾದ ಶ್ರೀ ಗಣಪತಿ 

ನಾಕೇಶ = ಶ್ರೀ ಇಂದ್ರದೇವರು 

ಆಖು ವಾಹನ = ಮೂಷಕ ವಾಹನ 

ಕಾಮಹರಸುತ = ಶಿವ ಪುತ್ರ

****