ಅಸೂರಿ ರಾಮಸ್ವಾಮಿ ಅಯ್ಯಂಗಾರ್ ankita ramadasa
ದಯವ ಮಾಡೋ ಎನ್ನ ಭಯವ ಬಿಡಿಸೋ ಪ
ಅಭಯ ಪ್ರದಾಯಕ ರಥಾಂಗ ಮಾವಿನಕೆರೆರಂಗಾ ಅ.ಪ
ಮುನಿವರರೆಲ್ಲ ನಿನ್ನ ಅನುದಿನ ಭಜಿಪರೋ ತನು ಮನ ಧನಗಳ ನಿನಗೊಪ್ಪಿಸಲು ಘನ ತಪೋಶಕ್ತಿಯಿಂದ ಮನವೊಲಿಸುವರು ನಿನ್ನಾ ಅನಿತನರಿಯದೆನ್ನೊಳು ಸನುಮತದಿಂದಲಿಯೆನ್ನೊಳು 1
ಕಾಮ ಕ್ರೋಧಂಗಳಿಂ ಭ್ರಾಮಕನಾದೆನ್ನ ನೇಮವೊಂದಿಲ್ಲ ನಿನ್ನ ನಾಮಂಗಳುಲಿಯೆ ನಾ ಭೂಮಿಯೊಳನೇಕ ಜನ್ಮನಾಮದಿಂದೆ ಜನಿಸಿ ಪಾಪ ಕರ್ಮವ ತಳೆದೆಂ ರಾಮದಾಸಾರ್ಚಿತನೆ ಯೆನ್ನೊಳು 2
ಕರಿಯ ಪೊರೆದೆ ಹರೀ ತರಳಗೊಲಿದೇ ಶೌರಿ ದುರುಳನ ಪೊರೆದೆ ಉದಾರಿ ಸರಸಿಜಾಕ್ಷ ಮುರಾರಿ ಸುರಪತೆ ರಕ್ಕಸಾರಿ ಕರುಣಿಸೋ ಸೂತ್ರಧಾರಿ ಕರವಪಿಡಿದು ಯೆನ್ನೊಳು 3
***